ETV Bharat / state

ದುಷ್ಟರ ಸಂಹಾರ ಆಗಿ ದೇಶಕ್ಕೆ - ರಾಜ್ಯಕ್ಕೆ- ಪಕ್ಷಕ್ಕೆ ಒಳ್ಳೆದಾಗಬೇಕು: ಶಾಸಕ ಯತ್ನಾಳ್

ರಾಮಾಯಣದಲ್ಲಿ ರಾವಣನ ಸಂಹಾರ ಆಗಬೇಕಾದ್ರೆ ಕಾಲ ಕೂಡಿ ಬರಬೇಕಾಯ್ತು. ಹಾಗೇ ಕೌರವರ ಸಂಹಾರಕ್ಕೂ ಒಂದು ಕಾಲ ಕೂಡಿ ಬಂತು.‌ ಎಲ್ಲದಕ್ಕೂ ಒಂದು ಸಮಯ ಬರುತ್ತದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

yathnal
ಬಸವನಗೌಡ ಪಾಟೀಲ್ ಯತ್ನಾಳ್
author img

By

Published : Jun 30, 2021, 2:50 PM IST

Updated : Jun 30, 2021, 4:13 PM IST

ಬೆಂಗಳೂರು: ರಾಜ್ಯದಲ್ಲಿ ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋದ ಉದಾಹರಣೆ ಇದೆ. ಈ ರೀತಿ ಆಗಬಾರದು ಎಂಬುವುದು ನಮ್ಮ ಆಶಯ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾರ್ಮಿಕವಾಗಿ ನುಡಿದಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಆತ್ಮವಿಶ್ವಾಸ ಇದೆ. ಅದು ಫಲ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಯತ್ನಾಳ್ ಪ್ರತಿಕ್ರಿಯೆ

ದುಷ್ಟರ ಸಂಹಾರ ಆಗಬೇಕು. ದೇಶಕ್ಕೆ, ರಾಜ್ಯಕ್ಕೆ, ಪಕ್ಷಕ್ಕೆ ಒಳ್ಳೆಯದಾಗಬೇಕು. ರಾಮಾಯಣದಲ್ಲಿ ರಾವಣನ ಸಂಹಾರ ಆಗಬೇಕಾದ್ರೆ ಕಾಲ ಕೂಡಿ ಬರಬೇಕಾಯ್ತು. ಹಾಗೇ ಕೌರವರ ಸಂಹಾರಕ್ಕೂ ಒಂದು ಕಾಲ ಕೂಡಿ ಬಂತು.‌ ಆದಿಲ್ ಶಾಹಿ, ಟಿಪ್ಪು ಸಂತತಿ ಮುಂದೇನಾಯ್ತು?. ಎಲ್ಲದಕ್ಕೂ ಒಂದು ಸಮಯ ಬರುತ್ತದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ:

ನಾಯಕತ್ವ ಬದಲಾವಣೆ ಇಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ನಾನು ಮುಖ್ಯಮಂತ್ರಿ ಮಗ ಆಗಿದ್ರೆ ನಾನು ಹಾಗೆ ಹೇಳ್ತಿದ್ದೆ, ರಾಜಕಾರಣದಲ್ಲಿ ಏನೆಲ್ಲಾ ನಡೆಯಲ್ಲ. ರಾಜಕಾರಣದಲ್ಲಿ ಎಲ್ಲವೂ ನಡೆಯುತ್ತದೆ, ಅವರ ಮಗ ಆಗಿರೋದ್ರಿಂದ ಅವರು ಹೇಳ್ತಾರೆ‌. ಏನೇನೋ ಮಾಡ್ತಾರೆ, ಅದರ ಪರಿಣಾಮ ಮುಂದೆ ಆಗಲಿದೆ ಎಂದರು. ದುಷ್ಟರಿಗೆ ಒಂದು ಕಾಲ ಇದ್ದೇ ಇರುತ್ತದೆ. ಕ್ಷಮಾಪಣೆ ಇರುತ್ತದೆ. ಆದರೆ, ಪದೇ ಪದೆ ತಪ್ಪು ಮಾಡಬಾರದು ಎಂದು ಬಿಎಸ್ ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದು ಪ್ರಧಾನಮಂತ್ರಿ ಬಂದಂಗೆ ಆಯ್ತು:

ಇನ್ನು ಅರುಣ್ ಸಿಂಗ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅರುಣ್ ಸಿಂಗ್ ಭೇಟಿ ರಿಸಲ್ಟ್ ಏನು ಎಂಬುದು ಗೊತ್ತಿತ್ತು. ವಿಮಾನ ನಿಲ್ದಾಣದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದರು, ಹೋಗುವಾಗಲೂ ಸೂರ್ಯ ಚಂದ್ರನಂತೆ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದಾರೆ. ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದು ಪ್ರಧಾನ ಮಂತ್ರಿ ಬಂದಂಗೆ ಆಯಿತು.

ಯಾರು ಖುರ್ಚಿ ಉಳಿಸಿಕೊಳ್ಳಬೇಕೋ ಅವರು ಅರೆಂಜ್ ಮೆಂಟ್ ಮಾಡ್ತಾರೆ. ಕೆಲವರು ಯಡಿಯೂರಪ್ಪ ಅವರೇ ನಮ್ಮ ನಾಯಕ ಅಂತ ಹೊರಗಡೆ ಹೇಳ್ತಾರೆ. ಒಳಗಡೆ ಹೋಗಿ ಯಾವಾಗ ಬೇಕಾದರೂ ಸಿಎಂನ ಚೇಂಜ್ ಮಾಡಿ ಅಂತಾರೆ. ಬೇಗ ಚೇಂಜ್ ಮಾಡಿ ಅಂತ ಒಳಗೋಗಿ ಹೇಳ್ತಾರೆ, ಹೊರಗೆ ಬಂದು ಜೈಕಾರ ಹಾಕ್ತಾರೆ. ಆ ತರಹದ ಮನುಷ್ಯ ನಾನಲ್ಲ ಎಂದು ಸ್ವಪಕ್ಷಿಯ ಕೆಲವು ಸಚಿವರು, ಶಾಸಕರ ವಿರುದ್ಧ ಕಿಡಿಕಾರಿದರು.

ನಾನು ಯಾವುದೇ ದೂರು ಕೊಡುವ ಅವಶ್ಯಕತೆ ಇಲ್ಲ. ಅವರಿಗೆ ಇಂಟಲಿಜೆನ್ಸ್, ಐಎಎಸ್, ಐಪಿಎಸ್ ಅಧಿಕಾರಿಗಳು, ಶಾಸಕರು, ಕಾರ್ಯಕರ್ತರು ಇದ್ದಾರೆ. ನಿಮ್ಮ ಮುಂದೆ ಹೇಳುತ್ತಾರೆ ಅವರೇ ನಮ್ಮ ನಾಯಕರು ಎಂದು ಆದರೆ ಹಿಂದೆ ಮಾತನಾಡುತ್ತಾ, ನಾಯಕತ್ವ ಬದಲಾವಣೆ ಮಾಡದೇ ಇದ್ದರೆ ಬಿಜೆಪಿ ಕರ್ನಾಟಕದಲ್ಲಿ ಮುಗಿದು ಹೋಗುತ್ತದೆ ಎನ್ನುತ್ತಾರೆ. ಆದಿಲ್ ಶಾಹಿ ,ಟಿಪ್ಪು, ಮೊಗಲ್ ಮನೆತನ ನಾಶ ಆಗಿಲ್ವಾ ಇವರಾವ ಲೆಕ್ಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ಅವರಿಗೆ ಬಹುಪರಾಕ್ ಹಾಕೋದೇ ಅವರ ಕೆಲಸ:

ವೀರಶೈವ ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್​ನಲ್ಲಿ ವಿಜಯೇಂದ್ರ ಏಜೆಂಟ್ ಇದ್ದಾರೆ ಎಂದ ಅವರು, ವಿಜಯೇಂದ್ರ ಎಲ್ಲರನ್ನೂ ಮ್ಯಾನೇಜ್ ಮಾಡ್ತಾರೆ. ಮೀಡಿಯಾದಲ್ಲಿ ಜೈಕಾರ ಬಹುಪರಾಕ್ ಹಾಕೋದಕ್ಕೆ ಕೆಲವರನ್ನು ಅಕ್ಕ ಪಕ್ಕ ಇಟ್ಕೊಂಡಿದ್ದಾರೆ. ದಿನ ಬೆಳಗಾದರೆ ಅಕ್ಕ - ಪಕ್ಕ ಇರುವವರದ್ದು ಅದೇ ಕೆಲಸ. ವಿಜಯೇಂದ್ರ ಅವರಿಗೆ ಬಹುಪರಾಕ್ ಹಾಕೋದೇ ಅವರ ಕೆಲಸ ಎಂದರು.

ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ:

ಪಂಚಮಸಾಲಿ ಮೂರನೇ ಮಠ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪಂಚಮಸಾಲಿ ಹೋರಾಟದಲ್ಲಿ ನಗ್ನ ಪ್ರದರ್ಶನ ಮಾಡಿದ ರಾಜಕಾರಣಿ ಮತ್ತೆ ಸಂಪೂರ್ಣ ನಗ್ನರಾಗಿದ್ದಾರೆ. ನಮ್ಮ ರಾಜಕೀಯಕ್ಕೆ ಈ ಹೋರಾಟ ಉಪಯೋಗ ಮಾಡಿದ್ದಾರೆ. ಅವರು ಒಬ್ಬ ಸಚಿವ, ದೊಡ್ಡ ಉದ್ಯಮಿಯಾಗಿದ್ದಾರೆ ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಯಾವ ಪರೀಕ್ಷೆಯನ್ನೂ ಬರೆದಿಲ್ಲ :

ಪರೀಕ್ಷೆ ಬರೆದಿದ್ದೇನೆ ಎಂಬ ಸಚಿವ ಸಿ.ಪಿ. ಯೋಗೀಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ನಾನು ಯಾವ ಪರೀಕ್ಷೆ ಬರೆದಿಲ್ಲ. ಯೋಗೇಶ್ವರ್ ಭೇಟಿ ಯಾವ ರಾಜಕೀಯ ಉದ್ದೇಶ ಇಲ್ಲ. ಸಿಪಿವೈ ದೆಹಲಿಗೆ ಏನೆಲ್ಲ ಉತ್ತರ ಪತ್ರಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಕಾಗದದ ಉತ್ತರವೋ ಬೇರೆ ಉತ್ತರವೋ ತಿಳಿದಿಲ್ಲ. ಆದರೆ ದುಷ್ಟರ ಸಂಹಾರ ಆಗಬೇಕು, ದೇಶಕ್ಕೆ- ರಾಜ್ಯಕ್ಕೆ- ಪಕ್ಷಕ್ಕೆ ಒಳ್ಳೆಯದಾಗಬೇಕು ಎಂದು ಹೇಳಿದ್ರು.

Last Updated : Jun 30, 2021, 4:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.