ಬೆಂಗಳೂರು: ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ವಿರುದ್ದ ಬೆಳಗಾವಿ ಶಾಸಕ ಅಭಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆರೆಪೀಡಿತ ಬೆಳಗಾವಿಯ ಅಭಿವೃದ್ದಿಗೆ ಸರ್ಕಾರ ₹125 ಕೋಟಿ ಬಿಡುಗಡೆ ಮಾಡಿದೆ. ಸ್ವತ: ಸಿಎಂ ಯಡಿಯೂರಪ್ಪ ಈ ಸಂಬಂಧ ಆದೇಶ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕೂಡಾ ಈ ಬಗ್ಗೆ ಆದೇಶಿಸಿದ್ದಾರೆ. ಆದರೂ ಗೈಡ್ ಲೈನ್ ಬದಲಾವಣೆ ಮಾಡದೇ ನಗರಾಭಿವೃದ್ದಿ ಕಾರ್ಯದರ್ಶಿ ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರವಾಹ ಪರಿಸ್ಥಿತಿಯಲ್ಲಿ ರಸ್ತೆ, ಮೂಲಸೌಕರ್ಯ ಹಾನಿಗೊಳಗಾಗಿವೆ. ಈ ಸಂಬಂಧ ಮಾರ್ಗಸೂಚಿ ಸಡಿಲಿಸುವಂತೆ ಸಿಎಂರಲ್ಲಿ ಮನವಿ ಮಾಡಿದ್ದೆವು. ಈ ಸಂಬಂಧ ಸಿಎಂ ಪರಿಶೀಲನಾ ಸಭೆಯಲ್ಲಿ ಗೈಡ್ ಲೈನ್ಸ್ ಬದಲಾಯಿಸುವಂತೆ ಸೂಚನೆ ನೀಡಿದ್ದರು. ಆದರೂ ಅಧಿಕಾರಿ ಅಜುಂ ಪರ್ವೇಜ್ ಮಾರ್ಗಸೂಚಿ ಬದಲಾಯಿಸಿಲ್ಲ. ಅವರು ಹಿಂದಿನ ಸರ್ಕಾರದ ಭ್ರಮೆಯಲ್ಲೇ ಇದ್ದಾರೆ ಎಂದು ಕಿಡಿ ಕಾರಿದರು. ಇದು ಹೀಗೆ ಮುಂದುವರಿದ್ರೆ ನಾನು ಅಧಿಕಾರಿಗಳ ಧೋರಣೆ ಪ್ರಶ್ನಿಸಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.