ಬೆಂಗಳೂರು: ಸಿಡಿ ಮಾಡಿಸಿದ್ದು, ಅವರೇ, ಅವರೇ ಅಂದ್ರೆ ಯಾರು ಕಾಂಗ್ರೆಸ್ ನವರಾ? ಎಂಬ ಪ್ರಶ್ನೆಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಗೊಂದಲದ ಉತ್ತರ ನೀಡಿದ್ದಾರೆ.
ದಿನೇಶ್ ಕಲ್ಲಳ್ಳಿ ದೂರು ವಾಪಸ್ ತಗೊಂಡಿದಾರೆ, ಆದ್ರೆ ರಮೇಶ್ ಜಾರಕಿಹೊಳಿಗೆ, ಅವ್ರ ಕುಟುಂಬಕ್ಕೆ ಆದ ನೋವು ವಾಪಸಾಗುತ್ತಾ? ರಾಜಕೀಯ ಮಾನ ಮರ್ಯಾದೆ ಹೋಯ್ತು, ಅದು ವಾಪಸ್ ಬರಲ್ಲ. ನಾವು ಮೈತ್ರಿ ಸರ್ಕಾರ ತೆಗೆದ್ವಿ ಅಂತಾ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ಏನೇನೋ ಸಂಚು ಮಾಡಿದಾರೆ ನಮ್ ವಿರುದ್ಧ. ಹೀಗಾಗಿ ನಾವು ಕೋರ್ಟ್ ಗೆ ಹೋಗಿದ್ದೇವೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ಕೋರ್ಟ್ನಲ್ಲಿ ಯಾಕೆ ಎಲ್ರೂ ಬೇಲ್ ತಗೋತಾರೆ? ಇವ್ರೆಲ್ಲ ನೆಟ್ಟಗಿದ್ರೆ ಬೇಲ್ ಯಾಕೆ ತಗೋತಾರೆ? ತೇಜೋವಧೆಯಿಂದ ರಕ್ಷಣೆಗೆ ಕಾನೂನಿನಲ್ಲಿ ಅವಕಾಶ ಇದೆ. ತೇಜೋವಧೆ ಮಾಡ್ತಾರೆ ಅಂತ ಕೋರ್ಟಿಗೆ ಹೋಗಿದ್ದೇವೆ ಎಂದು ಕೋರ್ಟ್‌ಗೆ ಅರ್ಜಿ ಹಾಕಿದ ಬಗ್ಗೆ ಎಸ್ ಟಿ ಸೋಮಶೇಖರ್ ಸಮರ್ಥನೆ ನೀಡಿದ್ರು.
ಎಪಿಎಂಸಿ ಸೆಸ್ ರದ್ದು ಮಾಡಲ್ಲ:
ಸರ್ಕಾರ ಎ ಪಿ ಎಂ ಸಿ ವರ್ತಕರಿಗೆ ವಿಧಿಸಲಾಗುತ್ತಿರುವ ಸೆಸ್ ಈಗ ಕಡಿಮೆ ಮಾಡಲಾಗಿದೆ. ಸದ್ಯ ಶೇ 6ರಷ್ಟು ಸೆಸ್ ಇದೆ, ಇದನ್ನ ರದ್ದು ಮಾಡುವ ಯಾವುದೇ ಚಿಂತನೆ ಇಲ್ಲ ಎಂದರು.
ಅಡುಗೆ ಸಿದ್ಧವಿತ್ತು, ಸಿದ್ದರಾಮಯ್ಯ ಬಂದು ಊಟ ಮಾಡಿದ್ರು: 71,324 ಕೋಟಿ ರೂ ಸಾಲ ಬಜೆಟ್ ನಲ್ಲಿ ಉಲ್ಲೇಖದ ಬಗ್ಗೆ ಮಾತನಾಡಿದ ಅವರು, ಸಾಲ ತಗೊಳ್ಳೋದು ಹೊಸದಲ್ಲ, ಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲೂ ಸಾಲ ತಗೊಂಡಿದ್ರು. ಕೊರೊನಾ ಹಿನ್ನೆಲೆ ಸಾಲ ತಗೊಳ್ಳೋದು ಅನಿವಾರ್ಯ ಇತ್ತು. ನಮ್ಮ ಅವಧಿಯಲ್ಲಿ ನೆರೆ, ಅತಿವೃಷ್ಟಿ ಇತ್ತು. ಸಿದ್ದರಾಮಯ್ಯ ಅವಧಿಯಲ್ಲಿ ನೆರೆ, ಅತಿವೃಷ್ಟಿ ಇತ್ತಾ? ಅಡುಗೆ ಸಿದ್ಧವಿತ್ತು, ಸಿದ್ದರಾಮಯ್ಯ ಬಂದು ಊಟ ಮಾಡಿದ್ರು. ನಮ್ಮ ಅವಧಿಯಲ್ಲಿ ನಾವೇ ಅಡುಗೆ ಮಾಡಬೇಕು, ನಾವೇ ಊಟ ಮಾಡಬೇಕು ಎಂದರು.