ETV Bharat / state

ಗೋರಖ್​ಪುರಕ್ಕೆ ಸದಾನಂದ ಗೌಡ ಭೇಟಿ : ಹೆಚ್‌ಯುಆರ್‌ಎಲ್ ಪುನಶ್ಚೇತ್ ಕಾಮಗಾರಿ ಪರಿಶೀಲನೆ..!

author img

By

Published : Mar 5, 2021, 8:11 AM IST

ಅಯೋಧ್ಯೆ ಹಾಗೂ ವಾರಾಣಸಿಯಲ್ಲಿ ರಾಸಾಯನಿಕ ಇಲಾಖೆ ಅಧೀನದಲ್ಲಿ ಬರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಸಂಸ್ಥೆಯ (ಸಿಪೆಟ್) ಕೇಂದ್ರಗಳನ್ನು ಅಭಿವೃದ್ಧಿಪಡಿಲಾಗುತ್ತಿದೆ. ಬಹುಶಃ ಇನ್ನೊಂದು ತಿಂಗಳಲ್ಲಿ ಪ್ರಧಾನಿ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸದಾನಂದ ಗೌಡ ವಿವರಿಸಿದರು.

Minister Sadananda Gowda visits Ghorakpur
ಘೊರಕ್ಪುರಕ್ಕೆ ಸದಾನಂದ ಗೌಡ ಭೇಟಿ

ಬೆಂಗಳೂರು: ಅಂದಾಜು 8 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುತ್ತಿರುವ ಗೋರಖ್​ಪುರ ಹಿಂದೂಸ್ತಾನ್ ಉರ್ವಾರಕ್ ರಸಾಯನ ನಿಯಮಿತವು (ಹೆಚ್.ಯು.ಆರ್.ಎಲ್) ಜುಲೈ ತಿಂಗಳಲ್ಲಿ ಯೂರಿಯಾ ಉತ್ಪಾದನೆ ಆರಂಭಿಸಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಕಾರ್ಖಾನೆಗೆ ಭೇಟಿ ನೀಡಿ, ಪುನಶ್ಚೇತನ ಕಾಮಗಾರಿ ಪ್ರಗತಿ ಪರಿಶೀಲಿಸಿದ ನಂತರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಶೇಕಡಾ 98 ರಷ್ಟು ಕಾಮಗಾರಿ ಮುಗಿದಿದ್ದು, ಜುಲೈ ಒಳಗೆ ಬಾಕಿ ಕೆಲಸ ಪೂರೈಸಿ ಕಾರ್ಖಾನೆ ಮರು ಆರಂಭಿಸಲಾಗುವುದು ಎಂದರು.

ಗೋರಖ್​ಪುರಕ್ಕೆ ಸದಾನಂದ ಗೌಡ ಭೇಟಿ

ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆ ಸಾಮರ್ಥ್ಯದ ಈ ಕಾರ್ಖಾನೆ ಪುನಾರಂಭದಿಂದ ಪೂರ್ವಾಂಚಲ ಭಾಗದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಕೆಗೆ ಅನುಕೂಲವಾಗಲಿದೆ. ಸುಮಾರು 1500 ಯುವಕ, ಯುವತಿಯರಿಗೆ ನೇರ ಉದ್ಯೋಗ ದೊರೆಯಲಿದೆ. ಹಾಗೆಯೇ ಈ ಭಾಗದ ಆರ್ಥಿಕ ಚಟುವಟಿಕೆ ಚುರುಕುಗೊಂಡು ದೊಡ್ಡ ಪ್ರಮಾಣದಲ್ಲಿ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸದಾನಂದ ಗೌಡ ವಿವರಿಸಿದರು.

ಭಾರತಕ್ಕೆ ಪ್ರತಿವರ್ಷ ಸುಮಾರು 320 ರಿಂದ 330 ಲಕ್ಷ ಟನ್ ಯೂರಿಯಾ ಬೇಕು. ಈ ಪೈಕಿ 80 ರಿಂದ 90 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಅಧಿಕಾರವಹಿಸಿಕೊಂಡ ನಂತರ ದೇಶದ ಎಲ್ಲ ವಲಯವನ್ನು ಸ್ವಾವಲಂಬಿಗೊಳಿಸುವ ದೊಡ್ಡ ಪ್ರಯತ್ನ ಆರಂಭವಾಯಿತು. ಇದೇ ಹಿನ್ನೆಲೆಯಲ್ಲಿ, ವಿವಿಧ ಕಾರಣಗಳಿಗಾಗಿ ದಶಕಗಳಿಂದ ಸ್ಥಗಿತಗೊಂಡಿದ್ದ ಗೋರಖ್ಪುರ, ರಾಮಗುಂಡಂ, ಸಿಂಗ್ರಿ, ಬರೂನಿ ಮತ್ತು ತಾಲ್ಚೇರ್ ರಸಗೊಬ್ಬರ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಲು 2016ರಲ್ಲಿ ಕ್ರಮ ಕೈಗೊಳ್ಳಲಾಯಿತು. (ಅಂದಾಜು ವೆಚ್ಚ 50 ಸಾವಿರ ಕೋಟಿ ರೂಪಾಯಿ). ರಾಮಗುಂಡಂ ಘಟಕದ ಟ್ರಯಲ್ ರನ್ ಈಗಾಗಲೇ ಆರಂಭವಾಗಿದೆ. ಜುಲೈನಲ್ಲಿ ಎಚ್.ಯು.ಆರ್.ಎಲ್, 2021ರ ಡಿಸೆಂಬರ್ನ​ಲ್ಲಿ ಸಿಂಗ್ರಿ ಮತ್ತು ಬರೂನಿ ಘಟಕಗಳು ಕಾರ್ಯಾರಂಭ ಮಾಡಲಿವೆ. ಪುನಶ್ಚೇತನಗೊಳಿಸುತ್ತಿರುವ ಈ ಎಲ್ಲ ಘಟಕಗಳ ಉತ್ಪಾದನಾ ಸಾಮರ್ಥ್ಯ ತಲಾ 12.7 ಲಕ್ಷ ಟನ್. ಹಾಗೇಯೇ ತಮ್ಮ ಇಲಾಖೆಯು ಗೋರಖ್​​ಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್ (ಪ್ಲಾಸ್ಟಿಕ್ ಸಂಬಂಧಿತ ಕೈಗಾರಿಕಾಭಿವೃದ್ಧಿ ಕ್ಲಸ್ಟರ್) ಸ್ಥಾಪಿಸಲಿದೆ. ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಈಗಾಗಲೇ 52 ಎಕರೆ ಜಾಗ ಒದಗಿಸಿದೆ. ಮುಂದಿನ ತಿಂಗಳ ಒಳಗಾಗಿ ವಿಸ್ತೃತ ಯೋಜನಾ ವರದಿ ಕಳುಹಿಸುವಂತೆ ತಿಳಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಅದೇ ರೀತಿ ಅಯೋಧ್ಯಾ ಹಾಗೂ ವಾರಾಣಸಿಯಲ್ಲಿ ರಾಸಾಯನಿಕ ಇಲಾಖೆ ಅಧೀನದಲ್ಲಿ ಬರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಸಂಸ್ಥೆಯ (ಸಿಪೆಟ್) ಕೇಂದ್ರಗಳನ್ನು ಅಭಿವೃದ್ಧಿಪಡಿಲಾಗುತ್ತಿದೆ. ಬಹುಶಃ ಇನ್ನೊಂದು ತಿಂಗಳಲ್ಲಿ ಪ್ರಧಾನಿ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸದಾನಂದ ಗೌಡ ವಿವರಿಸಿದರು.

ಓದಿ : ವಿಶ್ವಪ್ರಿಯ ಫೈನಾನ್ಸ್​ ವಂಚನೆ ಕೇಸ್​: ಸಿಬಿಐ ತನಿಖೆ ಕೋರಿದ ಅರ್ಜಿ, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಕೋವಿಡ್ ಸಂದರ್ಭದಲ್ಲಿ ಎಲ್ಲ ಅಡಚಣೆಗಳ ಮಧ್ಯೆಯೂ ರಸಗೊಬ್ಬರ ಉತ್ಪಾದನೆ, ಸಾಗಣೆ ಹಾಗೂ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಯಿತು. ಬಹುತೇಕ ವಲಯಗಳು ಹಿಂಜರಿತ ಅನುಭವಿಸಿದವು. ಆದರೆ, ರಸಗೊಬ್ಬರ ಕ್ಷೇತ್ರ ಮಾತ್ರ ಧನಾತ್ಮಕ ಪ್ರಗತಿ ಸಾಧಿಸಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಯೂರಿಯಾ ಶೇಕಡಾ 16 ರಷ್ಟು ಹಾಗೂ ಸಂಯುಕ್ತ ಗೊಬ್ಬರ ಶೇಕಡಾ 40 ರಷ್ಟು ಹೆಚ್ಚು ಮಾರಾಟವಾಯಿತು ಎಂದು ಸದಾನಂದ ಗೌಡ ವಿವರಿಸಿದರು.

ರಸಗೊಬ್ಬರ ಸಬ್ಸಿಡಿ ನೇರ ರೈತರಿಗೆ ವರ್ಗಾವಣೆ: ರಸಗೊಬ್ಬರ ಸಬ್ಸಿಡಿಯನ್ನು ರೈತರಿಗೆ ಉತ್ಪಾದಕರ ಮೂಲಕ ನೀಡಲಾಗುತ್ತಿತ್ತು. (ರಸಗೊಬ್ಬರಗಳಿಗೆ ಕಡಿಮೆ ದರ ನಿದಿಪಡಿಸುವ ಮೂಲಕ) ಇದರ ಬದಲಿಗೆ ಇನ್ನು ಮುಂದೆ ರಸಗೊಬ್ಬರ ಖರೀದಿಸುವ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು. ಈ ಬಗ್ಗೆ ಇಲಾಖೆಯು ತಾಂತ್ರಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವರು ಪ್ರಕಟಿಸಿದರು.

ಇದಕ್ಕೂ ಮೊದಲು ಮಾತನಾಡಿದ ಯೋಗಿ ಆದಿತ್ಯನಾಥ್ - ಪೂರ್ವ ನಿಗದಿಯಂತೆ ಕಾರ್ಖಾನೆ ಪುನಶ್ಚೇತನ ಕಾಮಗಾರಿಯನ್ನು ಪೂರೈಸುತ್ತಿರುವುದಕ್ಕೆ ಹಾಗೂ ಉತ್ತರ ಪ್ರದೇಶಕ್ಕೆ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಂಡಿದ್ದಕ್ಕಾಗಿ ಸಚಿವ ಸದಾನಂದ ಗೌಡ ಅವರಿಗೆ ಧನ್ಯವಾದ ಅರ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.