ಆನೇಕಲ್ (ಬೆಂಗಳೂರು ನಗರ): ಆನೇಕಲ್ ತಾಲೂಕಿನ ಅತ್ತಿಬೆಲೆ ಸರ್ಕಲ್ನಲ್ಲಿ ಬಹು ದಿನಗಳ ಬೇಡಿಕೆಯ ಬಿಎಂಟಿಸಿಯ ನೂತನ ಹವಾನಿಯಂತ್ರಿತ ವೋಲ್ವೋ ಬಸ್ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ ಸೇರಿದಂತೆ ಬಿಎಂಟಿಸಿ ಅಧಿಕಾರಿಗಳು ಭಾಗಿಯಾಗಿದ್ದರು. ಅತ್ತಿಬೆಲೆ ಮತ್ತು ಹೊಸಕೋಟೆ ಮಾರ್ಗವಾಗಿ ಹತ್ತು ವೋಲ್ವೋ ಬಸ್ಗಳು ಸಂಚರಿಸಲಿದ್ದು, ನಿತ್ಯ 57 ಟ್ರಿಪ್ ಸಂಚಾರ ಮಾಡಲಿವೆ.
ಇದೇ ವೇಳೆ, ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಮುಂದಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬರುತ್ತದೆ ಎಂದುಕೊಂಡಿದ್ದೆವು. ಆದರೆ, ಅದು ಆಗಲಿಲ್ಲ ಎಂದು ಹೇಳಿದರು.
ಕುದುರೆ ವ್ಯಾಪಾರದಲ್ಲಿ ಬಿಜೆಪಿಯವರು ಎಕ್ಸ್ಪರ್ಟ್ಸ್ ಇದ್ದಾರೆ. ಅದರಿಂದ ಕಾಂಗ್ರೆಸ್ಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ನಮ್ಮಲ್ಲಿ 135 ಸ್ಥಾನ ಇದ್ದರೂ ಸರ್ಕಾರ ಬೀಳುತ್ತೆ ಅಂತ ಹೇಳ್ತಾರೆ. ಇಲ್ಲೂ ಸಹ ಎರಡು ಬಾರಿ ಬಿಜೆಪಿಯವರು ಕುದುರೆ ವ್ಯಾಪಾರ ಮಾಡಿದ್ದರು. ಬಿಜೆಪಿಯವರು ಅವರ ಬುದ್ಧಿಯನ್ನು ಬಿಡೋದಿಲ್ಲ. ಕುದುರೆ ವ್ಯಾಪಾರ ಮಾಡಿ ಕೆಲ ರಾಜ್ಯಗಳಲ್ಲಿ ಸರ್ಕಾರ ಬೀಳಿಸಿದ್ದಾರೆ. ತೆಲಂಗಾಣದಲ್ಲಿ ಬಹುಮತದಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂಬ ಭರವಸೆಯಿದೆ ನೋಡೋಣ ಎಂದು ಹೇಳಿದರು.
ಇದನ್ನೂ ಓದಿ: ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ: ಪ್ರತಿಪಕ್ಷ ನಾಯಕ ಆರ್ ಅಶೋಕ್