ETV Bharat / state

ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾದ ಸಚಿವ ಆರ್​. ಶಂಕರ್... ಕೈ ಜೊತೆ ಕೆಪಿಜೆಪಿ ವಿಲೀನದ ಬಗ್ಗೆ ಚರ್ಚೆ?

ಕಾಂಗ್ರೆಸ್ ಕೋಟಾದಡಿ ಸಚಿವರಾಗಿರುವ ಆರ್​.ಶಂಕರ್​ ತಮಗೆ ಇನ್ನೂ ಖಾತೆ ಹಂಚಿಕೆಯಾಗದಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಇಂದು ಸಮಾಲೋಚನೆ ನಡೆಸಿದ್ರು. ಕಾಂಗ್ರೆಸ್​​ ಸೇರುವ ಬಗ್ಗೆ ಮೌಖಿಕವಾಗಿ ಮಾತನಾಡಿರುವುದಾಗಿ ಸಚಿವ ಶಂಕರ್​ ಹೇಳಿದ್ದಾರೆ.

author img

By

Published : Jun 18, 2019, 7:19 PM IST

ಆರ್​. ಶಂಕರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನ ಭೇಟಿ ಮಾಡಿದ್ದ ನೂತನ ಸಚಿವ ಆರ್. ಶಂಕರ್ ಕೆಲ ಕಾಲ ಸಮಾಲೋಚನೆ ನಡೆಸಿದರು.

ಕಾಂಗ್ರೆಸ್ ಕೋಟಾದಡಿ ಸಚಿವರಾಗಿರುವ ಶಂಕರ್​ಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಇದೇ ನಿರೀಕ್ಷೆಯಲ್ಲಿರುವ ಅವರು, ಇನ್ನು ಖಾತೆ ಹಂಚಿಕೆಯಾಗದ ಬಗ್ಗೆ ಹಾಗೂ ಕೆಪಿಜೆಪಿಯನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ.

ದಿನೇಶ್​ ಗುಂಡೂರಾವ್​ ಭೇಟಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಪೌರಾಡಳಿತ ಖಾತೆ ಮಾತ್ರ ಖಾಲಿ ಇದೆ. ಹೀಗಾಗಿ ಅದನ್ನೇ ನೀಡಬಹುದು ಎನ್ನುವ ನಿರೀಕ್ಷೆ ಇದೆ. ಕೆಪಿಜೆಪಿ ಪಕ್ಷದಿಂದ ಗೆದ್ದಿರುವುದು ನಾನೊಬ್ಬನೇ. ನಿಯಮದ ಪ್ರಕಾರವೇ ನಾನು ಕಾಂಗ್ರೆಸ್​ಗೆ ಸೇರಿದ್ದೇನೆ. ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಸೇರುವುದರ ಬಗ್ಗೆ ಮೌಖಿಕವಾಗಿ ಮಾತನಾಡಿದ್ದೇನೆ. ಮುಂದೆ ಕಾಂಗ್ರೆಸ್ ಪಕ್ಷ ಕಟ್ಟುತ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನೇನು ಪ್ರಕ್ರಿಯೆ ನಡೆಸಬೇಕೋ ಅದೆಲ್ಲವನ್ನು ನಡೆಸಿದ್ದೇನೆ ಎಂದರು.

ಆರ್. ಶಂಕರ್​ಗೆ ಪೌರಾಡಳಿತ ಅಥವಾ ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಸಚಿವ ಡಿ.ಕೆ ಶಿವಕುಮಾರ್ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಖಾತೆ ಜೊತೆಗೆ ಪೌರಾಡಳಿತ ಖಾತೆ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಅಂತಿಮ ತೀರ್ಮಾನ ತೆಗೆದುಕೊಂಡಿರುವ ಸಿಎಂ ಕುಮಾರಸ್ವಾಮಿಯವರು ಘೋಷಿಸುವುದು ಮಾತ್ರ ಬಾಕಿ ಇದೆ. ನಾಳೆಯೊಳಗೆ ಅಧಿಕೃತವಾಗಿ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Intro:NEWSBody:ಕೆಪಿಸಿಸಿ ಕಚೇರಿಗೆ ಭೇಟಿಕೊಟ್ಟ ಶಂಕರ್ ಹೇಳಿದ್ದೇನು ಗೊತ್ತಾ?!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನ ಭೇಟಿ ಮಾಡಿದ ನೂತನ ಸಚಿವ ಆರ್ ಶಂಕರ್ ಕೆಲ ಕಾಲ ಸಮಾಲೋಚನೆ ನಡೆಸಿದರು.
ಕಾಂಗ್ರೆಸ್ ಕೋಟಾ ಅಡಿ ಸಚಿವರಾಗಿರುವ ಶಂಕರ್ ಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಇದೇ ನಿರೀಕ್ಷೆಯಲ್ಲಿರುವ ಅವರು, ಇನ್ನು ಖಾತೆ ಹಂಚಿಕೆಯಾಗದ ಬಗ್ಗೆ ಹಾಗೂ ಕೆಪಿಜೆಪಿ ಪಕ್ಷವನ್ನ ಕಾಂಗ್ರೆಸ್ ಪಕ್ಷದ ಜೊತೆ ವಿಲೀನದ ಬಗ್ಗೆ ತಾಂತ್ರಿಕ ದೋಷದ ಬಗ್ಗೆ ಚರ್ಚೆ ನಡೆಸಿದರು.
ಭೇಟಿ ನಂತರ ಸಚಿವ ಆರ್ ಶಂಕರ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಒಂದು ಅಂದರೆ ಪೌರಾಡಳಿತ ಖಾತೆ ಮಾತ್ರ ಖಾಲಿ ಇದೆ. ಹೀಗಾಗಿ ಅದನ್ನೇ ನೀಡಬಹುದು ಎನ್ನುವ ನಿರೀಕ್ಷೆ ಇದೆ. ಸದ್ಯ ಕೆಪಿಜೆಪಿ ಪಕ್ಷದಿಂದ ಗೆದ್ದಿರುವುದು ನಾನೊಬ್ಬನೇ. ನಿಯಮದ ಪ್ರಕಾರವೇ ನಾನು ಕಾಂಗ್ರೆಸ್ ಗೆ ಸೇರಿದ್ದೇನೆ. ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಸೇರುವುದರ ಬಗ್ಗೆ ಮೌಖಿಕವಾಗಿ ಕೆಲಸ ಮಾತನಾಡಿದ್ದೇನೆ. ಪಕ್ಷದ ಜೊತೆಗೇ ಇದ್ದೇನೆ, ಮುಂದೆ ಕಾಂಗ್ರೆಸ್ ಪಕ್ಷ ಕಟ್ಟುತ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನೇನು ಪ್ರಕ್ರಿಯೆ ನಡೆಸಬೇಕೋ ನಡೆಸಿದ್ದೇನೆ ಎಂದರು.
ಶಂಕರ್ಗೆ ಸಾಧ್ಯತೆಗಳು
ಆರ್ ಶಂಕರ್ ಗೆ ಪೌರಾಡಳಿತ ಅಥವಾ ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಸಚಿವ ಡಿಕೆ ಶಿವಕುಮಾರ್ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಖಾತೆ ಜೊತೆಗೆ ಪೌರಾಡಳಿತ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಅಂತಿಮ ತೀರ್ಮಾನ ತೆಗೆದುಕೊಂಡಿರುವ ಸಿಎಂ ಘೋಷಿಸುವುದು ಮಾತ್ರ ಬಾಕಿ ಇದೆ. ನಾಳೆಯೊಳಗೆ ಅಧಿಕೃತವಾಗಿ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ.
Conclusion:NEWS

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.