ETV Bharat / state

MIB Recruitment: ಬೆಂಗಳೂರು ಸೇರಿದಂತೆ ಹಲವೆಡೆ ನೇಮಕಾತಿ; ಮಾಸಿಕ 60 ಸಾವಿರ ರೂ. ವೇತನ - ಯಂಗ್​ ಪ್ರೊಫೆಷನಲ್ಸ್​ ಹುದ್ದೆ

ಪತ್ರಿಕೋದ್ಯಮ ಪದವಿಯಲ್ಲಿ ಹುದ್ದೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿದೆ.

Ministry of information and broadcast recruitment for young professionals in regions

author img

By ETV Bharat Karnataka Team

Published : Aug 26, 2023, 3:50 PM IST

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ 33 ಯಂಗ್​ ಪ್ರೊಫೆಷನಲ್ಸ್​ ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪ್ರೆಸ್​​ ಇನ್ಫಾರ್ಮೆಷನ್​ ಬ್ಯೂರೋದ ವಿವಿಧ ಪ್ರಾದೇಶಿಕ ಕಚೇರಿಗೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಒಂದು ವರ್ಷದ ಒಪ್ಪಂದದ ಮೇರೆಗೆ ಕೇಂದ್ರ ಸರ್ಕಾರದಿಂದ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಪತ್ರಿಕೋದ್ಯಮದಲ್ಲಿ ಪದವಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: 33 ಯಂಗ್​ ಪ್ರೋಫೆಷನ್​​ ಹುದ್ದೆ ಇದಾಗಿದೆ. ಬೆಂಗಳೂರು 2, ಶ್ರೀನಗರದಲ್ಲಿ 2, ಚಂಡೀಗಢದಲ್ಲಿ 2, ಕೋಲ್ಕತ್ತಾ 2, ಮುಂಬೈ 2, ಗುವಾಹಟಿ 2, ಅಹಮದಾಬಾದ್​ 2, ಚೆನ್ನೈ 2, ಭುವನೇಶ್ವರ್​ 2, ತಿರುವನಂತಪುರಂ 2, ಹೈದರಾಬಾದ್​​ 2, ವಿಜಯವಾಡ 1, ಲಕ್ನೋ 2, ಪಾಟ್ನಾ 2, ರಾಂಚಿ 1, ರಾಯ್​ಪುರ್​​ 1. ಭೋಪಾಲ್​ನಲ್ಲಿ 2 ಹುದ್ದೆಗಳಿವೆ.

ಅಭ್ಯರ್ಥಿಗಳಿಗೆ ಇಂಗ್ಲಿಷ್​ ಜೊತೆಗೆ ರಾಜ್ಯದ ಸ್ಥಳೀಯ ಭಾಷೆಗಳ ಮೇಲೆ ಹಿಡಿಯವನ್ನು ಹೊಂದಿರಬೇಕಿದೆ. ಒಂದು ವರ್ಷದ ಗುತ್ತಿಗೆ ಆಧಾರಿತ ಹುದ್ದೆ ಇದಾಗಿದ್ದು, ಅಭ್ಯರ್ಥಿಗಳ ಕಾರ್ಯ ಕ್ಷಮತೆ ಆಧಾರದ ಮೇಲೆ ಮೂರು ವರ್ಷಗಳ ಕಾಲ ವಿಸ್ತರಣೆ ಮಾಡಲಾಗುವುದು.

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, ಜರ್ನಲಿಸಂನಲ್ಲಿ ಡಿಪ್ಲೊಮಾ, ಸಮೂಹ ಸಂವಹದ ಅಥವಾ ವಿಷುಯಲ್​ ಕಮ್ಯೂನಿಕೇಷನ್​, ಮಾಹಿತಿ ಕಲೆಯಲ್ಲಿ ಸ್ನಾತಕೋತ್ತರ ಪದವಿ ಆಗಿರಬೇಕು.

ಅನುಭವ: ಈಗಾಗಲೇ ಪತ್ರಿಕೋದ್ಯಮ ಕ್ಷೇತ್ರ ಅಥವಾ ಮಾರ್ಕೆಟಿಂಗ್​, ಅನಿಮೇಷನ್​, ಎಡಿಟಿಂಗ್​, ಅಥವಾ ಬುಕ್​ ಪಬ್ಲಿಷಿಂಗ್​ನಲ್ಲಿ ಎರಡು ವರ್ಷದ ಹುದ್ದೆ ಅನುಭವವನ್ನು ಹೊಂದಿರಬೇಕು.

ಹುದ್ದೆ ಆಯ್ಕೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಮಾಸಿಕ ವೇತನ: 60 ಸಾವಿರ ರೂ. ಇರಲಿದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ವರ್ಷ ಆಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಎಂಐಬಿಯ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ಆಗಸ್ಟ್​ 23 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 30 ಆಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು mib.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: IOCL Recruitment: 449 ಅಪ್ರೆಂಟಿಸ್​ ಹುದ್ದೆಗೆ ನೇಮಕಾತಿ.. SSLC, PUC ಆಗಿದ್ರೆ ಅರ್ಜಿ ಸಲ್ಲಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.