ಬೆಂಗಳೂರು: ರಾಜ್ಯಕ್ಕೆ ಮತ್ತಷ್ಟು ಕೋವ್ಯಾಕ್ಸಿನ್ ಪೂರೈಕೆ ಕೇಂದ್ರ ಸರ್ಕಾರದಿಂದ ಆಗಿದ್ದು, ಈ ಬಗ್ಗೆ ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇಂದು 1,64,770 ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದ್ದು, ಒಟ್ಟು 17.8 ಲಕ್ಷ ಕೋವ್ಯಾಕ್ಸಿನ್ ಲಸಿಕೆ ರಾಜ್ಯಕ್ಕೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
-
ಕೇಂದ್ರ ಸರ್ಕಾರದಿಂದ ಇಂದು ಕರ್ನಾಟಕಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ.
— Dr Sudhakar K (@mla_sudhakar) May 31, 2021 " class="align-text-top noRightClick twitterSection" data="
ಒಟ್ಟು ಕೋವ್ಯಾಕ್ಸಿನ್ ಪೂರೈಕೆ: 17.8 ಲಕ್ಷ ಡೋಸ್
ಕೇಂದ್ರ ಸರ್ಕಾರದಿಂದ: 15.86 ಲಕ್ಷ ಡೋಸ್
ರಾಜ್ಯ ಸರ್ಕಾರದ ಖರೀದಿ: 1.94 ಲಕ್ಷ ಡೋಸ್
ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು.
">ಕೇಂದ್ರ ಸರ್ಕಾರದಿಂದ ಇಂದು ಕರ್ನಾಟಕಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ.
— Dr Sudhakar K (@mla_sudhakar) May 31, 2021
ಒಟ್ಟು ಕೋವ್ಯಾಕ್ಸಿನ್ ಪೂರೈಕೆ: 17.8 ಲಕ್ಷ ಡೋಸ್
ಕೇಂದ್ರ ಸರ್ಕಾರದಿಂದ: 15.86 ಲಕ್ಷ ಡೋಸ್
ರಾಜ್ಯ ಸರ್ಕಾರದ ಖರೀದಿ: 1.94 ಲಕ್ಷ ಡೋಸ್
ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು.ಕೇಂದ್ರ ಸರ್ಕಾರದಿಂದ ಇಂದು ಕರ್ನಾಟಕಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ.
— Dr Sudhakar K (@mla_sudhakar) May 31, 2021
ಒಟ್ಟು ಕೋವ್ಯಾಕ್ಸಿನ್ ಪೂರೈಕೆ: 17.8 ಲಕ್ಷ ಡೋಸ್
ಕೇಂದ್ರ ಸರ್ಕಾರದಿಂದ: 15.86 ಲಕ್ಷ ಡೋಸ್
ರಾಜ್ಯ ಸರ್ಕಾರದ ಖರೀದಿ: 1.94 ಲಕ್ಷ ಡೋಸ್
ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು.
ಈವರೆಗೆ ಕೇಂದ್ರ ಸರ್ಕಾರ ಪೂರೈಸಿದ 15,86,000 ಡೋಸ್ ವ್ಯಾಕ್ಸಿನ್ ಪಡೆದಿದ್ದೇವೆ. 1,94,000 ಕೋವ್ಯಾಕ್ಸಿನ್ ಡೋಸ್ ರಾಜ್ಯ ಸರ್ಕಾರ ಖರೀದಿಸಿದೆ.ಲಭ್ಯವಿರುವ ಸ್ಟಾಕ್ ನಲ್ಲಿ 2ನೇ ಡೋಸ್ ನೀಡಲು ಆದ್ಯತೆ ನೀಡಲಾಗುತ್ತದೆ ಎಂದು ಟ್ವೀಟ್ ಮೂಲಕ ಆರೋಗ್ಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯ ಲಸಿಕಾ ಅಭಿಯಾನದ ಅಂಕಿ ಸಂಖ್ಯೆ: ಸಚಿವ ಸುಧಾಕರ್ ಹೇಳಿಕೆ ಬೆನ್ನಲ್ಲೆ ಕರ್ನಾಟಕ ರಾಜ್ಯದ ವ್ಯಾಕ್ಸಿನೆಷನ್ ಡ್ರೈವ್ ಇತ್ತೀಚಿನ ಮಾಹಿತಿ ಗಮನಿಸಿದರೆ ರಾಜ್ಯದಲ್ಲಿ ಇಲ್ಲಿಯವರೆಗೆ 7,19,003 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 2ನೆಯ ಡೋಸ್ 4,71,574 ಜನ ಆರೋಗ್ಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ.
ಫ್ರಾಂಟ್ ಲೈನ್ ವಾರಿಯರ್ಸ್ಗೆ ಕ್ರಮವಾಗಿ ಮೊದಲ ಮತ್ತು 2ನೆಯ ಡೋಸ್ 6,12,719 ಮತ್ತು 2,11,471 ಮಂದಿಗೆ ನೀಡಲಾಗಿದೆ. 18 ರಿಂದ 44 ವಯೋಮಾನದ 10,54,122 ಜನಕ್ಕೆ ಮೊದಲ ಡೋಸ್ ರಾಜ್ಯದಲ್ಲಿ ಕೊಡ ಮಾಡಲಾಗಿದೆ. 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕ್ರಮವಾಗಿ 84,84,167 ಮತ್ತು 20,64,519 ಮಂದಿಗೆ ಮೊದಲನೆ ಮತ್ತು ಎರಡನೆಯ ಡೋಸ್ ಲಸಿಕೆ ನೀಡಲಾಗಿದೆ.
ಒಟ್ಟು 1,08 ,70,011 ಮೊದಲ ಮತ್ತು 27,47,564 ಜನಕ್ಕೆ 2ನೆಯ ಡೋಸ್ ನೀಡಲಾಗಿದೆ ಎಂದು ಸರ್ಕಾರಿ ಕೋವಿನ್ ಪೋರ್ಟಲ್ ಮಾಹಿತಿ ನೀಡುತ್ತದೆ. ಈ ಹಿನ್ನಲೆಯಲ್ಲಿ ಈವರೆಗೆ 1,36,17,575 ಲಸಿಕೆಯನ್ನು ರಾಜ್ಯ ಸರ್ಕಾರ ನೀಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಓದಿ: ನವಜಾತ ಶಿಶು ಕದ್ದು 15 ಲಕ್ಷ ರೂ.ಗೆ ಮಾರಿದ್ದ ಖತರ್ನಾಕ್ ವೈದ್ಯೆ ಅರೆಸ್ಟ್