ETV Bharat / state

ಚುನಾವಣೆ ಹೊಸ್ತಿಲಲ್ಲಿ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಆರ್ ಅಶೋಕ್ ಹೆಗಲಿಗೆ - ಹಳೆ ಮೈಸೂರು ಕ್ಷೇತ್ರಗಳತ್ತ ಹೆಚ್ಚಿನ ಒತ್ತು

ಸಕ್ಕರೆನಾಡಿಗೆ ನಾಡಿಗೆ ಹೊಸ ಸಾರಥಿ - ಮಂಡ್ಯ ಜಿಲ್ಲೆ ಉಸ್ತುವಾರಿಯಾಗಿ ಸಚಿವ ಆರ್ ಅಶೋಕ್ ನೇಮಕ- ಚುನಾವಣಾ ರಣತಂತ್ರದ ಜವಾಬ್ದಾರಿ ಸಚಿವರ ಹೆಗಲಿಗೆ.

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಆರ್ ಅಶೋಕ್
ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಆರ್ ಅಶೋಕ್
author img

By

Published : Jan 24, 2023, 9:38 PM IST

ಬೆಂಗಳೂರು : ಮಂಡ್ಯ ಜಿಲ್ಲೆ‌ ಉಸ್ತುವಾರಿ ಸಚಿವರನ್ನಾಗಿ ಆರ್. ಅಶೋಕ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಇಲ್ಲಿಯವರೆಗೆ ಮಂಡ್ಯ ಜಿಲ್ಲೆಗೆ ಸಚಿವ ಕೆ ಗೋಪಾಲಯ್ಯ ಉಸ್ತುವಾರಿ ವಹಿಸಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡ್ಯ ಜಿಲ್ಲೆ ಉಸ್ತುವಾರಿಯನ್ನು ಸಚಿವ ಆರ್. ಅಶೋಕ್ ಅವರಿಗೆ ವಹಿಸಿದ್ದಾರೆ.‌ ಕೆ. ಗೋಪಾಲಯ್ಯ ಹಾಸನ ಜಿಲ್ಲೆ ಜೊತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನಿಭಾಯಿಸುತ್ತಿದ್ದರು.

ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ: ಈ ಮುಂಚೆ ಸಚಿವ ಆರ್. ಅಶೋಕ್ ಗೆ ಯಾವುದೇ ಜಿಲ್ಲೆಯ ಉಸ್ತುವಾರಿಯ ಹೊಣೆ ನೀಡಿರಲಿಲ್ಲ. ಚುನಾವಣೆಗೆ ಇನ್ನು ಮೂರು ನಾಲ್ಕು ತಿಂಗಳ ಇರುವ ಹಿನ್ನೆಲೆ ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಆ ಮೂಲಕ ಮಂಡ್ಯದಲ್ಲಿ ಚುನಾವಣಾ ರಣತಂತ್ರದ ಜವಾಬ್ದಾರಿಯೂ ಸಚಿವ ಆರ್. ಅಶೋಕ್ ಅವರ ಹೆಗಲಿಗೇರಿದೆ.

ಇದನ್ನೂ ಓದಿ: ಬಿಜೆಪಿಯೇ ಭ್ರಷ್ಟಾಚಾರದ ಗಂಗೋತ್ರಿ: ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು

ಮಂಡ್ಯದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಸಚಿವ ಆರ್ ಅಶೋಕ್​ ಹೆಗಲಿಗೆ: ಮಂಡ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸಚಿವ ಆರ್. ಅಶೋಕ್ ಅವರಿಗೆ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿದೆ. ಸ್ವತ: ಹೈಕಮಾಂಡ್ ಸಚಿವ ಆರ್. ಅಶೋಕ್​ಗೆ ಮಂಡ್ಯ ಉಸ್ತುವಾರಿ ನೀಡುವಂತೆ ಸೂಚನೆ ನೀಡಿತ್ತು ಎನ್ನಲಾಗಿದೆ. ಚುನಾವಣೆ ಹೊಸ್ತಿಲಲ್ಲಿ ಮಂಡ್ಯದಲ್ಲಿ ಪಕ್ಷ ಸಂಘಟನೆ ಮಾಡುವುದಕ್ಕಾಗಿ ಸಚಿವ ಆರ್. ಅಶೋಕ್​ಗೆ ಈ ಹೊಣೆಯನ್ನು ಹೈಕಮಾಂಡ್ ನೀಡಿದೆ ಎಂಬುದು ತಿಳಿದುಬಂದಿದೆ. ಇದು ಸಚಿವ ಆರ್‌. ಅಶೋಕ್ ಗೂ ದೊಡ್ಡ ಸವಾಲಾಗಲಿದೆ. ಮಂಡ್ಯದಲ್ಲಿ ಪಕ್ಷವನ್ನು ಬಲಪಡಿಸಿ ಹೆಚ್ಚಿನ ಸ್ಥಾನವನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯೂ ಇದೀಗ ಆರ್. ಅಶೋಕ್ ಹೆಗಲಿಗೇರಿಸಲಾಗಿದೆ. ಆ ಮೂಲಕ ಪಕ್ಷವು ಆರ್. ಅಶೋಕ್ ನಾಯಕತ್ವವನ್ನು ಓರೆಗೆ ಹಚ್ಚಲಿದೆ.‌

ಇದನ್ನೂ ಓದಿ: ಹುಬ್ಬಳ್ಳಿ - ಬೆಳಗಾವಿಗೆ ಬಂದ ಬಿಎಂಟಿಸಿಯ ಹಳೆಯ ಬಸ್‌! ಅಧಿಕಾರಿಗಳ ನಡೆಗೆ ಶಾಸಕ ಅಭಯ್ ಪಾಟೀಲ್ ಆಕ್ರೋಶ

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಕಂಡುಕೊಳ್ಳುವ ದೃಷ್ಟಿಯಿಂದ ಆರ್​ ಅಶೋಕ್​ಗೆ ಉಸ್ತುವಾರಿ ಹೊಣೆ: ಆರ್. ಅಶೋಕ್ ಪ್ರಬಲ ಒಕ್ಕಲಿಗ ನಾಯಕನಾಗಿರುವುದರಿಂದ ಅದರ ಲಾಭವನ್ನು ಚುನಾವಣೆ ವೇಳೆ ಮಂಡ್ಯದಲ್ಲಿ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದು. ಒಕ್ಕಲಿಗ ಪ್ರಾಬಲ್ಯ ಇರುವ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಕಂಡುಕೊಳ್ಳುವ ದೃಷ್ಟಿಯಿಂದ ಒಕ್ಕಲಿಗ ನಾಯಕನಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಪಕ್ಷ ಸೇರ್ಪಡೆ ಬಗ್ಗೆ ನಾನು ಯಾವುದೇ ನಿರ್ಧಾರ ಮಾಡಿಲ್ಲ: ಸಂಸದೆ ಸುಮಲತಾ

ಹಳೆ ಮೈಸೂರು ಕ್ಷೇತ್ರಗಳತ್ತ ಹೆಚ್ಚಿನ ಒತ್ತು ನೀಡಿದ ಬಿಜೆಪಿ: ಇತ್ತ ಮಂಡ್ಯದ ಜಿಲ್ಲೆಯ ಕೆಲ ಮುಖಂಡರನ್ನು ಬಿಜೆಪಿಯತ್ತ ಸೆಳೆಯಲು ಆರ್. ಅಶೋಕ್ ಗೆ ಉಸ್ತುವಾರಿ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಮಧ್ಯ ಕರ್ನಾಟಕವನ್ನು ಸಹ ಟಾರ್ಗೆಟ್ ಮಾಡಿದೆ. ಈ ಹಿನ್ನೆಲೆಯಲ್ಲಿ ಹಳೆ ಮೈಸೂರು ಕ್ಷೇತ್ರಗಳತ್ತ ಬಿಜೆಪಿ ಹೆಚ್ಚಿನ ಒತ್ತು ನೀಡಿದೆ. ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದಲ್ಲಿ ಸಮಾವೇಶ ನಡೆಸಿ ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ರಣಕಹಳೆ ಊದಿದ್ದಾರೆ. ಹೀಗಾಗಿ ಸಚಿವ ಆರ್. ಅಶೋಕ್​​ಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ ಎನ್ನಲಾಗಿದೆ‌.

ಇದನ್ನೂ ಓದಿ : ರಾಯಚೂರಿನಲ್ಲಿ ಪಂಚರತ್ನ ರಥಯಾತ್ರೆ: ಕುಮಾರಸ್ವಾಮಿಗೆ ಡೊಳ್ಳು ಹಾರ ಹಾಕಿ ಅದ್ಧೂರಿ ಸ್ವಾಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.