ETV Bharat / state

ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕಿಡಿಗೇಡಿಗಳಿಂದ ಕಲ್ಲು; 6 ಕಿಟಕಿಗಳಿಗೆ ಹಾನಿ - ETV Bharath Karnataka

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದು ಸಿ-4 ಹಾಗೂ ಸಿ-5 ಬೋಗಿಯ ಆರು ಕಿಟಕಿಗಳಿಗೆ ಹಾನಿಯಾಗಿದೆ.

miscreants hurl stones at vande bharat express train
ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಿದ ಕಿಡಿಗೇಡಿಗಳು
author img

By

Published : Feb 26, 2023, 11:11 AM IST

Updated : Feb 26, 2023, 12:08 PM IST

ಬೆಂಗಳೂರು: ಇತ್ತೀಚೆಗೆ ಅದ್ಧೂರಿಯಾಗಿ ಉದ್ಘಾಟನೆಗೊಂಡು ಕಾರ್ಯಾರಂಭಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಕೆ.ಆರ್.ಪುರಂ ಹಾಗೂ ಕಂಟೋನ್ಮೆಂಟ್ ನಿಲ್ದಾಣದ ಮಾರ್ಗದ ನಡುವೆ ನಿನ್ನೆ ಬೆಳಿಗ್ಗೆ ಸಂಭವಿಸಿದೆ. ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲಿನ ಸಿ-4 ಹಾಗೂ ಸಿ-5 ಬೋಗಿಯ ಆರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ನವೆಂಬರ್​ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ರೈಲಿನ ಮೇಲೆ ಕಲ್ಲು ತೂರಾಟದ ವರದಿಯಾಗಿದೆ. ಕೆ.ಆರ್.ಪುರಂ ನಿಲ್ದಾಣದಿಂದ ಕೊಂಚ ದೂರದಲ್ಲಿ ಘಟನೆ ನಡೆದಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ರೈಲಿನ ಸಿ4 ಬೋಗಿಯ 10, 11, 12 ಹಾಗೂ ಸಿ 5 ಬೋಗಿಯ 20, 21, 22ರ ಗಾಜುಗಳು ಒಡೆದಿವೆ.

ಘಟನೆ ಸಂಬಂಧ ಆರ್.ಪಿ.ಎಫ್ ಅಧಿಕಾರಿಗಳು ದೂರು ದಾಖಲಿಸಿದ್ದು, ಇಂದಿನಿಂದ ರೈಲ್ವೆ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಕಂಟೋನ್ಮೆಂಟ್, ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ರೈಲು ಸಂಚರಿಸುವ ಸಮಯದಲ್ಲಿ ಟ್ಯಾನರಿ ರಸ್ತೆ ಬ್ರಿಡ್ಜ್, ಕಲ್ಲಪಲ್ಲಿ ಸ್ಮಶಾನ, ಜೀವನಹಳ್ಳಿ ಸೇರಿದಂತೆ ಹಲವೆಡೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ರೈಲಿಗೆ ಅಲ್ಲಲ್ಲಿ ಸಂಕಷ್ಟ: ನವೆಂಬರ್​ 8ರಂದು ಗುಜರಾತ್​ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.

ಡಿಸೆಂಬರ್​ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಹೀರಾಬೆನ್​ ಸಾವಿನ ನೋವಿನ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಿ ಕೋಲ್ಕತ್ತಾದ ಮೊದಲ ವಂದೇ ಭಾರತ್​ ರೈಲಿಗೆ ವರ್ಚುವಲ್​ ಮೂಲಕ ಚಾಲನೆ ನೀಡಿದ್ದರು. ಉದ್ಘಾಟನೆಯ ನಂತರದ ನಾಲ್ಕೇ ದಿನದಲ್ಲಿ (ಜನವರಿ 3) ರಂದು ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಕಿಟಕಿಯ ಗಾಜು ಒಡೆದಿತ್ತು.

ಜನವರಿ 4ರಂದು ಎರಡು ಬಾರಿ ಪಶ್ಚಿಮ ಬಂಗಾಳದಲ್ಲಿ ಕಲ್ಲು ತೂರಾಟ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶಿಸ್ತಿನ ಕ್ರಮಕ್ಕೆ ಆದೇಶಿಸಿದ್ದರು. ಆದರೆ ಜನವರಿ 21ರಂದು ಮತ್ತೆ ಪ. ಬಂಗಾಳದ ಸಿಲಿಗುರಿಯಲ್ಲಿ ರೈಲಿನ ಮೇಲೆ ಕಲ್ಲೆಸೆದು ಕಿಟಕಿ ಒಡೆಯಲಾಗಿತ್ತು. ಹೀಗೆ ಒಂದೇ ತಿಂಗಳಿನಲ್ಲಿ ನಾಲ್ಕು ಬಾರಿ ರೈಲಿಗೆ ಕಲ್ಲೆಸೆದ ಘಟನೆ ವರದಿಯಾಗಿತ್ತು.

ರೈಲಿಗೆ ಪ್ರಾಣಿಗಳ ಕಾಟ: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸದ್ಯಕ್ಕೆ ಸೆಮಿ ಹೈಸ್ಪೀಡ್​ನಲ್ಲಿ ಚಲಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಹಳಿಯಲ್ಲಿ ಅಡ್ಡ ದಾಟುವ ಪ್ರಾಣಿ ಮತ್ತು ಮನುಷ್ಯರು. ಸೆಮಿ ವೇಗದ ರೈಲಿಗೆ ಹಲವು ಬಾರಿ ಪ್ರಾಣಿಗಳು ಸಿಲುಕಿವೆ. ಹಳಿಯ ಇಕ್ಕೆಲಗಳಲ್ಲಿ ಕಂಬಿಗಳನ್ನು ಅಳವಡಿಸುವ ಮೂಲಕ ಪ್ರಾಣಿಗಳು ಅಡ್ಡ ದಾಟದಂತೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ವಂದೇ ಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ.. ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ರೈಲ್ವೆ ಪೊಲೀಸರು

Last Updated : Feb 26, 2023, 12:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.