ಬೆಂಗಳೂರು : ಶಾಲುಗಳನ್ನು ಯಾರು ಹಂಚುತಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸ್ಪಷ್ಟವಾಗಿ ಹೇಳಲಿ. ಇಂಥ ಸಂದರ್ಭದಲ್ಲಿ ಡಿಕೆಶಿ ಗೊಂದಲ ಹುಟ್ಟಿಸುವಂತೆ ಮಾತನಾಡಬಾರದು ಎಂದು ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಶಕ್ತಿಭವನದಲ್ಲಿ ಮಾತನಾಡಿದ ಅವರು, ಹಿಜಾಬ್ ಹಂಚುತ್ತಿದ್ದರು ಅಂತಾ ನಾವೂ ಆರೋಪ ಮಾಡಬಹುದಲ್ವಾ?. ತರಗತಿಗಳಲ್ಲಿ ಶಾಲು ಹಾಕ್ಕೊಳ್ಳೋದೂ ತಪ್ಪು, ಹಿಜಾಬ್ ಹಾಕೋದೂ ತಪ್ಪು. ಡಿಕೆಶಿ ಆರೋಪ ಸುಳ್ಳು. ಡಿಕೆಶಿ ಸುಳ್ಳು ಹೇಳುತ್ತಿದ್ದಾರೆ. ಉರಿಯುತ್ತಿರುವ ಮನೆಯಲ್ಲಿ ಗಳ ತೆಗೆಯುವಂತ ಹೇಳಿಕೆ ಯಾರೂ ಕೊಡಬಾರದು ಎಂದು ಕಿಡಿಕಾರಿದರು.
ಕೋರ್ಟ್‌ನಲ್ಲಿ ಹಿಜಾಬ್ ಬಗ್ಗೆ ವಾದ ಮಂಡನೆ ಆಯ್ತು. ನ್ಯಾಯಮೂರ್ತಿಗಳು ಪ್ರಕರಣ ವಿಸ್ತೃತ ಬೆಂಚ್ಗೆ ವರ್ಗಾಯಿಸಿದ್ದಾರೆ. ನಾಳೆ ವಿಸ್ತೃತ ಪೀಠದ ಬಗ್ಗೆ ಸಿಜೆ ತೀರ್ಮಾನ ಮಾಡಬಹುದು.
ಕೋರ್ಟ್ ಏನೇ ತೀರ್ಪು ನೀಡಿದರೂ ಸರ್ಕಾರ ಪಾಲಿಸಲಿದೆ. ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕಾಗುತ್ತೆ. ಅಲ್ಲಿಯವರೆಗೂ ಎಲ್ಲರೂ ಗೊಂದಲ ಮಾಡಿಕೊಳ್ಳಬಾರದು. ತೀರ್ಪು ಬರೋವರೆಗೂ ಶಾಂತಿ ಕಾಪಾಡಲಿ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಹಿಜಾಬ್ ಧರಿಸುವ ಬಗ್ಗೆ ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ನಕಾರ..ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗ