ETV Bharat / state

ಸರ್ಕಾರದ ಪಟಾಕಿ ನಿಷೇಧ ನಿರ್ಧಾರ ಸ್ವಾಗತಾರ್ಹ : ಶಾಸಕ ಅರವಿಂದ ಲಿಂಬಾವಳಿ

author img

By

Published : Nov 6, 2020, 10:42 PM IST

ದೀಪಾವಳಿ ವೇಳೆ ಪಟಾಕಿ ನಿಷೇಧಿಸಿರುವ ಸರ್ಕಾರದ ನಿರ್ಧಾರವನ್ನು ಶಾಸಕ ಅರವಿಂದ ಲಿಂಬಾವಳಿ ಸ್ವಾಗತಿಸಿದ್ದಾರೆ.

MLA Aravindh Limbavali Reaction about Crackers Ban
ಶಾಸಕ ಅರವಿಂದ ಲಿಂಬಾವಳಿ.

ಬೆಂಗಳೂರು : ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿರುವುದು ಸ್ವಾಗತಾರ್ಹ ಎಂದು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಮಹದೇವಪುರ ಕ್ಷೇತ್ರದಲ್ಲಿ ಗ್ರಾಮೀಣ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧ ಮಾಡಿರುವುದು ಶ್ಲಾಘನೀಯ. ಪಟಾಕಿ‌ ಸಿಡಿಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಶಾಶ್ವತವಾಗಿ ಪಟಾಕಿ ಉತ್ಪಾದನೆ ಮತ್ತು ಸಿಡಿಸುವುದನ್ನು ನಿಷೇಧಿಸಬೇಕು ಎಂದರು.

ಶಾಸಕ ಅರವಿಂದ ಲಿಂಬಾವಳಿ

ಮಹದೇವಪುರ ಕ್ಷೇತ್ರದಾದ್ಯಂತ ನಮ್ಮ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸುತ್ತಿದ್ದರು. ನಾನು ಶಾಸಕನಾದ ನಂತರ ಕ್ಷೇತ್ರದ ಯಾವುದೇ ನನ್ನ ಕಾರ್ಯಕ್ರಮಗಳಲ್ಲಿ‌ ಪಟಾಕಿ ಸಿಡಿಸಬಾರದೆಂದು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.