ಬೆಂಗಳೂರು: ಕೋವಿಡ್ ವರ್ಷದಲ್ಲಿ ಶಾಲಾ ಶುಲ್ಕ ನಿಗದಿಗೊಳಿಸುವ ಕುರಿತು ನನ್ನ ಅನೇಕ ಮನವಿಗಳ ನಂತರವೂ ಖಾಸಗಿ ಶಾಲೆಗಳು ಹಾಗೂ ಪೋಷಕರ ನಡುವೆ ಸೌಹಾರ್ದಯುತ ಸೂತ್ರ ಹೊರಹೊಮ್ಮದೇ ಇದ್ದ ಕಾರಣಕ್ಕಾಗಿ ಸರ್ಕಾರ ಮಧ್ಯಪ್ರವೇಶಿಸಬೇಕಾಯಿತು. ಇದಕ್ಕಾಗಿ ಸರಕಾರವನ್ನು ದೂಷಿಸುವುದು ಎಷ್ಟು ಸರಿ ಎಂದು ಸಚಿವ ಸುರೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲೆಗಳ ಸಂಘಟನೆಗಳು ನಾಳೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಪ್ರಮುಖವಾಗಿ ಶುಲ್ಕ ನಿಧಿ ಸಂಬಂಧ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವ ಸಂಘಟನೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ.
ಈ ಸಂಬಂಧ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಸಚಿವ ಸುರೇಶ್ ಕುಮಾರ್, ಶಾಲಾ ಶುಲ್ಕ ಕಡಿತ ನಿರ್ಧಾರ ಕುರಿತು ನನ್ನ ವಿರುದ್ಧ ಟ್ವೀಟ್ಗಳ ಮಹಾ ಸರಣಿಯೇ ನಡೆದಿದೆ. ನೀವು ಸಂಘಟಿತ ಶಕ್ತಿ ಆದರೆ ಆ ಬಡ ಪೋಷಕರದು ಅಸಂಘಟಿತ ಧ್ವನಿಯಾಗಿದೆ ಎಂದಿದ್ದಾರೆ.