ETV Bharat / state

ಸ್ಪೀಕರ್ ವಿರುದ್ಧ ಹಕ್ಕುಚ್ಯುತಿಗೂ ಮುನ್ನ ಅಧಿಕಾರ ವ್ಯಾಪ್ತಿ ಅವಲೋಕಿಸಿಕೊಳ್ಳಿ: ಸಚಿವ ಸುರೇಶ್ ಕುಮಾರ್ - Bangalore press release News

ಪಿಎಸಿ (ಸಾರ್ವಜನಿಕ ಲೆಕ್ಕಪತ್ರ ಸಮಿತಿ) ವಿಧಾನಮಂಡಲದ ಸಮಿತಿಗಳ ಪೈಕಿ ಅತ್ಯಂತ ಪ್ರಭಾವಶಾಲಿ ಸಮಿತಿ. ಸಂಸತ್ತಿನಲ್ಲಿ ಹಾಗೂ ರಾಜ್ಯಗಳ ವಿಧಾನಮಂಡಲಗಳಲ್ಲಿ ಈ‌ ಸಮಿತಿಗಳ ವರದಿಗಳಿಗೆ ಹೆಚ್ಚು ಮನ್ನಣೆ ಇದೆ.‌ ರಾಜ್ಯದ ಪಿಎಸಿ ಈಗಿನ ಅಧ್ಯಕ್ಷ ಹೆಚ್. ಕೆ. ಪಾಟೀಲರು ಅತ್ಯಂತ ಅನುಭವವುಳ್ಳ ನಾಯಕರು. ಅವರೂ ಸಹ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬೇಡಿಕೆ ಇಟ್ಟಿರುವುದು ನನಗೆ ಅಚ್ಚರಿ‌ ತಂದಿದೆ ಎಂದು ಸಚಿವ ಎಸ್‌. ಸುರೇಶ್ ಕುಮಾರ್ ಹೇಳಿದ್ದಾರೆ.‌

Minister Suresh Kumar press release
Minister Suresh Kumar press release
author img

By

Published : Jun 2, 2020, 10:06 AM IST

ಬೆಂಗಳೂರು: ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆಂದು ಪಿಎಸಿ ಅಧ್ಯಕ್ಷ ಹೆಚ್. ಕೆ. ಪಾಟೀಲ್ ಹೇಳಿರುವುದು ಸಮಂಜಸವಲ್ಲ. ಪಿಎಸಿ ಈ ಹೆಜ್ಜೆ ಇಡುವ ಮುನ್ನ ತನ್ನ ಅಧಿಕಾರವ್ಯಾಪ್ತಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪಿಪಿಇ ಕಿಟ್‌ಗಳು ಹಾಗೂ ಮತ್ತಿತರ ಆರೋಗ್ಯ ಇಲಾಖೆಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಲು ಪರಿಶೀಲನೆಗೆ ಅನುಮತಿಯನ್ನು‌ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರು ಕೇಳಿದ್ದರು. ಇದಕ್ಕೆ ಸಭಾಧ್ಯಕ್ಷರು ಅನುಮತಿ ನೀಡದೆ ತಡೆ ನೀಡಿದ್ದಾರೆ. ಲಾಕ್‌ಡೌನ್ ಕಾರಣದಿಂದಾಗಿ ಈ ಸಮಯ ಪರಿಶೀಲನೆಗೆ ಸೂಕ್ತವಲ್ಲದ ಕಾರಣ ತಡೆ ನೀಡಿರುವುದಾಗಿ ಸ್ಪಷ್ಟೀಕರಣ ನೀಡಿದ್ದರೂ ವಾಗ್ದಾಳಿಗಳು ಮುಂದುವರೆಯುತ್ತಿರುವುದು ನನಗೆ ಅಚ್ಚರಿ ತಂದಿದೆ ಎಂದು ಸಚಿವರು ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಪಿಎಸಿ (ಸಾರ್ವಜನಿಕ ಲೆಕ್ಕಪತ್ರ ಸಮಿತಿ) ವಿಧಾನಮಂಡಲದ ಸಮಿತಿಗಳ ಪೈಕಿ ಅತ್ಯಂತ ಪ್ರಭಾವಶಾಲಿ ಸಮಿತಿ. ಸಂಸತ್ತಿನಲ್ಲಿ ಹಾಗೂ ರಾಜ್ಯಗಳ ವಿಧಾನಮಂಡಲಗಳಲ್ಲಿ ಈ‌ ಸಮಿತಿಗಳ ವರದಿಗಳ ಬಗ್ಗೆ ಹೆಚ್ಚು ಮನ್ನಣೆ ಇದೆ.‌ ರಾಜ್ಯದ ಪಿಎಸಿ ಈಗಿನ ಅಧ್ಯಕ್ಷ ಹೆಚ್. ಕೆ. ಪಾಟೀಲರು ಅತ್ಯಂತ ಅನುಭವವುಳ್ಳ ನಾಯಕರು. ಅವರೂ ಸಹ ಹೀಗೆ ಬೇಡಿಕೆ ಇಟ್ಟಿರುವುದು ನನಗೆ ಅಚ್ಚರಿ‌ ತಂದಿದೆ ಎಂದಿದ್ದಾರೆ.

ಈ ವಿಚಾರದಲ್ಲಿ, ಕಳೆದ 25 ವರ್ಷಗಳಿಂದ ವಿಧಾನ ಮಂಡಲದ ಸಮಿತಿಗಳ‌ ಕಾರ್ಯ ಕಲಾಪಗಳನ್ನು ಗಮನಿಸುತ್ತಾ ಬಂದಿದ್ದೇನೆ. ಸರ್ಕಾರದ ವಿವಿಧ ಇಲಾಖೆಗಳ ಕಾರ್ಯ ನಿರ್ವಹಣೆ ಕುರಿತು ಹಾಗೂ ಅನುದಾನಗಳ ಉಪಯೋಗ/ದುರುಪಯೋಗ ಕುರಿತು ಮಹಾಲೇಖಪಾಲರು ಆಗಿಂದ್ದಾಗ್ಗೆ ವರದಿಗಳನ್ನು ನೀಡುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ.‌ ಆ ವರದಿಗಳಿಗೆ ಅದರದೇ ಆದ ಪಾವಿತ್ರ್ಯತೆಯಿದೆ. ಆ ವರದಿಗಳಲ್ಲಿನ‌ ಅಂಶಗಳ ಮತ್ತು ಶಿಫಾರಸ್ಸುಗಳ ಕುರಿತು ಪರಿಶೀಲನೆ/ವಿಚಾರಣೆ/ತನಿಖೆ ಮಾಡುವುದು ಪಿಎಸಿಯ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ.‌ ಪಿಎಸಿಯು ಸ್ವಯಂಪ್ರೇರಿತವಾಗಿ ಯಾವುದಾದರೂ ವಿಚಾರವನ್ನು ತನಿಖೆ ಮಾಡಲು ಕಾನೂನು-ನಿಯಮಗಳಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಪಿಪಿಇ ಮತ್ತಿತರ ವಸ್ತುಗಳ ಖರೀದಿಯ ಬಗ್ಗೆ ಎಜಿಯವರಿಂದ ಇದುವರೆಗೆ ಯಾವುದೇ ವರದಿ ಬಂದಿಲ್ಲ. ಹೀಗಿರುವಾಗ ಯಾವುದೇ ವರದಿ ಇಲ್ಲದ ಸಂದರ್ಭದಲ್ಲಿ ಪಿಎಸಿಯು ತಾನಾಗಿಯೇ ಪರಿಶೀಲನೆ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ವಿಧಾನಸಭೆ-ಪರಿಷತ್ ಯಾವುದಾದರೂ ವಿಚಾರ ಕುರಿತು ತನಿಖೆ ನಡೆಸಲು ಪಿಎಸಿಗೆ ಸೂಚಿಸಿದರೆ ಆಗ ಆ ಕುರಿತು ತನಿಖೆ ನಡೆಸಬಹುದಾಗಿದೆ. ಇದುವರೆಗೂ ಪಿಎಸಿ ತಾನಾಗಿಯೇ ಸ್ವಯಂಪ್ರೇರಣೆಯಿಂದ ಯಾವುದಾದರೂ ವಿಚಾರ ಕುರಿತು ತನಿಖೆ ನಡೆಸಿರುವ ಕುರಿತು ಲೋಕಸಭೆಯಲ್ಲಿಯೂ ನಿದರ್ಶನಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಸ್ಪೀಕರ್ ಕೋಳಿವಾಡ ಈ ವಿಷಯದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯದ ಕಡೆ ಹೆಚ್.ಕೆ. ಪಾಟೀಲರು ಒಮ್ಮೆ ಗಮನ ಹರಿಸುವುದು ಅಗತ್ಯ. ಮೇಲಾಗಿ ಸ್ಪೀಕರ್ ನೀಡಿರುವ ಸ್ಪಷ್ಟೀಕರಣದ ನಂತರವೂ ಮುಂದುವರೆದಿರುವ ಸ್ಪೀಕರ್ ವಿರುದ್ಧದ ಆಕ್ರೋಶದ ಹಿಂದೆ ಇನ್ಯಾವುದೋ ಉದ್ದೇಶವಿದೆ ಎಂದೆನಿಸಿದರೆ ತಪ್ಪಲ್ಲ. ‌ಕೆಲ ಸಮಯದಲ್ಲಿ ಸ್ಪೀಕರ್ ಆದೇಶದ ವಿರುದ್ಧ ಮಾತನಾಡಬಾರದು ಎನ್ನುವುದು, ಇನ್ನುಳಿದ ಸಮಯದಲ್ಲಿ ಸ್ಪೀಕರ್ ಆದೇಶದ ವಿರುದ್ಧ ಹಾದಿರಂಪ ಮಾಡುವುದು ಸೋಗಲಾಡಿತನದ ಲಕ್ಷಣ ಎಂದು ಟೀಕಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.