ETV Bharat / state

ಕುಮಾರಸ್ವಾಮಿ ನಡೆದಷ್ಟೂ ಒಳ್ಳೆಯದು, ಹಾಗಾದರೂ ಆರೋಗ್ಯ ಸುಧಾರಿಸಲಿ: ಸಚಿವ ವಿ.ಸೋಮಣ್ಣ - V Somanna reaction about Ex CM

ಬಿಬಿಎಂಪಿ ಚುನಾವಣೆಗೂ ಈಗ ಬಿದ್ದಿರೋ ಮಳೆಗೂ ಏನೂ ಸಂಬಂಧ ಇಲ್ಲ. ಚುನಾವಣೆ ವಿಷಯದಲ್ಲೂ ಪ್ರಕೃತಿ ವಿಚಾರಕ್ಕೂ ಸಂಬಂಧ ಇಲ್ಲ. ನಾವು ಬಿಬಿಎಂಪಿ ಚುನಾವಣೆ ಗೆಲ್ಲದೇ ಇನ್ಯಾರು ಗೆಲ್ತಾರೆ? ಯಾರ ಯಾರ ಕಾಲದಲ್ಲಿ ಏನೇನಾಗಿದೆ ನಮಗೂ ಚೆನ್ನಾಗಿ ಗೊತ್ತಿದೆ ಎಂದು ವಿ.ಸೋಮಣ್ಣ ಹೇಳಿದರು.

Minister V Somanna response to Kumaraswamy's health
ಸಚಿವ ವಿ.ಸೋಮಣ್ಣ
author img

By

Published : May 21, 2022, 4:20 PM IST

ಬೆಂಗಳೂರು: ಕುಮಾರಸ್ವಾಮಿ, ಸಿದ್ದರಾಮಯ್ಯ ಈಗಲಾದರೂ ಬೆಂಗಳೂರು ಸುತ್ತಾಡಲಿ. ಕುಮಾರಸ್ವಾಮಿ ನಡೆದಷ್ಟೂ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ವಿಚಾರಕ್ಕೆ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಹೀಗಾದರೂ ಆರೋಗ್ಯ ಸುಧಾರಿಸಲಿ. ಅವರಿಗೆ ಜನರ ಭಾವನೆ ಏನು ಎನ್ನೋದು ಅರ್ಥವಾಗಲಿ. ಅವರು ಎರಡು ಬಾರಿ ಮುಖ್ಯಮಂತ್ರಿ ಆದವರು. ಕುಮಾರಸ್ವಾಮಿ ಓಡಾಡಿ ಇನ್ನಷ್ಟು ಆರೋಗ್ಯ ಸರಿ ಮಾಡಿಕೊಳ್ಳಲಿ, ನಾವು ಬೇಡ ಅನ್ನೋದಿಲ್ಲ. ಅವರು ಕೊಡುವ ಅಮೂಲ್ಯ ಸಲಹೆಗಳನ್ನು ಸ್ವೀಕಾರ ಮಾಡುವುದಕ್ಕೆ ತಯಾರಿದ್ದೇವೆ. ಎಲ್ಲವನ್ನೂ ಸರಿಪಡಿಸಿದ್ದೇವೆ ಅಂತ ದುರಹಂಕಾರದಿಂದ ಹೇಳಲ್ಲ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೊಡುವ ಸಲಹೆಗಳನ್ನೂ ನಾವು ಸ್ವೀಕಾರ ಮಾಡ್ತೀವಿ ಎಂದರು.

ಬಿಬಿಎಂಪಿ ಚುನಾವಣೆಗೂ ಈಗ ಬಿದ್ದಿರೋ ಮಳೆಗೂ ಏನೂ ಸಂಬಂಧ ಇಲ್ಲ. ಚುನಾವಣೆ ವಿಷಯದಲ್ಲೂ ಪ್ರಕೃತಿ ವಿಚಾರಕ್ಕೂ ಸಂಬಂಧ ಇಲ್ಲ. ನಾವು ಬಿಬಿಎಂಪಿ ಚುನಾವಣೆ ಗೆಲ್ಲದೇ ಇನ್ಯಾರು ಗೆಲ್ತಾರೆ? ಯಾರ ಯಾರ ಕಾಲದಲ್ಲಿ ಏನೇನಾಗಿದೆ ನಮಗೂ ಚೆನ್ನಾಗಿ ಗೊತ್ತಿದೆ ಎಂದರು.

ಸಿಎಂ ದೆಹಲಿ ಪ್ರವಾಸ, ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ‌ ಇಲ್ಲ. ತುಂಬಾ ಮಳೆ ಬರ್ತಾ ಇದೆ ಎನ್ನೋದು ಗೊತ್ತಾಯ್ತು. ಸಿಎಂ ಸ್ಪೆಷಲ್ ಫ್ಲೈಟ್​​ನಲ್ಲಿ ಬರ್ತಾರೆ ಎನ್ನೋದೂ ಗೊತ್ತಾಯ್ತು. ಅವರು ಬಂದ ಮೇಲೆ ಅವರಿಂದ ತಿಳಿದುಕೊಂಡು ಹೇಳ್ತೀನಿ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.