ಬೆಂಗಳೂರು : ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸುರಪುರ ಬಿಜೆಪಿ ಶಾಸಕ ರಾಜೂಗೌಡ, ಸರ್ಕಾರ ನಡೆಸುವುದಕ್ಕೆ ನಮ್ಮ ನಾಯಕರಿಗೆ ಯೋಜನೆ ಇರುತ್ತದೆ. ಅವರ ಕೆಲಸ ಅವರು ಮಾಡುವುದಕ್ಕೆ ಬಿಡಬೇಕು ಎಂದು ಹೇಳಿದರು.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತಮವಾದ ಸರ್ಕಾರವನ್ನು ನಡೆಸಲು ಬೇಕಾದಂತಹ ಎಲ್ಲಾ ರೀತಿಯ ಯೋಜನೆಗಳು ಸಿಎಂ ಸೇರಿದಂತೆ ರಾಜಕೀಯ ಮುಖಂಡರಲ್ಲಿ ಇರುತ್ತದೆ.
ಇದರ ನಡುವೆ ನಾವು ಆ ಕೆಲಸ ಮಾಡಿ, ಈ ಕೆಲಸ ಮಾಡಿ ಎಂದು ಒತ್ತಡ ಹೇರುವ ಬದಲು ಏನೇ ಇದ್ದರೂ ನಾವೆಲ್ಲ ಹೋಗಿ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಬೇಕೆಂದು ನಾಯಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ನಾನು ಯಾರ ಗುಂಪಿಗೂ ಸೇರಲ್ಲ. ಯಾವುದೇ ಸಲಹೆ ಕೊಡಲ್ಲ. ಕ್ಷೇತ್ರದಲ್ಲಿ ಮಾಡುವುದಕ್ಕೆ ಬಹಳಷ್ಟು ಕೆಲಸ ಇವೆ. ದೆಹಲಿಗೆ ಹೋಗುವುದಿಲ್ಲ. ನನ್ನ ಕ್ಷೇತ್ರ ಸುರಪುರಕ್ಕೆ ಹೋಗುತ್ತೇನೆ ಎಂದರು.
ಕೋವಿಡ್ ಪರಿಹಾರದ ಚೆಕ್ ಬೌನ್ಸ್ ಆಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಕ್ಷೇತ್ರದ ಎರಡು ಕಡೆ ಚೆಕ್ ಬೌನ್ಸ್ ಆಗಿರುವುದು ಗಮನಕ್ಕೆ ಬಂದಿದೆ. ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ತಿಳಿಸಿದ್ದೇನೆ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ