ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರ ಫೋಟೋ ದುರ್ಬಳಕೆ ಮಾಡಿಕೊಂಡು, ಕಿಡಿಗೇಡಿಗಳು ಸಂದೇಶ ರವಾನಿಸುತ್ತಿರುವ ಬಗ್ಗೆ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಫೋಟೋ ದುರ್ಬಳಕೆ ಮಾಡಲಾಗಿದೆ. ಅವರ ಅನುಮತಿಯಿಲ್ಲದೇ ಫೋಟೋವನ್ನ ವಾಟ್ಸ್‌ಆ್ಯಪ್ ಡಿಪಿಯಾಗಿ ಅಳವಡಿಸಿಕೊಂಡು, ಸಹೋದ್ಯೋಗಿಗಳಿಗೆ ತಪ್ಪಾದ ಸಂದೇಶ ಕಳುಹಿಸಲಾಗುತ್ತಿದೆ ಎಂದು ಖುದ್ದು ತುಷಾರ್ ಗಿರಿನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಒತ್ತುವರಿಯಾದ ಕೆರೆಗಳ ಮರುಸಮೀಕ್ಷೆ ನಡೆಸಿ ಮಾರ್ಕಿಂಗ್ ಮಾಡಿಕೊಡಿ: ಭೂಮಾಪನ ಇಲಾಖೆಗೆ ಬಿಬಿಎಂಪಿ ಪತ್ರ