ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಸಂತ್ರಸ್ತೆ ರೂಮ್ಗೆ ಹೋಗಲು ಆಗದೆ ಇದ್ದ ಕಾರಣ ಒಯೋ ರೂಮ್ ಬುಕ್ ಮಾಡಿದ್ದಾಳೆ. ಆಕೆಯ ಸ್ನೇಹಿತನಾದ ಜಯಂತ್ ಎಂಬಾತ ಕೂಡ ಆಕೆಯ ಜೊತೆ ರೂಮ್ಗೆ ಹೋಗಿದ್ದು, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ನಿನ್ನೆ ವೀಕೆಂಡ್ ಆದ ಕಾರಣ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ ಜಯಂತ್ ಆಶೋಕ್ ನಗರದ ಪಬ್ನಲ್ಲಿ ಎರಡು ಬಿಯರ್ ಕುಡಿದಿದ್ದಾರೆ. ಹಾಗಾಗಿ ನಶೆ ಏರಿದ್ದರಿಂದ ಸಂತ್ರಸ್ತೆಗೆ ಮನೆಗೆ ಹೋಗಲು ಆಗದೆ ಒಯೋ ರೂಮ್ ಬುಕ್ ಮಾಡಿದ್ದಾಳೆ.
ಈ ವೇಳೆ ಆಕೆಯ ರೂಮ್ಗೆ ಬಂದ ಜಯಂತ್ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಮುಂಜಾನೆ ನಶೆ ಇಳಿದ ನಂತರ ಸಂತ್ರಸ್ತೆ ಸ್ನೇಹಿತ ಜಯಂತ್ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.