ETV Bharat / state

ಈ ಬಜೆಟ್ ಸುಳ್ಳಿನ ಕಂತೆ: ಪ್ರಕಾಶ್ ರಾಥೋಡ್

ಈ ಬಾರಿಯ ಬಜೆಟ್​ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಕ್ಕೂ ಅನ್ಯಾಯವಾಗಿದೆ. ಬಜೆಟ್​ನಲ್ಲಿ ಎಲ್ಲಾ ಕಡಿಮೆ ಮಾಡಿ ಸಿಎಂ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರಕಾಶ್ ರಾಥೋಡ್ ಟೀಕಿಸಿದರು.

Prakash rathod
ಪ್ರಕಾಶ್ ರಾಥೋಡ್
author img

By

Published : Mar 23, 2021, 6:25 PM IST

ಬೆಂಗಳೂರು: ಎಂಟು ಸಾರಿ ಬಜೆಟ್ ಮಂಡಿಸಿರುವ ಸಿಎಂ ಯಡಿಯೂರಪ್ಪ ಒಂದು ಕಳಪೆ ಬಜೆಟ್ ಮಂಡಿಸಿದ್ದಾರೆ ಎಂದು ಎಂಎಲ್​ಸಿ ಪ್ರಕಾಶ್ ರಾಥೋಡ್ ಟೀಕಿಸಿದರು.

ವಿಧಾನ ಪರಿಷತ್​ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ಸುಳ್ಳಿನ ಕಂತೆ ಹಾಗೂ ಬ್ಲಾಕ್​ ಬಜೆಟ್. ಈ ಬಜೆಟ್ ವಿರೋಧಿಸುತ್ತೇನೆ. ಸಾಲದ ಬಜೆಟ್ ಇದಾಗಿದೆ. ಹಿಂದೆ ಅವರು ‌ನೀಡಿದ್ದ ಬಜೆಟ್​ನ ಖರ್ಚು ವೆಚ್ಚದ ಮಾಹಿತಿ ನೀಡಿಲ್ಲ. ಆರು ವಲಯ ಮಾಡಿ ಬಜೆಟ್ ಮಂಡಿಸಿದ್ದು, ಪಾರದರ್ಶಕತೆಯ ಕೊರತೆ ಕಾಣುತ್ತಿದೆ. ದೇಶದ ಜಿಡಿಪಿ 7.5ರಷ್ಟು ಕುಸಿದಿದೆ, ಕುಸಿಯುತ್ತಿದೆ. ಹೀಗಿರುವಾಗ ಜಿಡಿಪಿ ಹೆಚ್ಚಳ ಮಾಡುತ್ತೇವೆ ಎಂದಿದ್ದಾರೆ ಎಂದರು.

ವಿಧಾನ ಪರಿಷತ್​ ಕಲಾಪ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಕ್ಕೂ ಅನ್ಯಾಯವಾಗಿದೆ. ಬಜೆಟ್​ನಲ್ಲಿ ಎಲ್ಲಾ ಕಡಿಮೆ ಮಾಡಿ ಸಿಎಂ ಜನರ ದಾರಿ ತಪ್ಪಿಸುತ್ತಿದ್ದಾರೆ. ಮುಚ್ಚುಮರೆ ಸರ್ಕಾರ ನಡೆಯುತ್ತಿದೆ. ಮುಚ್ಚಿಟ್ಟಿದ್ದು ಜಾಸ್ತಿ, ಬಿಚ್ಚಿಟ್ಟಿದ್ದು ಕಡಿಮೆ. ಎಲ್ಲಾ ವಲಯಕ್ಕೂ ಅನುದಾನ ಕಡಿಮೆ ಮಾಡಲಾಗಿದೆ. ಸಂಕಷ್ಟದಲ್ಲಿರುವ ನೂರಾರು ರೈತರಿಗೆ ಅನ್ಯಾಯ ಮಾಡಲಾಗಿದೆ. ಬಜೆಟ್ ಗಾತ್ರ ತಗ್ಗಿಸಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡಲಾಗಿದೆ. ಎಸ್‌ಸಿ, ಎಸ್ಟಿಗಳಿಗೆ ಅನ್ಯಾಯವಾಗುತ್ತಿದೆ. ಅನುದಾನ ನೀಡಿದ್ದನ್ನೂ ವಾಪಸ್‌ ಪಡೆಯಲಾಗಿದೆ. ಹೇಳುವುದು ಒಂದು, ಮಾಡುವುದು ಮತ್ತೊಂದು ಆಗಿದೆ ಎಂದರು.

ಶೇ. 2.5ರಷ್ಟಿದ್ದ ಸಾಲದ ಹೊರೆಯನ್ನು ಶೇ. 4ಕ್ಕೆ ಏರಿಸಿ ಜನರಿಗೆ ಆರ್ಥಿಕ ಹೊಡೆತ ನೀಡುತ್ತಿದ್ದೀರಿ. ಸಾಲ ಹೆಚ್ಚಿಸುವ ಬಜೆಟ್ ನೀಡಿ, ಉತ್ತಮ ಬಜೆಟ್ ಎನ್ನುತ್ತಿದ್ದೀರಿ. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಹಣ ಬಂದಿಲ್ಲ. ಕೇಂದ್ರದಿಂದ ಬರಬೇಕಿದ್ದ ಹಣ ಶೇ. 52 ಮಾತ್ರ ಬಂದಿದೆ. ಜಿಎಸ್ಟಿ ಪರಿಹಾರ ಸರಿಯಾಗಿ ಸಿಕ್ಕಿಲ್ಲ. ಸರ್ವಪಕ್ಷ ನಿಯೋಗ ತೆರಳಿ ನಮ್ಮ ಜಿಎಸ್ಟಿ ಪಾಲು ಕೇಳೋಣ ಎಂದರು.

ಅಲ್ಲದೇ ಹಿಂದುಳಿದ ವರ್ಗಕ್ಕೆ ದೊಡ್ಡ ಅನ್ಯಾಯವಾಗಿದೆ. ಬಜೆಟ್ ಅನುದಾನದಲ್ಲಿ ಶೇ. 24ರಷ್ಟು ಮಾತ್ರ ಅನುದಾನ ಬಿಡುಗಡೆ ಆಗಿದೆ. ಎಲ್ಲಾ ಇಲಾಖೆಯದ್ದೂ ಇದೇ ಸ್ಥಿತಿ ಇದೆ. ಶೇ. 50ರಷ್ಟು ಅನುದಾನವೂ ಬಿಡುಗಡೆ ಆಗಿಲ್ಲ. ಬಜೆಟ್ ಮೌಲ್ಯ ಕಳೆಯುತ್ತಿದ್ದಾರೆ. ಕೇಂದ್ರದ ಯೋಜನೆ ಬೇಟಿ ಬಚಾವೋ, ಬೇಟಿ ಪಡಾವೋ, ಆವಾಸ್ ಯೋಜನೆ, ಸ್ವಚ್ಛ ಭಾರತ್ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಅನುದಾನ ನೀಡಿಲ್ಲ. ನಯಾ ಪೈಸೆ ನೀಡಿಲ್ಲ. ಹಿಂದುಳಿದ ವರ್ಗಕ್ಕೆ ಸಾಕಷ್ಟು ಅನ್ಯಾಯವಾಗಿದೆ ಎಂದರು.

ಕೊರೊನಾಗೆ 5,700 ಕೋಟಿ ವೆಚ್ಚ ಆಗಿದೆ ಎಂದಿದ್ದೀರಿ. ನೀವೇ ನೀಡಿದ ಮಾಹಿತಿಯಂತೆ ನಾವು ಸಂಗ್ರಹಿಸಿದ ಮಾಹಿತಿ ಒಟ್ಟು 4,330 ಕೋಟಿ ಖರ್ಚಾಗಿದೆ. ಸುಳ್ಳು ಮಾಹಿತಿಯನ್ನು ಸರ್ಕಾರ ನೀಡಿದೆ. ಸರ್ಕಾರ ಯಾವ ಕಾರಣಕ್ಕೂ ತನ್ನ ಮಾತು ಉಳಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.