ETV Bharat / state

ಅನ್ಯ ಉದ್ದೇಶಕ್ಕೆ ಕೆಐಎಡಿಬಿ ಭೂಮಿ ಬಳಕೆ: ಹಿಂದಿನ ಸಚಿವರು ಸಮೀಕ್ಷೆಗೆ ಸೂಚಿಸಿದ್ದರೆ, ಈಗಿನ ಸಚಿವರಿಂದ ಭಿನ್ನರಾಗ?

author img

By

Published : Aug 29, 2021, 3:24 PM IST

ಕೈಗಾರಿಕಾ ಉದ್ದೇಶಕ್ಕೆ ಭೂಮಿಯನ್ನು ಬಳಸಿದರೆ ಮಾತ್ರ ಅವರ ಹೆಸರಿಗೆ ಸೇಲ್ ಡೀಡ್ ಮಾಡಲಾಗುತ್ತದೆ. ಹೀಗಾಗಿ ಅನ್ಯ ಉದ್ದೇಶಕ್ಕೆ ಬಳಸಲು ಒಂದು ಪರ್ಸೆಂಟ್​ನಷ್ಟೂ ಸಾಧ್ಯವಿಲ್ಲ. ಒಂದು ವೇಳೆ ಆ ರೀತಿ ಆಗಿದ್ದರೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಸಚಿವ ಮುರುಗೇಶ್​ ನಿರಾಣಿ ತಿಳಿಸಿದ್ದಾರೆ.

minister murugesh nirani reaction to KIADB land mis use issue minister murugesh nirani reaction to KIADB land mis use issue
ಕೆಐಎಡಿಬಿ ಭೂಮಿ ದುರ್ಬಳಕೆ ಸುದ್ದಿ

ಬೆಂಗಳೂರು: ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಕೆಐಎಡಿಬಿ ಭೂಮಿಯನ್ನು ಉದ್ಯಮಿಗಳಿಗೆ ನೀಡುತ್ತದೆ. ಆದರೆ ಉದ್ಯಮಿಗಳು ಈ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಕೈಗಾರಿಕಾ ಸಚಿವ ಶೆಟ್ಟರ್ ಸಮೀಕ್ಷೆ ನಡೆಸಲು ಆದೇಶಿಸಿದ್ದರು.‌ ಆದರೆ, ಈಗಿನ ಕೈಗಾರಿಕಾ ಸಚಿವ ನಿರಾಣಿ ಈ ಬಗ್ಗೆ ಭಿನ್ನರಾಗ ಹಾಡುತ್ತಿದ್ದಾರೆ.

ಇಲಾಖೆಯ ಸಚಿವರು ಬದಲಾಗುತ್ತಿದ್ದ ಹಾಗೆಯೇ ಅದಕ್ಕೆ ಸಂಬಂಧಿಸಿದ ನೀತಿ, ನಿಲುವುಗಳೂ ಬದಲಾಗುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.‌ ಕೈಗಾರಿಕಾ ಉದ್ದೇಶಕ್ಕಾಗಿ ಕೊಡ ಮಾಡುವ ಭೂಮಿ ವಿಚಾರದಲ್ಲಿ ಈ ಹಿಂದಿನ ಕೈಗಾರಿಕಾ ಸಚಿವರು ಹಾಗೂ ಈಗಿನ ಸಚಿವರ ನಡುವೆ ತದ್ವಿರುದ್ಧ ನಿಲುವು ಇರುವುದು ಸ್ಪಷ್ವವಾಗಿದೆ. ಕೆಐಎಡಿಬಿ ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಎಸ್ಐಡಿಸಿ) ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುತ್ತವೆ. ತಾವೇ ಭೂಮಿಯನ್ನು ಸ್ವಾಧೀನ‌ಪಡಿಸಿಕೊಂಡು ಕೈಗಾರಿಕೆ ಸ್ಥಾಪಿಸಲು ಭೂಮಿಯನ್ನು ಹಂಚಿಕೆ ಮಾಡುತ್ತದೆ. ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಕೆಐಎಡಿಬಿ ಹಾಗು ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೆಎಸ್ಎಸ್ಐಡಿಸಿ ನಿವೇಶನಗಳನ್ನು ನೀಡುತ್ತವೆ. ಆದರೆ, ಹಲವರು ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿಯನ್ನು ಪಡೆದಿದ್ದರೂ, ಅದನ್ನು ಅನ್ಯ ಉದ್ದೇಶಕ್ಕೆ ಬಳಸಿರುವ ಪ್ರಕರಣಗಳೂ ಹೆಚ್ಚಾಗಿವೆ. ಇತ್ತ ಹಲವು ಉದ್ಯಮಿಗಳು ತಾವು ಪಡೆದ ಭೂಮಿಯಲ್ಲಿ ಉದ್ದೇಶಿತ ಉದ್ಯಮವನ್ನೇ ಸ್ಥಾಪಿಸಿಲ್ಲ.

ಹಿಂದಿನ ಕೈಗಾರಿಕಾ ಸಚಿವರಿಂದ ಸಮೀಕ್ಷೆಗೆ ಆದೇಶ:

ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ಪಡೆದು ಅದನ್ನು ಅನ್ಯ ಉದ್ದೇಶಕ್ಕೆ ಬಳಸಿದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಆಡಳಿತದಲ್ಲಿದ್ದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಥವಾ ಸರ್ಕಾರದಿಂದ ನೇರವಾಗಿ ಕೈಗಾರಿಕಾ ಉದ್ದೇಶಗಳಿಗೆ ಭೂಮಿಯನ್ನು ಪಡೆದು, ಅದನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಅಥವಾ ಕೈಗಾರಿಕೆಯನ್ನು ಆರಂಭಿಸದೇ ಹಾಗೆಯೇ ಬಿಟ್ಟಿದ್ದರೂ, ಅಂತಹ ಭೂಮಿಗಳ ಸರ್ವೆ ನಡೆಸಿ ವಾಪಸ್‌ ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭಿಸಲಿದ್ದೇವೆ ಎಂದು ತಿಳಿಸಿದ್ದರು.

ಈ ಸಂಬಂಧ ಸಮೀಕ್ಷೆ ನಡೆಸಿ ಅದರ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ವಾಸ್ತವದಲ್ಲಿ ಕೆಐಎಡಿಬಿ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ‌ ತಲೆಕೆಡಿಸಿಕೊಂಡಿರಲಿಲ್ಲ. ಸಚಿವರ ಸೂಚನೆ ಇದ್ದರೂ, ಅದಕ್ಕೆ ಹೆಚ್ಚಿನ ಲಕ್ಷ್ಯ ಕೊಡಲು ಹೋಗಿರಲಿಲ್ಲ. ಹಿಂದಿನ ಸಚಿವ ಶೆಟ್ಟರ್ ಆದೇಶ ಕೇವಲ ಘೋಷಣೆಗೆ ಮಾತ್ರ ಸೀಮಿತವಾಯಿತು.

ಹೊಸ ಸಚಿವರು ಹೇಳುವುದೇನು?:

ಇದೀಗ ಬೊಮ್ಮಾಯಿ ಸಂಪುಟದಲ್ಲಿ ನೂತನ ಕೈಗಾರಿಕಾ ಸಚಿವರಾಗಿರುವ ಮುರುಗೇಶ್ ನಿರಾಣಿ ಈ‌ ಸಂಬಂಧ ಭಿನ್ನರಾಗ ಹಾಡಿದ್ದಾರೆ. ಕೈಗಾರಿಕಾ ಉದ್ದೇಶಕ್ಕಾಗಿ ನೀಡಲಾಗುವ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸಲು ಸಾಧ್ಯವಾಗಲ್ಲ. ಅಂಥ ಪ್ರಮೇಯವೇ ಬರುವುದಿಲ್ಲ ಎಂದು ಕಡ್ಡಿ ಮುರಿದ ರೀತಿ ಖಡಾಖಂಡಿತವಾಗಿ ಹೇಳುತ್ತಿದ್ದಾರೆ.

ಸಚಿವ ಮುರುಗೇಶ್​ ನಿರಾಣಿ ಪ್ರತಿಕ್ರಿಯೆ
ಉದ್ಯಮಿ ಕೈಗಾರಿಕಾ ಉದ್ದೇಶಕ್ಕೆ ಭೂಮಿಯನ್ನು ಬಳಸಿದರೆ ಮಾತ್ರ ಅವರ ಹೆಸರಿಗೆ ಸೇಲ್ ಡೀಡ್ ಮಾಡಲಾಗುತ್ತದೆ. ಹೀಗಾಗಿ ಅನ್ಯ ಉದ್ದೇಶಕ್ಕೆ ಬಳಸಲು ಒಂದು ಪರ್ಸೆಂಟ್ ನಷ್ಟೂ ಸಾಧ್ಯವಿಲ್ಲ.ಒಂದು ವೇಳೆ ಆ ರೀತಿ ಆಗಿದ್ದರೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಅನ್ಯ ಉದ್ದೇಶಕ್ಕೆ ಬಳಸಿದ ಪ್ರಕರಣಗಳೆಷ್ಟು?:

ಕೆಎಸ್ಎಸ್ಐಡಿಸಿ ಹಂಚಿಕೆ ಮಾಡಿರುವ ನಿವೇಶನಗಳ ಪೈಕಿ 2,246 ನಿವೇಶನಗಳನ್ನು ಉದ್ದೇಶಿತ ಉದ್ಯಮಕ್ಕೆ ಬಳಸದೇ ಇರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇನ್ನು ಒಟ್ಟು 192 ಉದ್ದಿಮೆದಾರರು ಅನ್ಯ ಉದ್ದೇಶಕ್ಕೆ ನಿವೇಶನಗಳನ್ನು ಬಳಕೆ ಮಾಡಿದ್ದಾರೆ. ಆ‌ ಮೂಲಕ ನಿವೇಶನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳೇ ಅಂಕಿಅಂಶ ನೀಡಿದ್ದಾರೆ.

ನಿವೇಶನವನ್ನು ಉದ್ದೇಶಿತ ಉದ್ಯಮಕ್ಕೆ ಬಳಸದೇ ಇರುವ ಉದ್ದಿಮೆದಾರರಿಗೆ ಕೆಪಿಪಿ ಕಾಯ್ದೆ-1974ರ ಪ್ರಕಾರ ನೋಟಿಸ್ ಜಾರಿ ಮಾಡಲಾಗಿದೆ. ಅದೇ ರೀತಿ 192 ಉದ್ಯಮಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದು ಕೇವಲ ನೋಟಿಸ್​​ಗೆ ಸೀಮಿತವಾಗಿದೆ ವಿನಃ ಇಲಾಖೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.

ಕಳೆದ 10 ವರ್ಷಗಳಲ್ಲಿ ಕೆಐಎಡಿಬಿ ವತಿಯಿಂದ ಒಟ್ಟು 61,687-17 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪೈಕಿ ಕೈಗಾರಿಕಾ ಪ್ರದೇಶಕ್ಕಾಗಿ 30,767-04 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದ್ದರೆ, ಏಕಘಟಕ ಸಂಕೀರ್ಣಕ್ಕಾಗಿ 30,920-13 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಇತ್ತ ಕೆಎಸ್ಎಸ್ಐಡಿಸಿ ಸಣ್ಣ ಕೈಗಾರಿಕೆಗಳಿಗಾಗಿ ರಾಜ್ಯದ ವಿವಿಧ ಕಡೆ ಮೂಲಭೂತ ಸೌಕರ್ಯಗಳೊಂದಿಗೆ 188 ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ 5630 ಕೈಗಾರಿಕಾ ಮಳಿಗೆಗಳನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.