ETV Bharat / state

ಮುಂದಿನ ಬಾರಿ ಸಚಿವ ಸ್ಥಾನ ನೀಡುವುದಾಗಿ ಸಿಎಂ ಹೇಳಿದ್ದಾರೆ: ಶಾಸಕ ರಾಜುಗೌಡ - ಸಂಪುಟ ಸಚಿವರ ಪಟ್ಟಿ

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸುರಪುರ ಬಿಜೆಪಿ ಶಾಸಕ ರಾಜುಗೌಡಗೆ ಸಚಿವ ಸ್ಥಾನ ಕೈ ತಪ್ಪಿದೆ. ಈ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

mla-rajugowda-react-about-his-name-in-ministerial-post
ಶಾಸಕ ರಾಜುಗೌಡಗೆ ಕೃತಪ್ಪಿದ ಸಚಿವ ಸ್ಥಾನ
author img

By

Published : Aug 4, 2021, 12:05 PM IST

Updated : Aug 4, 2021, 12:12 PM IST

ಬೆಂಗಳೂರು: ಮುಂದಿನ ಬಾರಿ ಅವಕಾಶ ನೀಡುವುದಾಗಿ ಸಿಎಂ ಕರೆ ಮಾಡಿ ತಿಳಿಸಿದ್ದಾರೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ರಾಜು ಗೌಡ ಹೇಳಿದ್ದಾರೆ.

ನನ್ನ ಪ್ರೀತಿಸುವವರಿಗೆ ಕೈ ಮುಗಿದು ಹೇಳ್ತೀನಿ. ಯಾರೂ ಬೇಜಾರು ಆಗಬೇಡಿ. ನೀವು ನನ್ನ ಶಾಸಕನಾಗಿ ಆಯ್ಕೆ ಮಾಡಿದ್ದೀರಾ. ಪಕ್ಷ ಹೇಳಿದಂತೆ ಮುನ್ನಡೆಯಲಿದ್ದೇನೆ ಎಂದು ಅವರು ತಿಳಿಸಿದರು.

ಸಚಿವ ಸ್ಥಾನ ಕೈತಪ್ಪಿದ ಕುರಿತು ಶಾಸಕ ರಾಜುಗೌಡ ಪ್ರತಿಕ್ರಿಯೆ

ಸಚಿವರ ಪಟ್ಟಿಯಲ್ಲಿ ಹೆಸರು ಇರುತ್ತೆ, ಆದ್ರೆ ರಾಜಭವನಕ್ಕೆ ಹೋಗುವಾಗ ಹೆಸರು ಇರಲ್ಲ. ಇದು ಮೊದಲನೇ ಸಲವೇನೂ ಅಲ್ಲ,ನನಗೆ ಇವೆಲ್ಲಾ ಅಭ್ಯಾಸ ಆಗಿದೆ. ಸಚಿವರಾಗುವವರಿಗೆ ಶುಭಾಶಯ ಸಲ್ಲಿಸುತ್ತೇನೆ. ಮತ್ತೆ ಸಚಿವ ಸ್ಥಾನ ನಿರೀಕ್ಷೆಯಲ್ಲಿ ನಾನಿಲ್ಲ. ಮಾಧ್ಯಮದಲ್ಲಿ ಹೆಸರು ಬಂದಾಗ ಸಂತಸವಾಗಿತ್ತು ಎಂದರು.

ನನ್ನ ತಾಯಿ ಎರಡು ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಕಳೆದ ಬಾರಿಯೇ ಸಚಿವನಾಗೋ ಭರವಸೆ ಇತ್ತು. ಯಡಿಯೂರಪ್ಪ ಅವರು ನನಗಾಗಿ ಕಣ್ಣೀರು ಇಟ್ಟರು. ನನಗೆ ಲಾಬಿ ಮಾಡೋ ಅವಶ್ಯಕತೆ ಇಲ್ಲ. ಯಾವಾಗಲೂ ನಾನು ನೇರವಾಗಿಯೇ ಮಾತಾಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: Live Update: ಸಂಪುಟದಲ್ಲಿ ವಿಜಯೇಂದ್ರಗೆ ಇಲ್ಲ ಸ್ಥಾನ, ಬಿಎಸ್​ವೈ ನಿವಾಸಕ್ಕೆ ತೆರಳಿದ ಸಿಎಂ ಬೊಮ್ಮಾಯಿ

Last Updated : Aug 4, 2021, 12:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.