ETV Bharat / state

ಸಚಿವ ಸ್ಥಾನದಿಂದ ಕೈಬಿಡುವುದು, ಮುಂದುವರಿಸುವುದು ಸಿಎಂ ಮತ್ತು ಹೈ ಕಮಾಂಡ್ ನಿರ್ಧಾರ: ಸಚಿವೆ ಜೊಲ್ಲೆ - ಸಚಿವ ಸಂಪುಟ ಪುನಾರಚನೆ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ

ಕೆಲ ಸಚಿವರು ಸರಿಯಾಗಿ ಕೆಲಸ ಮಾಡ್ತಿಲ್ಲ ಅನ್ನೋದು ಕೆಲವರ ಅನುಭವ ಇರಬಹುದು ಅಷ್ಟೇ. ಆ ರೀತಿಯಲ್ಲಿ ಏನೂ ಆಗಿಲ್ಲ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಸಿಎಂ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

minister-shashikala-jolle
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು
author img

By

Published : Feb 3, 2022, 4:18 PM IST

ಬೆಂಗಳೂರು: ಸಚಿವ ಸ್ಥಾನದಿಂದ ತಮ್ಮನ್ನು ಕೈ ಬಿಡೋದು, ಮುಂದುವರಿಸೋದು ಸಿಎಂ ಹಾಗೂ ವರಿಷ್ಟರ ನಿರ್ಧಾರ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಕೆಲ ಸಚಿವರು ಸರಿಯಾಗಿ ಕೆಲಸ ಮಾಡ್ತಿಲ್ಲ ಅನ್ನೋದು ಕೆಲವರ ಅನುಭವ ಇರಬಹುದು ಅಷ್ಟೇ. ಆ ರೀತಿಯಲ್ಲಿ ಏನೂ ಆಗಿಲ್ಲ. ಸಿಎಂ , ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದರು.

ಸಚಿವ ಸಂಪುಟ ಪುನಾರಚನೆ ಹಾಗೂ ಕೆಲ ಸಚಿವರು ಸೋಮಾರಿಗಳು, ಕರೆಗೆ ಸ್ಪಂದಿಸಲ್ಲ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಚಿವ ಸಂಪುಟದ ವಿಸ್ತರಣೆ ವಿಚಾರದಲ್ಲಿ ನಾನು ಏನೂ ಮಾತನಾಡುವುದಿಲ್ಲ. ಅವರವರ ಅನುಭವವನ್ನು ಹೇಳಿರಬಹುದು. ಸಚಿವ ಸಂಪುಟ ಬದಲಾವಣೆ ಬಗ್ಗೆ ನಾನೇನು ಮಾತನಾಡಲಾರೆ ಎಂದು ಹೇಳಿದರು.

ಅರ್ಚಕರಿಂದ ಸಚಿವೆಗೆ ಮನವಿ ಪತ್ರ: ರಾಜ್ಯದಲ್ಲಿ ಹಿಂದೂ ದೇವಾಲಯಗಳ ಖಾಸಗೀಕರಣ ವಿರೋಧಿಸಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.

ವಿಕಾಸಸೌಧದಲ್ಲಿ ಒಕ್ಕೂಟದ ಮುಖ್ಯಸ್ಥ ಕೆಎಸ್ಎನ್ ದೀಕ್ಷಿತ್ ನೇತೃತ್ವದಲ್ಲಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ಭೇಟಿ ವೇಳೆ ರಾಜ್ಯದಲ್ಲಿ ಹಿಂದೂ ದೇವಾಲಯಗಳ ಖಾಸಗೀಕರಣಕ್ಕೆ ಸರ್ಕಾರದ ನಿರ್ಧಾರದಿಂದ ಆಗುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಿದರು. ದೇವಾಲಯಗಳ ಸ್ವಾಧೀನದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಗಳಿವೆ. ಖಾಸಗೀಕರಣ ಮಾಡಿದರೆ ಅದಕ್ಕೆ ಸಮಸ್ಯೆ ಆಗಲಿದೆ ಎಂದು ಮನವರಿಕೆ ಮಾಡಿದರು.

ಅರ್ಚಕರಿಗೆ 60 ವರ್ಷಕ್ಕೆ ನಿವೃತ್ತಿ ಘೋಷಣೆ ಹಿಂಪಡೆಯಬೇಕಾಗಿ ಮನವಿ ಮಾಡಿದರು. ಪ್ರತಿ ತಿಂಗಳು ಪೂಜಾ ಸಾಮಗ್ರಿಗಳಿಗೆ ನೀಡುತ್ತಿರುವ ತಸ್ತೀಕ್ ಹಣ 4 ಸಾವಿರ ರೂ.ನಿಂದ 5 ಸಾವಿರಕ್ಕೆ ಏರಿಕೆ ಮಾಡುವಂತೆ ವಿನಂತಿ ಮಾಡಿದರು.

ಓದಿ: ಸಚಿವ ಸಂಪುಟ‌ ವಿಸ್ತರಣೆ ಬಗ್ಗೆ ಗಂಧ ಗಾಳಿ ಗೊತ್ತಿಲ್ಲ: ಸಚಿವ ಸೋಮಶೇಖರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.