ಬೆಂಗಳೂರು : ಕೃಷಿ ಸಾಲ ವಿತರಣೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ.68.18ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೃಷಿ ಸಾಲ ವಿತರಣೆ ಹಾಗೂ ವಸೂಲಾತಿಗೆ 2021-22ನೇ ಸಾಲಿನ ಗುರಿ ಸಾಧಿಸಿದ್ದೇವೆ.
30.26 ಲಕ್ಷ ರೈತರಿಗೆ ರೂ.19,370 ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡಿದ್ದು, 0.60 ಲಕ್ಷ ರೈತರಿಗೆ 1,440 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ ನೀಡಲಾಗಿದೆ.
ಒಟ್ಟು 30.86 ಲಕ್ಷ ರೈತರಿಗೆ ರೂ. 20,810 ಕೋಟಿ ಸಾಲ ನೀಡಿದ್ದು, 2021ರ ಡಿ.31ರವರೆಗೆ ಕೃಷಿ ಸಾಲ ವಿತರಣೆ ಸಾಧನೆ 19.27 ಲಕ್ಷ ರೈತರಿಗೆ ರೂ.13,295 ಕೋಟಿಗಳ ಅಲ್ಪಾವಧಿ ಕೃಷಿ ಸಾಲ, 0.31 ಲಕ್ಷ ರೈತರಿಗೆ ರೂ.893 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ ಸೇರಿ ಒಟ್ಟು 19.58 ಲಕ್ಷ ರೈತರಿಗೆ ರೂ. 14,188 ಕೋಟಿ ಕೃಷಿ ಸಾಲ ಶೇಕಡವಾರು ಪ್ರಗತಿ ಶೇ. 68.18 ರಷ್ಟಾಗಿದೆ ಎಂದರು.
ಮೂರು ತಿಂಗಳಲ್ಲಿ ಉಳಿದ ಗುರಿಯನ್ನು ಸಾಧಿಸಲು ಸಂಬಂಧಿಸಿದ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಡಿಸಿಸಿ ಬ್ಯಾಂಕ್ನ ಅಲ್ಪಾವಧಿ ಮತ್ತು ಮಧ್ಯಮಾವಧಿ ಕೃಷಿ ಸಾಲ ವಸೂಲಾತಿ ಕ್ರಮವಾಗಿ ಶೇ. 94. 93 ಹಾಗೂ ಶೇ.76.29 ಆಗಿದೆ.
ಈ ಯೋಜನೆ ಅನುಷ್ಠಾನಕ್ಕಾಗಿ ಈ ವರ್ಷದಲ್ಲಿ ಸಹಕಾರ ಸಂಸ್ಥೆಗಳಿಗೆ ರೂ. 1, 012 ಕೋಟಿಗಳ ಬಡ್ಡಿ ಸಹಾಯಧನ ನೀಡಲು ಅನುದಾನ ಕಲ್ಪಿಸಲಾಗಿದೆ. ಇದುವರೆಗೆ ರೂ. 757.21 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.
ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ ವಿಚಾರದಲ್ಲೂ ಸಾಧನೆ ಆಗಿದೆ. ಕಳೆದ ವರ್ಷಾಂತ್ಯಕ್ಕೆ 19,196 ಸ್ವಸಹಾಯ ಗುಂಪುಗಳಿಗೆ 689 ಕೋಟಿ ವಿತರಿಸಿದ್ದೇವೆ. ಈ ಸಾಲಿನಲ್ಲಿ ವಸೂಲಾಗುವ ಸಾಲಗಳಿಗೆ ಬಡ್ಡಿ ಸಹಾಯಧನಕ್ಕಾಗಿ ಆಯ-ವ್ಯಯದಲ್ಲಿ ರೂ. 90.41 ಕೋಟಿಗಳನ್ನು ಒದಗಿಸಲಾಗಿದೆ.
ಇದುವರೆಗೆ ರೂ. 36.01 ಕೋಟಿಗಳ ಬಡ್ಡಿ ಸಹಾಯಧನವನ್ನು ಡಿಸಿಸಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯನ್ನು ಇನ್ನೂ ಹೆಚ್ಚಿನ ಸ್ವಸಹಾಯ ಗುಂಪುಗಳಿಗೆ ತಲುಪಿಸಲು ಸಂಬಂಧಿಸಿದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದರು.
ಸಹಕಾರ ಸಂಘಗಳಲ್ಲಿ ರೈತರ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿ ಶೇ.7ರ ಬಡ್ಡಿದರದಲ್ಲಿ ಕೃಷಿ ಅಡಮಾನ ಸಾಲ ವಿತರಣೆ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಮಾರುಕಟ್ಟೆ ಸಹಕಾರ ಸಂಘಗಳು, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ತಮ್ಮ ಮೂರು ತಿಂಗಳಲ್ಲಿ ಉಳಿದ ಗುರಿಯನ್ನು ಸಾಧಿಸಲು ಸಂಬಂಧಿಸಿದ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಡಿಸಿಸಿ ಬ್ಯಾಂಕಿನ ಅಲ್ಪಾವಧಿ ಮತ್ತು ಮಧ್ಯಮಾವಧಿ ಕೃಷಿ ಸಾಲ ವಸೂಲಾತಿ ಕ್ರಮವಾಗಿ ಶೇ.94.93 ಹಾಗೂ ಶೇ.76.29 ಆಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಈ ವರ್ಷದಲ್ಲಿ ಸಹಕಾರ ಸಂಸ್ಥೆಗಳಿಗೆ ರೂ.1,012 ಕೋಟಿಗಳ ಬಡ್ಡಿ ಸಹಾಯಧನ ನೀಡಲು ಅನುದಾನ ಕಲ್ಪಿಸಲಾಗಿದೆ. ಇದುವರೆಗೆ ರೂ. 757.21 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.
ಸಹಕಾರ ಸಂಘಗಳಲ್ಲಿ ರೈತರ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿ ಶೇ.7ರ ಬಡ್ಡಿದರದಲ್ಲಿ ಕೃಷಿ ಅಡಮಾನ ಸಾಲ ವಿತರಣೆ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಮಾರುಕಟ್ಟೆ ಸಹಕಾರ ಸಂಘಗಳು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ತಮ್ಮ ಗೋದಾಮುಗಳಲ್ಲಿ ಶೇಖರಣೆ ಮಾಡಿ ಶೇ.7ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಈ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 18,958 ರೈತರಿಗೆ ರೂ.306 ಕೋಟಿ ರೂ.ಗಳ ಸಾಲ ವಿತರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆ (Agri Infra fund) ಮತ್ತು ನಬಾರ್ಡ್‌ನ ಪ್ಯಾಕ್ಸ್ಗಳನ್ನು ಬಹುಪಯೋಗಿ ಕೇಂದ್ರಗಳನ್ನಾಗಿ ಸ್ಥಾಪಿಸುವ ಯೋಜನೆ ಅಡಿ, ಈ ಯೋಜನೆಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಗೋದಾಮು ಸೌಲಭ್ಯ ಮತ್ತು ಕೊಯ್ದು ನಂತರದ ಮೂಲಸೌಕರ್ಯವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ.
ನಿಗದಿಪಡಿಸಿದ ಗುರಿ 1000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನಬಾರ್ಡ್ 873 ಸಂಘಗಳಿಗೆ ರೂ.302 ಕೋಟಿಗಳ ಸಾಲವನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು 581 ಸಂಘಗಳಿಗೆ ರೂ.72.73 ಕೋಟಿಗಳನ್ನು ಬಿಡುಗಡೆ ಮಾಡಿರುತ್ತವೆ. ರೈತರಿಗೆ ತ್ವರಿತವಾಗಿ ಕೃಷಿ ಸಾಲ ದೊರೆಯಲು ಅನುಕೂಲವಾಗಲು ಇ ಆಡಳಿತ ಇಲಾಖೆಯ FRUITS ತಂತ್ರಾಂಶ ಬಳಸಿ ಆನ್‌ಲೈನ್ ಮೂಲಕ ಪಹಣಿಯಲ್ಲಿ ಸಾಲದ ಋಣವನ್ನು ದಾಖಲಿಸುವ ಬಗ್ಗೆ ಕ್ರಮಕೈಗೊಳ್ಳಲಾಗಿದೆ.
ಪ್ಯಾಕ್ಸ್, ಡಿಸಿಸಿ ಬ್ಯಾಂಕ್ ಶಾಖೆ ಮತ್ತು ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ರೈತರು ಕೃಷಿ ಸಾಲ ಪಡೆಯಲು ಸಾಲದ (charge creation/Mortgage) ಪಹಣಿಯಲ್ಲಿ ದಾಖಲಿಸಲು ಮತ್ತು ಸಾಲ ನೀರುವಳಿ ಮಾಡಿದಾಗ ಬಿಡುಗಡೆ ಪತ್ರ ಪಡೆಯಲು ರೈತರು ಖುದ್ದಾಗಿ ಉಪನೋಂದಣಾಧಿಕಾರಿಗಳ ಕಚೇರಿಗೆ ದಾಖಲೆ ಸಲ್ಲಿಸಬೇಕಿತ್ತು. ಈ ವ್ಯವಸ್ಥೆಯನ್ನು FRUITS ತಂತ್ರಾಂಶ ಬಳಸಿ ಆನ್‌ಲೈನ್ ಮಾಡಲಾಗಿದೆ. ಈ ವ್ಯವಸ್ಥೆಯಿಂದ ರೈತರಿಗೆ ತ್ವರಿತವಾಗಿ ಸಾಲದ ಋಣವನ್ನು ಪಹಣಿಯಲ್ಲಿ ದಾಖಲಿಸಿ ಸಾಲ ದೊರೆಯಲು ಸಹಾಯವಾಗಿರುತ್ತದೆ ಮತ್ತು ರೈತರು ಉಪ ನೋಂದಣಾಧಿಕಾರಿಗಳ ಕಚೇರಿಗೆ ಖುದ್ದಾಗಿ ಭೇಟಿ ನೀಡುವ ಅವಕಾಶ ಇರುವುದಿಲ್ಲ ಎಂದರು.
ಈ ರಾಜ್ಯದಲ್ಲಿ 6,569 ಪ್ಯಾಕ್/ಡಿಸಿಸಿ ಬ್ಯಾಂಕಿನ ಶಾಖೆ/ ಪಿಕಾರ್ಡ್ ಬ್ಯಾಂಕುಗಳಿದ್ದು, ಇದುವರೆಗೆ 4,857 ಸಂಘ ಬ್ಯಾಂಕಿನ ಶಾಖೆಗಳಿಗೆ ಯೂಸರ್ ಐಡಿ ಮತ್ತು ಡಿಜಿಟಲ್ ಕೀ ನೀಡಿ, ಆನ್‌ಲೈನ್ ಮೂಲಕ ಕಾರ್ಯನಿರ್ವಹಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 2022ರವರೆಗೆ ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೌತಿಕವಾಗಿಯೂ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಏಪ್ರಿಲ್ 2022ರಿಂದ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್ ಮೂಲಕವೇ ದಾಖಲೆ ಸಲ್ಲಿಸಲು ಕ್ರಮವಹಿಸಲಾಗಿದೆ ಎಂದು ವಿವರಿಸಿದರು.
ಪಟ್ಟಣ ಸಹಕಾರ ಬ್ಯಾಂಕುಗಳ ಮಾಹಿತಿ ನೀಡಿದ ಸಚಿವರು, ರಾಜ್ಯದಲ್ಲಿ ಒಟ್ಟು 264 ಪಟ್ಟಣ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು 1,122 ಶಾಖೆಗಳನ್ನು ಹೊಂದಿರುತ್ತವೆ. ಈ ಪಟ್ಟಣ ಸಹಕಾರ ಬ್ಯಾಂಕುಗಳು 2021 ರ ಮಾ.31ರ ಅಂತ್ಯಕ್ಕೆ ರೂ.45,580.09 ಕೋಟಿ ಠೇವಣಾತಿ, ರೂ 52,593,94 ಕೋಟಿ ಮಡಿಯುವ ಬಂಡವಾಳ ಹೊಂದಿದ್ದು, 29,219.38 ಕೋಟಿ ಮತ್ತು ಮುಂಗಡವನ್ನು ನೀಡಿರುತ್ತವೆ ಹಾಗು ರೂ. 301.34 ಕೋಟಿ ಲಾಭವನ್ನು ಗಳಿಸಿರುತ್ತವೆ. ಈ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ 18 ಪಟ್ಟಣ ಬ್ಯಾಂಕುಗಳನ್ನು ದುರ್ಬಲ ಸಹಕಾರ ಬ್ಯಾಂಕ್ಗಳೆಂದು ಗುರುತಿಸಲಾಗಿರುತ್ತವೆ ಎಂದರು.
ಸಭೆಯಲ್ಲಿ ಸಹಾಯಕರ ಸಂಘಗಳ ನಿಬಂಧಕರಾದ ಎಸ್. ಜಿಯಾ ಉಲ್ಲಾ ಸಹಕಾರ ಸಂಘಗಳ ಅಪರ ನಿಬಂಧಕರಾದ (ವಸತಿ ಮತ್ತು ಇತರೆ) ಕೆ. ಎಸ್. ನವೀನ್, ಸಹಕಾರ ಸಂಘಗಳ ಅಪರ ನಿಬಂಧಕರಾದ (ಪತ್ತು) ಎ. ಸಿ. ದಿವಾಕರ್, ಸಹಕಾರ ಸಂಘಗಳ ಅಪರ ನಿಬಂಧಕರಾದ (ಕೈಗಾರಿಕೆ ಮತ್ತು ಹೈನುಗಾರಿಕೆ) ವೈ. ಹೆಚ್. ಗೋಪಾಲಕೃಷ್ಣ, ಸಹಕಾರ ಸಂಘಗಳ ಅಪರ ನಿಬಂಧಕರಾದ (ಬಳಕೆ ಮತ್ತು ಮಾರಾಟ) ಕೆ. ಎಂ. ಆಶಾ, ಸಹಕಾರ ಸಂಘಗಳ ಬೆಂಗಳೂರು ಪ್ರಾಂತದ ಜಂಟಿ ನಿಬಂಧಕರಾದ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
ಓದಿ: ಕೊರೊನಾ ಲಸಿಕೆ ಮೊದಲ ಡೋಸ್.. ಶೇ.100 ರಷ್ಟು ಸಾಧನೆ: ಸಚಿವ ಡಾ. ಕೆ. ಸುಧಾಕರ್