ETV Bharat / state

ಶಾಲೆಗಳಲ್ಲಿ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ: ಸಚಿವರ ಸ್ಪಷ್ಟನೆ - ಹಿಜಾಬ್ ಹೈಕೋರ್ಟ್​ ಆದೇಶ

ಕರ್ನಾಟಕ ಸರ್ಕಾರದ ಹಿಜಾಬ್ ಆದೇಶ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಸಮವಸ್ತ್ರ ಪಾಲನೆ ಆದೇಶ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ಧಾರೆ.

ಹಿಜಾಬ್
ಹಿಜಾಬ್
author img

By

Published : Oct 13, 2022, 12:49 PM IST

Updated : Oct 13, 2022, 1:34 PM IST

ಬೆಂಗಳೂರು: ಸುಪ್ರೀಂ ಕೋರ್ಟ್​ನಲ್ಲಿ ಹಿಜಾಬ್ ಕುರಿತು ವಿಭಿನ್ನ ತೀರ್ಪು ಬಂದಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಫೆಬ್ರವರಿ 5ರಂದು ಹೊರಡಿಸಿದ ಆದೇಶ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ. ಸಮವಸ್ತ್ರದ ಆದೇಶ ಪಾಲನೆ ಮುಂದುವರೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ಬೆಸ್ಕಾಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.5 ರಂದು ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಕುರಿತು ಸುತ್ತೊಲೆ ಹೊರಡಿಸಿದೆ. ಇದರಿಂದ ಹಿಂದೆ ಸರಿಯೋ ಪ್ರಶ್ನೆ ಇಲ್ಲ. ಸುಪ್ರೀಂ ಕೋರ್ಟ್​ನಲ್ಲಿ ಇಂದು ವಿಭಿನ್ನವಾಗಿ ತೀರ್ಪು ಬಂದಿದೆ. ಹಾಗಾಗಿ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾರೂ ಹಿಜಾಬ್ ಧರಿಸಿ ಶಾಲೆಗೆ ಬರುವಂತಿಲ್ಲ. ಕಾಂಗ್ರೆಸ್, ಪಿಎಫ್ಐ ಅರ್ಥ ಮಾಡಿಕೊಳ್ಳಬೇಕು, ಸಮಾಜಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಕೋರ್ಟ್ ಹಿಜಾಬ್ ಧರಿಸಿ ಬರಬಾರದು ಅಂದಾಗ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರೆ. ಅಂದರೆ ಇದರಿಂದಲೇ ಅರ್ಥ ಆಗುತ್ತದೆ ಮತೀಯ ಶಕ್ತಿ ಮತ್ತು ಇದರ ಹಿಂದೆ ಷಡ್ಯಂತ್ರ ಇದೆ ಅಂತ. ಮುಸ್ಲಿಂ ರಾಷ್ಟ್ರ ಇರಾನ್, ಇರಾಕ್‌ನಲ್ಲಿ ಹಿಜಾಬ್ ಬೇಡ ಅಂತ ಇದ್ದಾಗ, ನಮ್ಮ ರಾಜ್ಯದ ಶಾಲೆ- ಕಾಲೇಜಕುಗಳಲ್ಲಿ ಹಿಜಾಬ್ ಬೇಕು ಅಂತ ಇಲ್ಲಿ ಪ್ರತಿಭಟನೆ ಮಾಡುತ್ತಾರೆ. ಪಿಎಫ್ಐ ಇನ್ನಾದರೂ ಬದಲಾಗಬೇಕು. ಈಗಾಗಲೇ ಪಿಎಫ್ಐ ನಿಷೇಧ ಮಾಡಲಾಗಿದೆ. ಕಾಂಗ್ರೆಸ್ ಇದನ್ನು ಪುಷ್ಠೀಕರಿಸುವ ಕೆಲಸ ಮಾಡಿತು. ಸಿದ್ದರಾಮಯ್ಯ ಸ್ವಾಮೀಜಿ ಕೂಡ ಕಾವಿ ಹಾಕ್ತಾರೆ ಅಂತ ಹೇಳಿದರು. ಕಾಂಗ್ರೆಸ್ ಕೂಡ ಹಿಜಾಬ್ ಚೋಡೋ ಅಂತ ಭಾರತ್ ಜೋಡೋದಲ್ಲಿ ಜೋಡಿಸಿಕೊಳ್ಳಲಿ. ಇದರಿಂದ ಒಳ್ಳೆಯ ವಾತಾವರಣ ಸೃಷ್ಟಿಯಾಗಲಿದೆ. ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿ ಕಾಣಬೇಕು ಅಂತ ಶಾಲೆಯಲ್ಲಿ ಸಮವಸ್ತ್ರ ತರಲಾಗಿದೆ. ಯಾವುದೇ ಕಾರಣಕ್ಕೂ ಫೆಬ್ರವರಿ 5ರಂದು ಹೊರಡಿಸಿದ ಆದೇಶ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ ಎಂದರು.

ಸಚಿವರ ಸ್ಪಷ್ಟನೆ

ಹಿಜಾಬ್ ಬಗ್ಗೆ ರಾಜ್ಯ ಸರ್ಕಾರದ ನಿಲುವಿನಲ್ಲಿ ಬದಲಾವಣೆ ಇಲ್ಲ: ಆರ್.‌ಅಶೋಕ್:

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಸರ್ಕಾರಿ ಶಾಲೆಗೆ ಬರುವವರು ಸಮವಸ್ತ್ರ ಪಾಲನೆ ಮಾಡಬೇಕು. ಇದು ನಿಯಮವಾಗಿದೆ. ಇದರ ವಿರುದ್ಧವಾಗಿ ಕೆಲವು ವಿದ್ಯಾರ್ಥಿಗಳು ಕೋರ್ಟ್​ಗೆ ಹೋಗಿದ್ದಾರೆ. ಹೈಕೋರ್ಟ್ ಸರ್ಕಾರ ಪರವಾಗಿ ಬಂದಿತ್ತು. ಇದೀಗ ಸುಪ್ರೀಂ ಕೋರ್ಟ್​ನಲ್ಲಿ ಭಿನ್ನ ತೀರ್ಪು ಬಂದಿದೆ. ಇವಾಗ ಸಿಜೆ ಪೀಠಕ್ಕೆ ವರ್ಗಾವಣೆ ಆಗಿದ್ದು, ಅಲ್ಲಿ ಕೂಡಾ ಸರ್ಕಾರದ ನಿಲುವು ಇದೇ ಇರುತ್ತದೆ ಎಂದರು.

ವಿದ್ಯಾರ್ಥಿಗಳು ಮನೆಯಲ್ಲಿ ಏನು ಬೇಕಾದರೂ ವಸ್ತ್ರ ಹಾಕಲಿ. ಶಾಲೆಯಲ್ಲಿ ಬರುವಾಗ ಸಮವಸ್ತ್ರ ಕಡ್ಡಾಯವಾಗಿದೆ. ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ ಕೋಡ್ ಇದೆ. ಇರಾನ್​ನಲ್ಲಿ ಏನು ನಡೆಯುತ್ತಿದೆ ಎಂಬುದು ಗಮನಾರ್ಹ, ಅಲ್ಲಿ ಮಹಿಳೆಯರು ಹಿಜಾಬ್ ಕಿತ್ತು ಬಿಸಾಡುತ್ತಿದ್ದಾರೆ ಎಂದರು.

ಬಿಎಸ್​​ವೈ ಕಾಲು ಭಾಗ ಪಾದಯಾತ್ರೆ ಮಾಡಿಲ್ಲ: ಸಿದ್ದರಾಮಯ್ಯ ಅವರು ಯಡಿಯೂರಪ್ಪರ ಕಾಲು ಭಾಗವೂ ಪಾದಯಾತ್ರೆ ಮಾಡಿಲ್ಲ. ಪಾದಯಾತ್ರೆ ಯಡಿಯೂರಪ್ಪ ರಕ್ತದ ಕಣ ಕಣದಲ್ಲೂ ಇದೆ. ಬಿಜೆಪಿಯ ಕಣ ಕಣದಲ್ಲಿ ಇದೆ ಎಂದು ತಿಳಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಾಲ್ಕು ಕಿಲೋ ಮೀಟರ್ ನಡೆಯಲಿ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲಿಗೆ ಪ್ರತಿಕ್ರಿಯೆ ನೀಡುತ್ತಾ, ಯಡಿಯೂರಪ್ಪನವರು 50 ವರ್ಷ ಪಾದಯಾತ್ರೆ ಮಾಡಿದ್ದಾರೆ. ಪಾದಯಾತ್ರೆಗೆ ಒಂದು ಗಾಂಭೀರ್ಯತೆ ಇರಬೇಕು. ಓಡೋದು, ಬಸ್ಕಿ ಹೊಡಿಸೋದು ಈ ರೀತಿ ಪಾದಯಾತ್ರೆ ಮಾಡ್ತಿದ್ದಾರೆ.‌ ಅವರ ಪಾದಯಾತ್ರೆ ನಗೆಪಾಟಲಿಗೆ ಈಡಾಗಿದೆ ಎಂದು ಟೀಕಿಸಿದರು.

ಯಶ್ಪಾಲ್ ಸುವರ್ಣ ಪ್ರತಿಕ್ರಿಯೆ

(ಓದಿ: ಹಿಜಾಬ್​ ವಿವಾದ: ಸುಪ್ರೀಂ ಕೋರ್ಟ್​ ಪೀಠದಿಂದ ಭಿನ್ನ ತೀರ್ಪು, ಯಥಾಸ್ಥಿತಿ ಮುಂದುವರಿಕೆ)

ರಾಹುಲ್ ಗಾಂಧಿ ಬಚ್ಚ ಎಂಬ ಯಡಿಯೂರಪ್ಪರ ಹೇಳಿಕೆ ಸಮಯೋಚಿತವಾಗಿದೆ. ಜನರು ಮಾತನಾಡಿಕೊಳ್ಳುತ್ತಿರುವುದನ್ನು ಯಡಿಯೂರಪ್ಪ ಅವರು ಹೇಳಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಒಂದು ಫ್ಯಾಮಿಲಿ ಪಾರ್ಟಿ ಆಗಿದೆ. ರಾಹುಲ್ ಗಾಂಧಿ ನೋಡೋದಕ್ಕೆ ಸೋನಿಯಾ ಗಾಂಧಿ ಓಡೋಡಿ ಬಂದಿದ್ದಾರೆ. ಮಗನ ಮೇಲೆ ಪ್ರೀತಿಗೆ ಬಂದಿದ್ದಾರೆ. ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರು, ಮೇಕೆದಾಟು ಪಾದಯಾತ್ರೆ ಮಾಡಿದ್ದರು.‌ ಆಗ ಸೋನಿಯಾಗಾಂಧಿ ಬಂದಿರಲಿಲ್ಲ. ಯಡಿಯೂರಪ್ಪ, ಬೊಮ್ಮಾಯಿಗೆ ಸವಾಲು ಹಾಕಿರುವ ಬಗ್ಗೆ ಅವರೇ ಮಾತಾಡಲಿದ್ದಾರೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಿತ ದೃಷ್ಟಿಯಿಂದ ಕರ್ನಾಟಕ ಸರ್ಕಾರ, ಶಾಲೆಗಳಲ್ಲಿ ನಿಗದಿಪಡಿಸಿದ ಸಮವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಈ ಬಗ್ಗೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.
ತೀರ್ಪಿನ ಕುರಿತು ಕಾನೂನು ತಜ್ಞರ ಸಲಹೆ ಪಡೆದು ಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಉಡುಪಿ ಕಾಲೇಜಿ ಉಪಾಧ್ಯಕ್ಷರ ಹೇಳಿಕೆ: ಉಡುಪಿ ಕಾಲೇಜಿನ ಆರು ವಿದ್ಯಾರ್ಥಿನಿಯರ ಹಿಜಾಬ್ ಪ್ರಕರಣದ ಬಗ್ಗೆ ಅದೇ ಕಾಲೇಜಿನ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ಕೋರ್ಟ್​ನಿಂದ ಆರಂಭಿಕ ಜಯ ಸಿಕ್ಕಿದೆ, ಮುಂದೆಯು ಉತ್ತಮ ಆದೇಶ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

2004 ರಿಂದಲೂ ಕಾಲೇಜಿನಲ್ಲಿ ಶಿಸ್ತು ಇತ್ತು, ಇದಕ್ಕಾಗಿ ಡ್ರೆಸ್ ಕೋಡ್ ಮಾಡಿದ್ದೇವು. ಅಲ್ಲಿಂದ ಕಳೆದ ಡಿಸೆಂಬರ್​ವರೆಗೆ ಯಾವುದೇ ಸಮಸ್ಯೆ ಇರಲಿಲ್ಲ, ಬಳಿಕ ಹಿಜಾಬ್ ವಿದ್ಯಾರ್ಥಿನಿಯರಿಂದ ಇಷ್ಟೆಲ್ಲ ಸಮಸ್ಯೆ ಆಗಿದೆ ಎಂದು ದೂರಿದರು.

Last Updated : Oct 13, 2022, 1:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.