ETV Bharat / state

ವೈದ್ಯಕೀಯ ಸಾಧನಗಳ ತಯಾರಿಕೆ & ರಫ್ತಿನಿಂದ ನವಭಾರತ ನಿರ್ಮಾಣ: ಸಚಿವ ಸುಧಾಕರ್ ಬಣ್ಣನೆ - ನೂತನ ಕ್ಯಾತ್ ಲ್ಯಾಬ್ ಉತ್ಪಾದನಾ ಘಟಕ

ಈ ಹಿಂದೆ ಪಿಪಿಇ ಕಿಟ್​ಗೂ ಚೀನಾವನ್ನು ಅವಲಂಬಿಸಬೇಕಾಗಿತ್ತು. ನಂತರ ಪ್ರಧಾನಿ ಮೋದಿಯವರ ಪ್ರಯತ್ನದಿಂದ ಅನೇಕ ದೇಶೀಯ ಕಂಪನಿಗಳು ಮಾಸ್ಕ್, ಪಿಪಿಇ ಕಿಟ್ ತಯಾರಿಸಿ ವಿದೇಶಗಳಿಗೂ ರಫ್ತು ಮಾಡುವಂತಾಯಿತು‌ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

sudhakar
ಐಐಟಿಪಿಎಲ್​ನ ನೂತನ ಕ್ಯಾತ್ ಲ್ಯಾಬ್ ಉತ್ಪಾದನಾ ಘಟಕಕ್ಕೆ ಡಾ. ಕೆ ಸುಧಾಕರ್ ಚಾಲನೆ
author img

By

Published : Oct 12, 2021, 8:52 PM IST

ಬೆಂಗಳೂರು: ಕೋವಿಡ್ ಆರಂಭದಲ್ಲಿ ವೈದ್ಯಕೀಯ ಸಾಧನಗಳ ಕೊರತೆ ಇತ್ತು. ನಂತರ ಮೇಕ್ ಇನ್ ಇಂಡಿಯಾದಿಂದಾಗಿ ಹೊರದೇಶಗಳಿಗೂ ಸಾಧನಗಳನ್ನು ರಫ್ತು ಮಾಡುವ ಸಾಮರ್ಥ್ಯ ಬಂದಿದೆ. ಇದರಿಂದ ನವಭಾರತ ನಿರ್ಮಾಣವಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

minister-sudhakar-spoke-about-make-in-india
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಸನ್ಮಾನ ಮಾಡಲಾಯಿತು

ಐಐಟಿಪಿಎಲ್​ನ ನೂತನ ಕ್ಯಾತ್ ಲ್ಯಾಬ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ‌ ಮೋದಿ ದೇಶದ ಅಭಿವೃದ್ಧಿಗಾಗಿ 'ಮೇಕ್ ಇನ್ ಇಂಡಿಯಾ'ಗೆ ಕರೆ ನೀಡಿದ್ದಾರೆ. ಉತ್ಪಾದನಾ ವಲಯದಲ್ಲಿ ಎಫ್​ಡಿಐ ಹೂಡಿಕೆ 2014 ಕ್ಕಿಂತ ಮುನ್ನ 20 ಬಿಲಿಯನ್ ಡಾಲರ್ ಇತ್ತು. ಈಗ ಮೂರು ಪಟ್ಟು ಹೆಚ್ಚಿದ್ದು, 68 ಬಿಲಿಯನ್ ಡಾಲರ್ ಏರಿಕೆ ಕಂಡಿದೆ ಎಂದು ಅವರು ಹೇಳಿದರು.

ಹೆಚ್ಚಿನ ವೈದ್ಯಕೀಯ ಉಪಕರಣಗಳಿಗಾಗಿ ನಾವು ಬೇರೆ ದೇಶಗಳನ್ನು ಅವಲಂಬಿಸಿದ್ದೇವೆ. ಆದರೆ, ಐಐಟಿಪಿಎಲ್ ಕಂಪನಿ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಈಗ ನಾವು ಚೀನಾ ಅವಲಂಬಿಸಬೇಕಿಲ್ಲ

ಈ ಹಿಂದೆ ಪಿಪಿಇ ಕಿಟ್​ಗೂ ಚೀನಾವನ್ನು ಅವಲಂಬಿಸಬೇಕಾಗಿತ್ತು. ನಂತರ ಪ್ರಧಾನಿ ಮೋದಿಯವರ ಪ್ರಯತ್ನದಿಂದ ಅನೇಕ ದೇಶೀಯ ಕಂಪನಿಗಳು ಮಾಸ್ಕ್, ಪಿಪಿಇ ಕಿಟ್ ತಯಾರಿಸಿ ವಿದೇಶಗಳಿಗೂ ರಫ್ತು ಮಾಡುವಂತಾಯಿತು‌. ಇದರಿಂದ ನವಭಾರತ ನಿರ್ಮಾಣ ಸಾಧ್ಯವಾಗಿದೆ ಎಂದರು.

ಭಾರತ ಮಧುಮೇಹಿಗಳು ಹೆಚ್ಚಿರುವ ಕೇಂದ್ರವಾಗಿದೆ. ಇದು ಬೇರೆ ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಸಾಂಕ್ರಾಮಿಕ ರೋಗಗಳಲ್ಲಿ ಹೆಚ್ಚಿನವು ಹೃದಯ ಸಂಬಂಧಿ ರೋಗಗಳಿಗೆ ಸಂಬಂಧಿಸಿದೆ. ಇದಕ್ಕಾಗಿ ಚಿಕಿತ್ಸೆ ನೀಡಲು ಅನೇಕ ವೈದ್ಯಕೀಯ ಉಪಕರಣಗಳು ಬೇಕಿದ್ದು, ಇದು ಸಾಮಾಜಿಕ ಪರಿಣಾಮವನ್ನೂ ಬೀರುತ್ತದೆ. ಇದು ಕೇವಲ ಉದ್ಯಮವಾಗಿರದೇ ಜನರ ಜೀವನದ ಮೇಲೆ ಪರಿಣಾಮ ಬೀರುವ ಅಂಶವೂ ಆಗಿದೆ ಎಂದು ಪ್ರತಿಪಾದಿಸಿದರು.

minister-sudhakar
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್

ಬೆಂಗಳೂರಲ್ಲಿ ಬೆಲೆಬಾಳುವ ಉಪಕರಣಗಳ ಉತ್ಪಾದನೆ

3-4 ಲಕ್ಷ ರೂ. ಬೆಲೆಬಾಳುವ ಉಪಕರಣಗಳನ್ನು ಬೆಂಗಳೂರಿನಲ್ಲೇ ಉತ್ಪಾದಿಸಲು ಐಐಟಿಪಿಎಲ್ ಕಂಪನಿ ಮೂಲಸೌಕರ್ಯ ಅಭಿವೃದ್ಧಿಪಡಿಸಿದೆ. ಇದು ಜನರಿಗೆ ಅನುಕೂಲವಾಗಲಿದೆ. ಇಂತಹ ಹೂಡಿಕೆದಾರರು ಹಾಗೂ ಸಂಶೋಧಕರಿಗೆ ಸರ್ಕಾರ ಎಲ್ಲ ಬಗೆಯ ನೆರವು ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

ಶೀಘ್ರದಲ್ಲೇ ಸಭೆ: ಕೋವಿಡ್​ಗೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದಕ್ಕೂ ಮೊದಲು ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗುವುದು. ಕೋವಿಡ್ ಒಂದು ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗಿಲ್ಲ.

ರಾಜ್ಯದಲ್ಲಿ ಶೇ. 83 ರಷ್ಟು ಮೊದಲ ಲಸಿಕೆ ಡೋಸ್, ಶೇ. 38 ರಷ್ಟು ಎರಡು ಡೋಸ್ ನೀಡಲಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ಕೋವಿಡ್​​​​ನ ತೀವ್ರ ಆತಂಕ ಇಲ್ಲ ಎಂದು ಸಚಿವ ಸುಧಾಕರ್​​ ಸ್ಪಷ್ಟಪಡಿಸಿದರು.

ಓದಿ: ಏರ್​ಪೋರ್ಟ್ ಆವರಣದಲ್ಲಿ ಒಳ್ಳೇ ಒಳ ಚರಂಡಿ ವ್ಯವಸ್ಥೆ ಇದೆ, ಭಾರಿ ಮಳೆಯಿಂದ ನೀರು ನಿಂತಿದೆ ಅಷ್ಟೇ .. ಸಿ ಶ್ರೀನಿವಾಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.