ETV Bharat / state

ಬೆಳ್ಳಂಬೆಳಗ್ಗೆ ಬಿಎಸ್​ವೈ ನಿವಾಸಕ್ಕೆ ದೌಡಾಯಿಸಿದ ಸಚಿವತ್ರಯರು

ಬಿ. ಶ್ರೀರಾಮುಲು ಡಿಸಿಎಂ ಸ್ಥಾನ ಸಿಗದ ಹಿನ್ನೆಲೆ ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ. ನಿನ್ನೆ ಖಾತೆ ಹಂಚಿಕೆ ನಂತರ ಬಿಜೆಪಿಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆ ಈ ಭೇಟಿ ಪ್ರಮುಖವಾಗಿದೆ.

ಬಿಜೆಪಿ ಸಚಿವರು
author img

By

Published : Aug 27, 2019, 9:49 AM IST

ಬೆಂಗಳೂರು: ಸಚಿವರಾದ ಬಿ. ಶ್ರೀರಾಮುಲು, ಸಿ.ಸಿ. ಪಾಟೀಲ್ ಹಾಗೂ ವಿ. ಸೋಮಣ್ಣ ಅವರು ಇಂದು ಬೆಳಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪನವರ ಡಾಲರ್ಸ್ ಕಾಲೊನಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಬಿ. ಶ್ರೀರಾಮುಲು ಡಿಸಿಎಂ ಸ್ಥಾನ ಸಿಗದ ಹಿನ್ನೆಲೆ ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ. ನಿನ್ನೆ ಖಾತೆ ಹಂಚಿಕೆ ನಂತರ ಬಿಜೆಪಿಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆ ಈ ಭೇಟಿ ಮಹತ್ವ ಪಡೆದಿದೆ. ಬಿ. ಶ್ರೀರಾಮುಲು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಡಿಸಿಎಂ ಪಟ್ಟ ಸಿಗದ ಹಿನ್ನೆಲೆ ವಾಲ್ಮೀಕಿ ಜನಾಂಗದವರ ಅಸಮಾಧಾನ, ಬೇಸರ, ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದ ಆರೋಪ, ಆಕ್ರೋಶಕ್ಕೆ ಸಮಜಾಯಿಷಿ ನೀಡಿ ತೆರಳಿದ್ದಾರೆ ಎಂಬ ಮಾಹಿತಿ ಇದೆ.

ಶ್ರೀರಾಮುಲು ಹೊರಟ ಬೆನ್ನಲ್ಲೇ ಮನೆಯಿಂದ ಹೊರಟ ಸಿಎಂ ಯಡಿಯೂರಪ್ಪಗೆ ಸಚಿವರಾದ ವಿ ಸೋಮಣ್ಣ, ಕೋಟಾ ಶ್ರೀನಿವಾಸ್ ಪೂಜಾರಿ, ಸಿಸಿ ಪಾಟೀಲ್, ಬಿಜೆಪಿ ಮುಖಂಡ ಬಿ ವೈ ವಿಜಯೇಂದ್ರ, ಸಂಸದೆ ಶೋಭಾ ಕರಂದ್ಲಾಜೆ ಸಾಥ್ ನೀಡಿದ್ದಾರೆ.

ಸಿಎಂ ಜಯನಗರದ ಸುತ್ತೂರು ಮಠಕ್ಕೆ ತೆರಳಿದರು. ಅವರ ಬೆನ್ನಲ್ಲೇ ಸಚಿವ ಬಸವರಾಜ್ ಬೊಮ್ಮಾಯಿ ಅವರೂ ಜಯನಗರದತ್ತ ತೆರಳಿದರು. ಅವರೆಲ್ಲ ಸುತ್ತೂರು ಶ್ರೀಗಳು ಮತ್ತು ಇಶಾ ಫೌಂಡೇಶನ್​ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಸಿಎಂ ಜಯನಗರದ ಜೆಎಸ್​ಎಸ್​ ಶಿಕ್ಷಣ ಸಂಸ್ಧೆಯ ಕ್ಯಾಂಪಸ್​ನಲ್ಲಿ ಭೇಟಿ ಮಾಡಿದ್ದಾರೆ.

Intro:newsBody:ಬೆಳ್ಳಂಬೆಳಗ್ಗೆ ಬಿಎಸ್ವೈ ನಿವಾಸಕ್ಕೆ ಆಗಮಿಸಿದ ಸಚಿವತ್ರಯರು!

ಬೆಂಗಳೂರು: ಸಚಿವರಾದ ಬಿ. ಶ್ರೀರಾಮುಲು, ಸಿ.ಸಿ. ಪಾಟೀಲ್ ಹಾಗೂ ವಿ. ಸೋಮಣ್ಣ ಇಂದು ಬೆಳಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪನವರ ಡಾಲರ್ಸ್ ಕಾಲೊನಿ ನಿವಾಸಕ್ಕೆ ಭೇಟಿಕೊಟ್ಟು ಚರ್ಚಿಸಿದರು.
ಇಂದು ಬೆಳಗ್ಗೆ ಬಿಎಸ್ವೈ ನಿವಾಸಕ್ಕೆ ಪ್ರತ್ಯೇಕವಾಗಿ ಆಗಮಿಸಿ ಚರ್ಚಿಸಿದ್ದಾರೆ. ವಸತಿ ಸಚಿವ ವಿ. ಸೋಮಣ್ಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಭೇಟಿಕೊಟ್ಟು ಸಮಾಲೋಚನೆ ನಡೆಸಿದ್ದಾರೆ.
ಡಿಸಿಎಂ ನಿರೀಕ್ಷೆಯಲ್ಲಿದ್ದ ಬಿ. ಶ್ರೀರಾಮುಲು ಅದು ಸಿಗದ ಹಿನ್ನೆಲೆ ಇಂದು ಭೇಟಿ ಕೊಟ್ಟು ಸಿಎಂ ಜತೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ. ನಿನ್ನೆ ಖಾತೆ ಹಂಚಿಕೆ ನಂತರ ಬಿಜೆಪಿಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆ ಈ ಭೇಟಿ ಸಾಕಷ್ಟು ಪ್ರಾಮುಖ್ಯತೆ ಮೂಡಿಸಿದೆ.
ಬಿ. ಶ್ರೀರಾಮುಲು ಒಂದು ಗಂಟೆಗೂ ಹೆಚ್ಚು ಕಾಲದಿಂದ ಚರ್ಚೆ ನಡೆಸಿದ್ದಾರೆ. ಇವರಿಗೆ ಡಿಸಿಎಂ ಪಟ್ಟ ಸಿಗದ ಹಿನ್ನೆಲೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ವಾಲ್ಮೀಕಿ ಜನಾಂಗದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಅವರು ಬಿಎಸ್ವೈ ಜತೆ ಸಮಾಲೋಚಿಸಿದ್ದಾರೆ ಎಂಬ ಮಾಹಿತಿ ಇದೆ.
ಮೈಸೂರು ದಸರಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ವಿ. ಸೋಮಣ್ಣ ಕೂಡ ಡಾಲರ್ಸ್ ಕಾಲೊನಿ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಈ ಸಂಬಂಧ ಚರ್ಚಿಸಿದ್ದಾರೆ. ಉತ್ಸವ ಆಚರಣೆ ಹಾಗೂ ನಿನ್ನೆಯ ನಂತರದ ರಾಜಕೀಯ ಗೊಂದಲದ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.