ETV Bharat / state

ಮಿಯವಾಕಿ ಮಾದರಿ ಪ್ರಯೋಗ: 10 ವರ್ಷದಲ್ಲಿ ಬೆಳೆಯಲಿದೆ ದಟ್ಟ ಅರಣ್ಯ!

ಪರಿಸರ ಪ್ರೇಮಿಯಾಗಿರುವ ರಾಜು ಎಂಬುವರು ತಮ್ಮ ಜಮೀನಿನಲ್ಲಿ ಮಿಯವಾಕಿ ಕಿರು ಅರಣ್ಯ ಮಾದರಿಯ ಪ್ರಯೋಗಕ್ಕೆ ಮುಂದಾಗಿದ್ದು, ಇವರಿಗೆ ಬೆಂಬಲವಾಗಿ ಯುವ ಸಂಚಲನ ತಂಡ ನಿಂತಿದೆ.

''Miyawaki'' project
''ಮಿಯವಾಕಿ''.....10 ವರ್ಷದಲ್ಲಿ ಸೃಷ್ಟಿಯಾಗಲಿದೆ ಒಂದು ದಟ್ಟ ಅರಣ್ಯ
author img

By

Published : Oct 6, 2020, 7:29 AM IST

ದೊಡ್ಡಬಳ್ಳಾಪುರ: ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಜೊತೆಗೆ ಪ್ರಸ್ತುತ ಸನ್ನಿವೇಶದಲ್ಲಿ ಗಮನ ಕೊಡಲೇಬೇಕಾದ ವಿಚಾರ. ಹಾಗಾಗಿ ಪ್ರಾದೇಶಿಕವಾಗಿ ಬೆಳೆಯಬಹುದಾದ ಗಿಡಗಳನ್ನು ನೆಟ್ಟು ಕಡಿಮೆ ಜಾಗದಲ್ಲಿ ದಟ್ಟವಾದ ಅರಣ್ಯ ಬೆಳೆಸುವ ಪ್ರಯೋಗಕ್ಕೆ ಇಲ್ಲೊಂದು ಯುವಕರ ತಂಡ ಮುಂದಾಗಿದೆ.

ದಟ್ಟ ಅರಣ್ಯ ಬೆಳೆಯಲು ಬರೋಬ್ಬರಿ 100 ವರ್ಷಗಳು ಬೇಕು. ಆದರೆ ಕೇವಲ 10 ವರ್ಷದಲ್ಲಿ ದಟ್ಟ ಅರಣ್ಯ ಬೆಳೆಯುವ ಮಿಯವಾಕಿ ಮಾದರಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ ಈ ಪರಿಸರ ಪ್ರೇಮಿಗಳು. ಮಿತ್ರ ಫೌಂಡೇಶನ್ ಮತ್ತು ಯುವ ಸಂಚಲನ ಸಹಯೋಗದೊಂದಿಗೆ ವನ ಮಿತ್ರ ಕಾರ್ಯಕ್ರಮ ಅಯೋಜನೆ ಮಾಡಲಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಚನ್ನವೀರನಹಳ್ಳಿ ಗ್ರಾಮದ ರಾಜು ಎಂಬುವವರ ಜಮೀನಲ್ಲಿ ಜಪಾನ್ ದೇಶದ ಮಿಯವಾಕಿ ಮಾದರಿ ಅಂದರೆ ಕಿರು ಅರಣ್ಯ ಮಾದರಿಯಲ್ಲಿ ಗಿಡಗಳನ್ನು ನೆಡಲಾಗಿದೆ.

''ಮಿಯವಾಕಿ'':

ಜಪಾನ್ ದೇಶದ ಸಸ್ಯತಜ್ಞ ಮಿಯವಾಕಿ ಒಬ್ಬ ಪರಿಸರ ಪ್ರೇಮಿ. ಈತ ನಗರ ಪ್ರದೇಶಗಳಲ್ಲಿ ಕಡಿಮೆ ಜಾಗದಲ್ಲಿ ದಟ್ಟವಾದ ಅರಣ್ಯವನ್ನು ಬೆಳೆಯುತ್ತಿದ್ದ. ಸೂರ್ಯನ ಕಿರಣಗಳು ನೆಲಕ್ಕೆ ತಾಗದಂತೆ ದಟ್ಟವಾದ ಅರಣ್ಯವನ್ನು ಸೃಷ್ಟಿ ಮಾಡುತ್ತಿದ್ದ. 100 ವರ್ಷದಲ್ಲಾಗುವ ಅರಣ್ಯವನ್ನು ಕೇವಲ 10 ವರ್ಷದಲ್ಲಿ ಬೆಳೆಯಬಹುದಾಗಿತ್ತು ಆ ಮಿಯವಾಕಿ ಮಾದರಿಯಲ್ಲಿ. ಈ ಮಾದರಿ ಯಶಸ್ಸು ಕಂಡಿತ್ತಲ್ಲದೆ ಇತರೆ ನಗರಗಳಿಗೂ ವ್ಯಾಪಿಸಿತು. ಹೆಚ್ಚು ಜನಪ್ರಿಯತೆಗೆ ಬಂದಾಗ ಮುಂದೆ ಮಿಯವಾಕಿ ವಿಧಾನ ಎಂದೇ ಪ್ರಸಿದ್ಧಿ ಪಡೆಯಿತು.

ಮಿಯವಾಕಿ ಮಾದರಿಯ ಅರಣ್ಯ

ಸದ್ಯ ಪರಿಸರ ಪ್ರೇಮಿಯಾಗಿರುವ ರಾಜು ತಮ್ಮ ಜಮೀನಿನಲ್ಲಿ ಮಿಯವಾಕಿ ಕಿರು ಅರಣ್ಯ ಮಾದರಿಯ ಪ್ರಯೋಗಕ್ಕೆ ಮುಂದಾಗಿದ್ದು, ಇವರಿಗೆ ಬೆಂಬಲವಾಗಿ ಯುವ ಸಂಚಲನ ತಂಡ ನಿಂತಿದೆ. ವಿಶೇಷವಾಗಿ ಬಿಳಿಗಿರಿ ಬೆಟ್ಟದಲ್ಲಿ ಸಿಗುವ ಕಾಡು ಗಿಡಗಳನ್ನು ಮಿಯವಾಕಿ ಮಾದರಿಗೆ ಬಳಸಿಕೊಳ್ಳಲಾಗಿದೆ. ನಾಲ್ಕು ಗುಂಟೆ ಜಾಗದಲ್ಲಿ 700ಕ್ಕೂ ಹೆಚ್ಚು ಗಿಡಗಳನ್ನು ಬೆಳೆಯುವ ಉದ್ದೇಶ ಹೊಂದಿದ್ದಾರೆ.

miyawaki
10 ವರ್ಷದಲ್ಲಿ ಸೃಷ್ಟಿಯಾಗಲಿದೆ ಒಂದು ದಟ್ಟ ಅರಣ್ಯ

ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ 3ರಿಂದ 4 ಗುಂಡಿಗಳನ್ನು ತೆಗೆದು ಗಿಡ ನೆಡಲಾಗುತ್ತದೆ. ಸಾಮಾನ್ಯವಾಗಿ ಸಸಿಗಳನ್ನು ಅತಿ ಎತ್ತರ ಬೆಳೆಯುವ, ಸಾಧಾರಣ ಎತ್ತರ ಬೆಳೆಯುವ ಹಾಗೂ ಪೊದೆ ರೀತಿ ಬೆಳೆಯುವ ಸಸಿಗಳಾಗಿ ವಿಂಗಡಿಸಿ ನೆಡಲಾಗುವುದು. ಸುಮಾರು ಎರಡು ವರ್ಷ ನೀರು ಹಾಕಿ ಗಿಡಗಳನ್ನು ಪೋಷಿಸಿದರೆ ಸಾಕು ಅನಂತರ ತಾನಾಗಿಯೇ ಒಂದು ಅರಣ್ಯ ಸೃಷ್ಟಿಯಾಗುತ್ತದೆ. ಜೈವಿಕ ವೈವಿಧ್ಯತೆಯ ವಲಯವಾಗಿ ಸೃಷ್ಟಿಯಾಗುವ ಈ ಸ್ಥಳದಲ್ಲಿ ಪ್ರಾಣಿ-ಪಕ್ಷಿಗಳು ಅಶ್ರಯ ಪಡೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.