ETV Bharat / state

ಸಚಿವ ಶ್ರೀರಾಮುಲು ಪಿಎ ಬಂಧನ ಪ್ರಕರಣ : ಆರೋಪಿಯನ್ನು ಕೋರ್ಟ್​ಗೆ ಹಾಜರುಪಡಿಸಲಿದೆ ಸಿಸಿಬಿ - ರಾಜ್ಯ ಸಮಾಜ ಕಲ್ಯಾಣ ಇಲಾಖೆ

ಆರೋಪಿ ವಿರುದ್ಧದ ಹೇಳಿಕೆ ಮತ್ತು ಸಾಕ್ಷ್ಯಗಳನ್ವಯ ವಿಚಾರಣೆ ನಡೆಸಲಿದ್ದು, ಆರೋಪಿಯ ಮುಂದೆ ನೇರಾನೇರ ಸಾಕ್ಷಿಗಳನ್ನಿಟ್ಟು ವಿಚಾರಿಸಲು ಸಿಸಿಬಿ ತಯಾರಿ ನಡೆಸುತ್ತಿದೆ. ಕೋರ್ಟ್​​ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆಯಲು ಸಿದ್ಧತೆ‌ ನಡೆಸಿದ್ದಾರೆ ಎಂದು ತಿಳಿದು ಬಂದಿದೆ..

minister-ramulu-pa-will-be-produced-in-front-of-court-today
ಸಚಿವ ಶ್ರೀರಾಮುಲು ಪಿಎ ಬಂಧನ ಪ್ರಕರಣ
author img

By

Published : Jul 2, 2021, 9:42 AM IST

ಬೆಂಗಳೂರು : ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೆಸರಿ‌ನಲ್ಲಿ ಕೋಟ್ಯಂತರ ರೂಪಾಯಿ ವಸೂಲಿ ಆರೋಪ ಸಂಬಂಧ ಸಚಿವರ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿ ಆಡುಗೋಡಿ ಟೆಕ್ನಿಕಲ್ ಸೆಂಟರ್​​​​​ನಲ್ಲಿ ವಿಚಾರಣೆ ನಡೆಸುತ್ತಿದ್ದು, ಇಂದು ಕೋರ್ಟ್​​ಗೆ ಹಾಜರು ಪಡಿಸಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ನೀಡಿದ ದೂರಿನ ಮೇರೆಗೆ ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ರಾಜಣ್ಣ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಚಿವರು ಹಾಗೂ ಸಿಎಂ ಕಚೇರಿ ಹೆಸರಿನಲ್ಲಿ ಸಾರ್ವಜನಿಕರಿಗೆ ಟೆಂಡರ್, ವರ್ಗಾವಣೆ ಮಾಡಿಸುತ್ತೇನೆ ಎಂದು ಹೇಳಿ ಕೋಟ್ಯಂತರ ರೂಪಾಯಿ ವಸೂಲಿ ಮಾಡುತ್ತಿದ್ದ ಆರೋಪದಡಿ ಸಿಸಿಬಿಗೆ ದೂರುಗಳು ಬಂದಿದ್ದವು.

ಈ ಸಂಬಂಧ ಆರೋಪಿಯ ವಂಚನೆ ಕುರಿತು ಬಿ ವೈ ವಿಜಯೇಂದ್ರ ಮಾಹಿತಿ ಪಡೆದಿದ್ದರು. ಅಲ್ಲದೆ ಆರೋಪಿಗಳು ಮಾತನಾಡಿದ್ದಾರೆ ಎನ್ನಲಾದ ಆಡಿಯೋ, ನಕಲಿ ಲೆಟರ್ ಹೆಡ್ ಮತ್ತಿತರ ಸಾಕ್ಷಿ ಸಹಿತ ದೂರು ನೀಡಿದ್ದರು. ದೂರಿನನ್ವಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ವಿರುದ್ಧದ ಹೇಳಿಕೆ ಮತ್ತು ಸಾಕ್ಷ್ಯಗಳನ್ವಯ ವಿಚಾರಣೆ ನಡೆಸಲಿದ್ದು, ಆರೋಪಿಯ ಮುಂದೆ ನೇರಾನೇರ ಸಾಕ್ಷಿಗಳನ್ನಿಟ್ಟು ವಿಚಾರಿಸಲು ಸಿಸಿಬಿ ತಯಾರಿ ನಡೆಸುತ್ತಿದೆ. ಕೋರ್ಟ್​​ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆಯಲು ಸಿದ್ಧತೆ‌ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಓದಿ: ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.