ETV Bharat / state

ಕೆಆರ್​​ಎಸ್ ಡ್ಯಾಂ ವಿಚಾರದಲ್ಲಿ ಬಿರುಕು ಅನ್ನೋ ಹೇಳಿಕೆಯನ್ನ ಪದೇಪದೆ ನೀಡಬಾರದು : ಸಚಿವ ಆರ್.ಅಶೋಕ್

ಅಂದು ಯಡಿಯೂರಪ್ಪ ನಮ್ಮ ನಾಯಕರು, ಈಗಲೂ ಅವರೇ ನಮ್ಮ ನಾಯಕರು. ಮುಂದೆ ಕೂಡ ಅವರೇ ನಾಯಕರು. ಅವರ ನೇತೃತ್ವದಲ್ಲೇ ಸರ್ಕಾರ ನಡೆಯುತ್ತದೆ. ಮುಂದಿನ ಚುನಾವಣೆಯನ್ನೂ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ..

Minister  R. ashok
ಸಚಿವ ಆರ್. ಅಶೋಕ್
author img

By

Published : Jul 5, 2021, 6:01 PM IST

ಬೆಂಗಳೂರು : ಕೆಆರ್​​ಎಸ್ ಡ್ಯಾಂ ವಿಚಾರದಲ್ಲಿ ಪದೇಪದೆ ಬಿರುಕು ಅನ್ನೋ ಹೇಳಿಕೆ‌‌ ನೀಡಬಾರದು. ಆ ತರದ ಯಾವುದೇ ಸಮಸ್ಯೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಆರ್​​ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಮಾಹಿತಿ ರವಾನೆ ಆಗಬಾರದು.

ಅದಕ್ಕೆ ನೀರಾವರಿ ತಜ್ಞರು, ಕಾವೇರಿ ನೀರಾವರಿ ನಿಗಮ ಇದೆ. ಕೆಳಭಾಗದ ರೈತರಿಗೆ ತಪ್ಪು ಸಂದೇಶ ಮಾಹಿತಿ ರವಾನೆಯಾಗಬಾರದು. ಲಕ್ಷಾಂತರ ಮಂದಿ ರೈತರ ಜತೆಗೆ ಆಟವಾಡಬಾರದು. ಈ ಬಗ್ಗೆ ಸಂಸದರು ಹಾಗೂ ಕುಮಾರಸ್ವಾಮಿಯವರೂ ಕೂಡ ಹೇಳಿಕೆ ನೀಡಬಾರದು ಎಂದರು.

ಹಿಂದೆ-ಇಂದು-ಮುಂದೆಯೂ ಬಿಎಸ್‌ವೈ ಅವರೇ ನಮ್ಮ ನಾಯಕರು ಅಂತಾರೆ ಸಚಿವ ಆರ್. ಅಶೋಕ್

ಸಂಸದೆ ಸುಮಲತಾ ಅವರದ್ದು ವೈಯಕ್ತಿಕ ಅಭಿಪ್ರಾಯ ಇರಬಹುದು. ಆದರೆ, ಅಧಿಕೃತವಾಗಿ ತಜ್ಞರು ಪರಿಶೀಲನೆ ಮಾಡ್ತಾರೆ. ಕೆಆರ್​​ಎಸ್​​ನಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ. ಇದು ಸರ್ಕಾರದ ನಿಲುವು ಎಂದು ಸಚಿವ ಅಶೋಕ್​ ಸ್ಪಷ್ಟಪಡಿಸಿದರು.

ಬಿಎಸ್​​ವೈ ಪ್ರಶ್ನಾತೀತ ನಾಯಕ : ಸಿಎಂ ಯಡಿಯೂರಪ್ಪ ವಿರುದ್ಧ ಸಿ ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಎರಡು ಸೀಟ್​​ ಇದ್ದಾಗಿನಿಂದ 110 ಸ್ಥಾನವರೆಗೂ ಯಡಿಯೂರಪ್ಪರೇ ನಮ್ಮ ನಾಯಕರಾಗಿದ್ದಾರೆ. ಅವರು ಪ್ರಶ್ನಾತೀತ ನಾಯಕರಾಗಿದ್ದಾರೆ.

ಅಂದು ಯಡಿಯೂರಪ್ಪ ನಮ್ಮ ನಾಯಕರು, ಈಗಲೂ ಅವರೇ ನಮ್ಮ ನಾಯಕರು. ಮುಂದೆ ಕೂಡ ಅವರೇ ನಾಯಕರು. ಅವರ ನೇತೃತ್ವದಲ್ಲೇ ಸರ್ಕಾರ ನಡೆಯುತ್ತದೆ. ಮುಂದಿನ ಚುನಾವಣೆಯನ್ನೂ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದರು.

ಮೇಕೆದಾಟು ಯೋಜನೆ ಮಾಡೇ ಮಾಡ್ತೀವಿ : ಮೇಕೆದಾಟು ಯೋಜನೆಯನ್ನು ನಾವು ಮಾಡೇ ಮಾಡುತ್ತೇವೆ. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು. ತಮಿಳುನಾಡು ಕೇಳಿ ನಾವು ಮಸಾಲೆ ಅರೆಯುವ ಅಗತ್ಯ ಇಲ್ಲ. ಸಂಪ್ರದಾಯದಂತೆ ತಮಿಳುನಾಡಿಗೆ ಪತ್ರ ಬರೆದಿದ್ದೇವೆ.

ನಿರೀಕ್ಷೆಯಂತೆಯೇ ಅವರು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆ ಮಾಡುವುದು ಶತ:ಸಿದ್ಧ. ಅದಕ್ಕೆ ಎಲ್ಲಾ ತಯಾರಿಯನ್ನು ಮಾಡುತ್ತೇವೆ. ಬೇಕಾದ ಅನುಮತಿಯನ್ನೂ ಪಡೆಯುತ್ತೇವೆ ಎಂದರು.

ಇದನ್ನೂ ಓದಿ: KRS ರಕ್ಷಣೆಗೆ ಅವ್ರನ್ನೇ ಮಲಗಿಸಬೇಕೆಂದ ಹೆಚ್​ಡಿಕೆ..ಭಾಷೆ ಮೇಲೆ ಹಿಡಿತ ಇಲ್ವಾ ಎಂದು ಕುಟುಕಿದ ಸಂಸದೆ ಸುಮಲತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.