ಮಹದೇವಪುರ : ಲಾಕ್‌ಡೌನ್ ಜಾರಿಯಾದ ನಂತರ ಕ್ಷೇತ್ರದ ಜನತೆಯ ಆರೋಗ್ಯ ದೃಷ್ಟಿಯಿಂದ ಹಗಲಿರುಳು ಶ್ರಮಿಸಲಾಗುತ್ತಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಆಹಾರ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಲ್ಲಿ ಪಕ್ಷಾತೀತಾವಾಗಿ ಕೆಲಸ ಮಾಡಿದ್ದೇವೆ. ಕ್ಷೇತ್ರ ವ್ಯಾಪ್ತಿ ಮೊದಲ ಹಂತದಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಜತೆಗೂಡಿ 24,000 ಆಹಾರ ಸಾಮಾಗ್ರಿಗಳು ಮತ್ತು ಬಿಪಿಎಲ್ ಕಾರ್ಡುಗಳು ಇಲ್ಲದ 50 ಸಾವಿರ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಗಿದೆ ಎಂದರು.
ಪಿಜಿಗಳಲ್ಲಿ ನೆಲಸಿರುವರಿಗೆ, ದಿನಗೂಲಿ ನೌಕರರಿಗೆ, ನಿರ್ಗತಿಕರಿಗೆ 18,9400 ಆಹಾರ ಪ್ಯಾಕೇಟ್ ವಿತರಣೆ, ಪೊಲೀಸ್ ಸಿಬ್ಬಂದಿ, 100ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಆರೋಗ್ಯ ಸಹಾಯಕರು ಮತ್ತು ಪೌರ ಕಾರ್ಮಿಕರಿಗೆ 4,800 ಸ್ಯಾನಿಟೈಸರ್‌ಗಳು 12,000 ಮಾಸ್ಕ್ ವಿತರಣೆ ಮಾಡಲಾಗಿದೆ. ಇನ್ನೂ 15 ಸಾವಿರ ಸ್ಯಾನಿಟೈಸರ್ ಹಾಗೂ 80 ಸಾವಿರ ಮಾಸ್ಕ್ ಗಳನ್ನ ಖರೀದಿಸಿ ಮಹಿಳಾ ಸ್ವಸಹಾಯ ಗುಂಪುಗಳ ವತಿಯಿಂದ ವಿತರಿಸುವ ಕ್ರಮಕೈಗೊಳ್ಳಲಾಗಿದೆ ಎಂದರು.
ರಾಜ್ಯ ಸರ್ಕಾರದಿಂದ ವಲಸೆ ಕಟ್ಟಡ ಕಾರ್ಮಿಕರಿಗೆ ಬಂದ 23,224 ದಿನಸಿ ಕಿಟ್‌ಗಳನ್ನೂ ಅಧಿಕಾರಿಗಳ ಮೂಲಕ ವಿತರಿಸಲಾಗುತ್ತಿದೆ. ಅಧಿಕಾರಿಗಳು ವಿತರಿಸುತ್ತಿರುವ ಕಿಟ್‌ಗಳಲ್ಲಿ ಈರುಳ್ಳಿ ಆಲೂಗಡ್ಡೆ ಇಲ್ಲದಿರುವುದು ನಮ್ಮ ಗಮನಕ್ಕೆ ಬಂದ ನಂತರ, ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಖರೀದಿಸಿ ಕಿಟ್‌ಗಳಲ್ಲಿ ಸೇರಿಸಿ ವಿತರಿಸಲು ಸೂಚನೆ ನೀಡಲಾಗಿದೆ. 12 ಟನ್ ಈರುಳ್ಳಿ ಹಾಗೂ 2 ಟನ್ ಆಲೂಗಡ್ಡೆ ಖರೀದಿ ಮಾಡಿದ್ದೇವೆ ಎಂದರು.
ಎಂಟು ಅನಾಥಾಶ್ರಮ, ವೃದ್ದಾಶ್ರಮ, ಭಿಕ್ಷುಕರ ಪುನರ್ವಸತಿ, ಏಡ್ಸ್ ಪೀಡಿತರ ಸೇವಾಶ್ರಮಗಳಿಗೆ 1570 ಕಿಟ್‌ಗಳನ್ನು ಇನ್ಫೋಸಿಸ್ ಮತ್ತು ಬಯೋಕಾನ್ ಸಂಸ್ಥೆಗಳಿಂದ ಇಸ್ಕಾನ್ ಸಂಸ್ಥೆಗೆ ನೀಡಲಾದ ಆಹಾರದ ಕಿಟ್‌ಗಳನ್ನೂ ವಿತರಿಸಲಾಗುತ್ತಿದೆ ಎಂದರು.