ETV Bharat / state

ಸಚಿವರ ಪ್ರಮಾಣ ವಚನದ ವೇಳೆ ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ - ಸಚಿವರ ಪ್ರಮಾಣ ವಚನ ಸ್ವೀಕಾರ

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ವೇಳೆ ರಾಜಭವನ ಒಳ ಪ್ರವೇಶಕ್ಕೆ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಹರಸಾಹಸ ನಡೆಸಿದರು.

ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ
BJP activists trying to enter Raj Bhavan
author img

By

Published : Feb 6, 2020, 11:14 AM IST

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ವೇಳೆ ರಾಜಭವನ ಒಳ ಪ್ರವೇಶಕ್ಕೆ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹರಸಾಹಸ ಪಟ್ಟರು.

ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ

ಹೊರಭಾಗ ಹೈಡ್ರಾಮಾ: ನೂತನ ಸಚಿವರ ಪದಗ್ರಹಣ ಸಮಾರಂಭ ವೀಕ್ಷಿಸಲು ರಾಜಭವನದ ಒಳಗೆ ತೆರಳುವ ಆಹ್ವಾನ ಪತ್ರ ಇದ್ದರೂ ತಡವಾಗಿ ಬಂದ ಹಿನ್ನೆಲೆ ರಾಜಭವನಕ್ಕೆ ಪ್ರವೇಶಿಸಲು ಕೆಲವರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಈ ಹಿನ್ನೆಲೆ ಆಕ್ರೋಶಗೊಂಡ ಕೆಲ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ನಿಗದಿತ ಸಮಯದವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ತದನಂತರ ಬಂದವರಿಗೆ ಅವಕಾಶ ನೀಡಲಿಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಸಿಎಂ ರಾಜಭವನದ ಒಳಗೆ ತೆರಳಿದ ನಂತರ ಭದ್ರತೆ ಇನ್ನಷ್ಟು ಬಿಗಿಗೊಳಿಸಿ, ರಾಜಭವನ ಹೊರಭಾಗ ಸೇರಿದ ಎಲ್ಲ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ನಡೆಯಿತು.

ಸಚಿವರು ಹಾಗೂ ಸಿಎಂ ಆಗಮನ ಸಂದರ್ಭದಲ್ಲಿ ಮತ್ತು ಹೊಸದಾಗಿ ಸಚಿವ ಸ್ಥಾನ ಅಲಂಕರಿಸಿರುವ ಶಾಸಕರು ಆಗಮಿಸಿದ ಸಂದರ್ಭ ಅಭಿಮಾನಿಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಈ ವೇಳೆ ಇವರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.