ETV Bharat / state

ರಾಜ್ಯದಲ್ಲಿ ಮತ್ತೆ ಮಳೆ ಆತಂಕ: ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಆರ್​.ಅಶೋಕ್ ಸೂಚನೆ - minister r ashok instructions to dcs

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಬಿಡುಗಡೆ ಮಾಡಿದ್ದ‌ ಪರಿಹಾರ ಹಣಕ್ಕಿಂತಲೂ ಮೂರು ಪಟ್ಟು ಹೆಚ್ಚು ನರೇಂದ್ರ ಮೋದಿ ಸರ್ಕಾರ ಕೊಟ್ಟಿದೆ‌ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

minister-r-ashok
ಕಂದಾಯ ಸಚಿವ ಆರ್. ಅಶೋಕ್
author img

By

Published : Nov 25, 2021, 5:53 PM IST

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ ಆಗುವ ಆತಂಕದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಳೇ ಮೈಸೂರು ಹಾಗೂ ಉಡುಪಿ ಭಾಗದವರೆಗೂ ಮಳೆ ಪ್ರಭಾವ ಇರಲಿದೆ. ಈ ನಿಟ್ಟಿನಲ್ಲಿ ನವೆಂಬರ್ 26 ರಿಂದ ಮೂರು ದಿನಗಳು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಮಳೆ ಹಾನಿ ನಿಭಾಯಿಸಲು ತಂಡ:

ಮಳೆ ಹಾನಿ ನಿಭಾಯಿಸಲು ಅಧಿಕಾರಿಗಳ ತಂಡವನ್ನು ಮುಖ್ಯಮಂತ್ರಿಗಳು ರಚನೆ ಮಾಡಿದ್ದಾರೆ. ನಾನೂ ಕೂಡಾ ನಿಗಾ ಇಟ್ಟಿದ್ದೇನೆ. ಚುನಾವಣೆಗಿಂತ ಮಳೆ ಹಾನಿ ಸಮಸ್ಯೆ ಮುಖ್ಯವಾಗಿದೆ. ಇದಕ್ಕೆ ಆದ್ಯತೆ ನೀಡಬೇಕು. ಚುನಾವಣೆ ಕೆಲಸ ಬಹುತೇಕ ಮುಗಿದಿದೆ. ಈ ನಿಟ್ಟಿನಲ್ಲಿ ಮಳೆ ಹಾನಿ ಸಮಸ್ಯೆ ಬಗೆಹರಿಸಲು ಆದ್ಯತೆ ಕೊಡಬೇಕು ಎಂದು ಹೇಳಿದರು.

ಡಿಸಿಗಳಿಗೆ ಸೂಚನೆ:

ನವೆಂಬರ್ 30ರೊಳಗೆ ಬೆಳೆ ಹಾನಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಪರಿಹಾರ ನೀಡುವ ಸಂದರ್ಭದಲ್ಲಿ ಕಟಾವು ಮಾಡಿದ ಬೆಳೆಯನ್ನೂ ಪರಿಗಣಿಸುತ್ತೇವೆ. ಕೇವಲ ರಾಗಿ ಮಾತ್ರವಲ್ಲ, ಎಲ್ಲಾ ಬೆಳೆಗಳಿಗೆ ಪರಿಹಾರ ಕೊಡುತ್ತೇವೆ. ಬೆಳೆ ಪರಿಹಾರ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪ ಸುಳ್ಳು ಎಂದು ತಿರುಗೇಟು ನೀಡಿದರು.

ಮನಮೋಹನ್ ಸಿಂಗ್ ಸರ್ಕಾರ ಬಿಡುಗಡೆ ಮಾಡಿದ್ದ‌ ಪರಿಹಾರ ಹಣಕ್ಕಿಂತಲೂ ಮೂರು ಪಟ್ಟು ಹೆಚ್ಚು ನರೇಂದ್ರ ಮೋದಿ ಸರ್ಕಾರ ಕೊಟ್ಟಿದೆ‌. ಮೊದಲು ಅಂಕಿ ಅಂಶಗಳನ್ನು ನೋಡಿ, ಕಾಮಾಲೆ ಕಣ್ಣು ಬಿಟ್ಟು ನೋಡಿ ಎಂದು ಕುಟುಕಿದರು.

ರಾಜ್ಯದಲ್ಲಿ ಈ ಬಾರಿ ಮಳೆ ಪ್ರವಾಹದಿಂದ ಅಪಾರ ಹಾನಿಯಾಗಿದೆ. ಬೆಳೆ ಹಾನಿ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು, ಸುಮಾರು 5 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುವ ಅಂದಾಜಿದೆ. 1 ಲಕ್ಷ ಹೆಕ್ಟೇರ್ ನಷ್ಟು ವಾಣಿಜ್ಯ ಬೆಳೆ ಹಾನಿಯಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಕ್ಷಣ ನಷ್ಟದ ಅಂದಾಜು ಮಾಡಿ, ನವೆಂಬರ್ 30 ಒಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವರದಿ ಬಂದ ಹತ್ತು ದಿನದೊಳಗೆ ರೈತರಿಗೆ ಪರಿಹಾರ ನೀಡಲಾಗುವುದು. ರೈತರ ಖಾತೆಗೆ ನೇರ ಹಣ ಜಮೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ಬಳಿ 680 ಕೋಟಿ ರೂ. ಹಣ ಇದೆ. ಮನೆ ಬಿದ್ದ ಎರಡು ದಿನದಲ್ಲಿ ಪರಿಹಾರ ನೀಡಬೇಕು.‌ ಹಾನಿಗೊಳಗಾದ ಮನೆಯವರಿಗೂ 24 ಗಂಟೆಯೊಳಗೆ ಪರಿಹಾರ ನೀಡಬೇಕೆಂದು ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ: ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರ: ವಿಚಾರಣೆ ವೇಳೆ ಕಣ್ಣೀರಿಟ್ಟ ಹಂಸಲೇಖ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.