ETV Bharat / state

ರಾಜ್ಯ ಬಜೆಟ್​: ಸಿಎಂ ಬಿಎಸ್​ವೈಗೆ ಆರತಿ ಬೆಳಗಿ ಶುಭ ಕೋರಿದ ಸಚಿವೆ ಶಶಿಕಲಾ ಜೊಲ್ಲೆ - ಶುಭಕೋರಿದ ಶಶಿಕಲಾ ಜೊಲ್ಲೆ

ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆ ಸಚಿವೆ ಶಶಿಕಲಾ ಜೊಲ್ಲೆ ಅವರು ಯಡಿಯೂರಪ್ಪಗೆ ಆರತಿ ಬೆಳಗಿ ತಿಲಕ ಇಟ್ಟು ಬಜೆಟ್ ಮಂಡನೆಗೆ ಶುಭ ಕೋರಿದ್ದಾರೆ.

minister shashikala jolle wishes to  BS yadiyurappa's budget
ಶಶಿಕಲಾ‌ಕಲಾ ಜೊಲ್ಲೆ
author img

By

Published : Mar 8, 2021, 11:55 AM IST

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಜೆಟ್​​​​ನಲ್ಲಿ ಮಹಿಳೆಯರಿಗೆ ಆದ್ಯತೆ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ‌ ಸಚಿವೆ ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಭ ಕೋರಿದ ಶಶಿಕಲಾ ಜೊಲ್ಲೆ
ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಸಿಎಂ ನಿವಾಸ ಕಾವೇರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಶಶಿಕಲಾ ಜೊಲ್ಲೆ, ಶಾಸಕಿಯರಾದ ರೂಪಾಲಿ ನಾಯ್ಕ್, ಭಾರತಿ ಶೆಟ್ಟಿ ಭೇಟಿ ನೀಡಿದ್ದರು. ಸಿಎಂ ಯಡಿಯೂರಪ್ಪ ಅವರಿಂದ ಮಹಿಳಾ ದಿನದ ಶುಭಾಶಯ ಸ್ವೀಕರಿಸಿದರು. ನಂತರ ಬಜೆಟ್ ಮಂಡನೆಗೆ ಶುಭ ಕೋರಿ ಸಚಿವೆ ಮತ್ತು ಶಾಸಕಿಯರು ಸಿಎಂ ಯಡಿಯೂರಪ್ಪಗೆ ಆರತಿ ಬೆಳಗಿ ತಿಲಕ ಇಟ್ಟರು. ನಂತರ ಬೊಕ್ಕೆ ನೀಡಿ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ನಾಡಿನ ಸಮಸ್ತ ಜನತೆಗೆ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿದರು. ಮಹಿಳಾ ದಿನಾಚರಣೆಯಂದು ಸಿಎಂ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸರ್ಕಾರ ಬಂದಾಗಿನಿಂದ ಹಲವು ಸವಾಲು ಎದುರಾಗಿದ್ದವು. ನೆರೆ, ಕೊರೊನಾ ಸೇರಿದಂತೆ ಹಲವು ಸವಾಲುಗಳು ಎದುರಾಗಿದ್ದವು. ಎಲ್ಲಿ ಮಹಿಳೆಯರಿಗೆ ಗೌರವ ಸಿಗಲಿದೆ, ಅಲ್ಲಿ ಸಮೃದ್ದಿ ಇರಲಿದೆ. ನಾಡಿನ ಜನತೆಗೆ ಒಳ್ಳೆಯದಾಗಲಿ. ಬರುವ ದಿನಗಳಲ್ಲಿ ನಾಡಿನ ಜನತೆಗೆ ಸುಖ ಶಾಂತಿ ದೊರಕಲಿ. ಮಹಿಳೆಯರು, ಗರ್ಭಿಣಿಯರಿಗೆ, ವಿಕಲ‌ಚೇತನರಿಗೆ ವಿಶೇಷ ಸವಲತ್ತಿಗೆ ಬೇಡಿಕೆ ಇಟ್ಟಿದ್ದೇವೆ. ಬೇರೆ ಇಲಾಖೆಗೂ ಉತ್ತಮ ಬಜೆಟ್ ಸಿಗಲಿದೆ ಅನ್ನೋ ವಿಶ್ವಾಸವಿದೆ ಎಂದರು.
ಸಚಿವರ ಭೇಟಿ: ಸಿಎಂ ನಿವಾಸಕ್ಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ್ ಸೇರಿದಂತೆ ಹಲವು ಸಚಿವರು ಭೇಟಿ ನೀಡಿ ಬಜೆಟ್ ಮಂಡನೆಗೆ ಶುಭ ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.