ETV Bharat / state

ಬಿಜೆಪಿ ಸೆಂಟ್ರಲ್ ಲೀಡರ್ ಶಿಪ್ ರಾಜ್ಯ ನಾಯಕರನ್ನು ಕ್ಯಾರೇ ಮಾಡುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ - ನಮಗೆ ಯಾರ ಅಗತ್ಯವೂ ಇಲ್ಲ

ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ರಾಜ್ಯ ಸರ್ಕಾರದಿಂದ ಪತ್ರ ಬರೆಯಲಾಗಿತ್ತು. ಆದರೆ ಪ್ರಧಾನಿ ಕಚೇರಿಯಿಂದ ನಮ್ಮ ಶಿಷ್ಟಾಚಾರದ ಪತ್ರವನ್ನು ತಿರಸ್ಕಾರ ಮಾಡಿ ವಾಪಸ್​ ಪತ್ರ ಬಂದಿತ್ತು. ಆದರೆ ಬಿಜೆಪಿ ಅವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

minister-priyank-kharge-slams-bjp-leaders
ಸಚಿವ ಪ್ರಿಯಾಂಕ್ ಖರ್ಗೆ
author img

By ETV Bharat Karnataka Team

Published : Aug 26, 2023, 3:56 PM IST

ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಬೆಂಗಳೂರು : ಬಿಜೆಪಿ ಸೆಂಟ್ರಲ್ ಲೀಡರ್​ಶಿಪ್ ರಾಜ್ಯ ನಾಯಕರನ್ನು ಕ್ಯಾರೇ ಮಾಡ್ತಿಲ್ಲ ಎಂದು ಸಚಿವ ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದರಲ್ಲಿ ಎಕ್ಸಪರ್ಟ್. ರಾಜ್ಯಕ್ಕೆ ಬಂದಿದ್ದು ದೇಶದ ಪ್ರಧಾನಿಯೇ ಹೊರತು ಬಿಜೆಪಿ ಪ್ರಧಾನಿ ಅಲ್ಲ. ಶಿಷ್ಟಾಚಾರವನ್ನು ಯಾವುದೇ ಸರ್ಕಾರವೂ ಪಾಲನೆ ಮಾಡಬೇಕಾಗುತ್ತದೆ. ನಮ್ಮ ಸರ್ಕಾರವೇ ಪ್ರಧಾನಿ ಕಚೇರಿಗೆ ಪತ್ರ ಬರೆದಿತ್ತು. ಪ್ರಧಾನಿ ರಿಸೀವ್ ಮತ್ತು ಸೆಂಡ್ ಆಫ್​​ಗೆ ಲೈನ್ ಅಪ್ ಕಳಿಸಲಾಗಿತ್ತು ಎಂದು ಹೇಳಿದರು.

ರಾಜ್ಯಪಾಲರು, ಮುಖ್ಯಮಂತ್ರಿಗಳು, ಸ್ಥಳೀಯ ಸಂಸದರ ಲೈನ್ ಅಪ್ ಮಾಹಿತಿ ಕಳಿಸಲಾಗಿತ್ತು. ಬಳಿಕ ಪ್ರಧಾನಿ ಕಚೇರಿಯಿಂದ ನಮಗೆ ವಾಪಸ್ ಉತ್ತರ ಬಂದಿತ್ತು. ನಮ್ಮ ಶಿಷ್ಟಾಚಾರದ ಪತ್ರವನ್ನು ಕೇಂದ್ರ ತಿರಸ್ಕಾರ ಮಾಡಿ ಅವರೇ ಯಾರು ಯಾರು ಇರಬೇಕು ಎಂಬುದನ್ನು ಕಳಿಸಿದ್ದರು. ಬಿಜೆಪಿಯವರು ಆರೋಪ ಮಾಡುವ ಮೊದಲು ಅಧ್ಯಯನ ಮಾಡುವುದು ಒಳ್ಳೆಯದು. ಬಿಜೆಪಿ ಈ ಬಗ್ಗೆ ಸುಖಾ ಸುಮ್ಮನೆ ಆರೋಪ ಮಾಡುತ್ತಿದೆ ಎಂದು ಕಿಡಿ ಕಾರಿದರು.

ಪ್ರಧಾನಿ ಭಾಷಣ ತುಣುಕು ಪ್ರದರ್ಶಿಸಿದ ಖರ್ಗೆ: ಇದೇ ವೇಳೆ ಪ್ರಧಾನಿಗಳ ಭಾಷಣದ ತುಣುಕು ಕೇಳಿಸಿದ ಪ್ರಿಯಾಂಕ್​ ಖರ್ಗೆ, ಬಿಜೆಪಿ ಕಾರ್ಯಕರ್ತರಿಗೆ ವಿಷಯ ಗೊತ್ತಿದೆ. ಪ್ರಧಾನಿ ಮಾತನಾಡುವಾಗ ನಿಮ್ಮ ಗಮನ ಎಲ್ಲಿತ್ತು. ಶಿಷ್ಟಾಚಾರ ಉಲ್ಲಂಘನೆ ಬಿಜೆಪಿ ಪ್ರಧಾನಿಗಲ್ಲ, ಶಿಷ್ಟಾಚಾರ ಉಲ್ಲಂಘನೆ ದೇಶದ ಪ್ರಧಾನಿಗೆ ಇರುತ್ತದೆ. ಬಿಜೆಪಿ ಐಟಿ ಸೆಲ್ ಮಾತು ಕೇಳುವುದು ಬಿಟ್ಟು ಅಧ್ಯಯನ ಮಾಡಲಿ. Need Not be Disturbed ಅಂತ ಪ್ರಧಾನಿ ಕಚೇರಿಯಿಂದಲೇ ಪತ್ರ ಬಂದಿದೆ. ಬಿಜೆಪಿಯವರು ಹತಾಶರಾಗಿಬಿಟ್ಟಿದ್ದಾರೆ. ಏನಾದರೂ ಮಾಡಿ ಅವರ ಹೆಸರು ಚಾಲ್ತಿಯಲ್ಲಿಡುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮ ಮಾತನ್ನಂತೂ ಬಿಜೆಪಿಯವರು ಕೇಳುವುದಿಲ್ಲ. ಕನಿಷ್ಠ ಪ್ರಧಾನಿಯವರ ಮಾತನ್ನಾದರೂ ಕಿವಿಗೊಟ್ಟು ಕೇಳಲಿ. ಬಿಜೆಪಿ ನಾಯಕರ ಸ್ಥಿತಿ ಏನಾಗಿದೆ ಅಂದರೆ ಫಸ್ಟ್​​ ಡೇ ಫಸ್ಟ್​ ಶೋ ತರಹ ಆಗಿದೆ. ಸಿನಿಮಾ ಹೀರೊಗೆ ಮುಖ ತೋರಿಸಲು ಅಭಿಮಾನಿಗಳು ಮಾಡ್ತಾರಲ್ಲ ಹಾಗಿದೆ. ಬ್ಯಾರಿಕೇಡ್ ಮೇಲೆ ಹತ್ತಿ ಮುಖ ತೋರಿಸೋದಕ್ಕೆ ಹೊರಟಿದ್ದಾರೆ. ಸಾಮಾನ್ಯ ಡಿಗ್ನಿಟಿ ಕೂಡ ಇಟ್ಟುಕೊಂಡಿಲ್ಲ ಎಂದು ಕಾರ್ಯಕರ್ತರೇ ಬೈತಿದ್ದಾರೆ. ಮಾಜಿ ಸಚಿವರು ಹೇಗೆಲ್ಲ ಮಾಡ್ತಾ ಇದ್ದರು ನೋಡಿ. ಪ್ರಧಾನ ಮಂತ್ರಿಗಳು ಇವರನ್ನು ಗುರುತೇ ಹಿಡಿಯುವುದಿಲ್ಲ. ಪ್ರಧಾನಿಯವರಿಗೆ ಇವರ ಮುಖ ಪರಿಚಯವೇ ಇಲ್ಲ. ಬಿಜೆಪಿ ಕೇಂದ್ರ ನಾಯಕರಿಗೆ ರಾಜ್ಯದ ನಾಯಕರ ಬಗ್ಗೆ ಅಸಡ್ಡೆ ಇದೆ ಎಂದು ಖರ್ಗೆ ದೂರಿದರು.

ವಿರೋಧ ಪಕ್ಷದ ನಾಯಕನೇ ಇಲ್ಲ ಅಂದ್ರೆ ಕನ್ನಡಿಗರ ಅಭಿಮಾನಕ್ಕೆ ಧಕ್ಕೆ ಆಗ್ತಿಲ್ವಾ?. ಚಂದ್ರಯಾನವೇ ಹೋಗಿ ಮುಟ್ಟಿಬಿಟ್ಟಿದೆ. ಆದರೆ ದೆಹಲಿಯಿಂದ ಇನ್ನೂ ವಿಪಕ್ಷ ನಾಯಕ ಬಿಜೆಪಿಗೆ ಬಂದಿಲ್ಲ. ಬಿಜೆಪಿ ಶಾಶ್ವತ ವಿಪಕ್ಷ ಆಗಿರಬೇಕು ಎಂಬುದು ನಮ್ಮ ಆಸೆ. ಆದರೆ ಅವರಿಗೆ ಇನ್ನೂ ಒಬ್ಬ ನಾಯಕನೇ ಸಿಕ್ಕಿಲ್ಲ ಎನ್ನೋದು ವಿಪರ್ಯಾಸ ಎಂದು ಕುಟುಕಿದರು.

ನಮಗೆ ಯಾರ ಅಗತ್ಯವೂ ಇಲ್ಲ: ನಮಗೆ ಯಾರದು ಅಗತ್ಯವಿಲ್ಲ, ನಮ್ಮ ಪಕ್ಷ ಐದು ವರ್ಷ ಸುಭದ್ರ ಸರ್ಕಾರ ಕೊಡುತ್ತದೆ. ಆದರೆ ಕಾಂಗ್ರೆಸ್‌ ಸಿದ್ದಾಂತ ಒಪ್ಪಿ ಯಾರೇ ಬಂದ್ರು ಅವರನ್ನು ಸ್ವಾಗತಿಸುತ್ತೇವೆ. ಅದು ಬಿಜೆಪಿಯ ಕಾರ್ಯಕರ್ತರೆ ಇರಲಿ, ಶಾಸಕರಿರಲಿ, ಸಂಸದರೇ ಇರಲಿ. ಯಾರೇ ತತ್ವ ಸಿದ್ಧಾಂತ ಒಪ್ಪಿ ಬಂದರೂ ಸ್ವಾಗತ ಮಾಡುತ್ತೇವೆ ಎಂದರು.

ಜನರ ಮಧ್ಯೆ ನಿಂತು ಮೋದಿ ರೋಡ್​ ಶೋ ವೀಕ್ಷಿಸಿದ ಬಿಜೆಪಿ ನಾಯಕರು : ಇಸ್ರೋ ವಿಜ್ಞಾನಿಗಳ ಭೇಟಿಯ ಉದ್ದೇಶದೊಂದಿಗೆ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯಪಾಲರು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಸ್ವಾಗತಿಸಿಕೊಳ್ಳುವ ಶಿಷ್ಟಾಚಾರವನ್ನು ಬದಿಗೊತ್ತಿದ್ದರು. ಮಾತ್ರವಲ್ಲದೆ ಸ್ವತಃ ರಾಜ್ಯ ಬಿಜೆಪಿ ನಾಯಕರನ್ನೂ ಭೇಟಿಯಾಗಲಿಲ್ಲ. ಯಾರ ಭೇಟಿಗೂ ಅವಕಾಶ ನೀಡದ ಪ್ರೋಟೋಕಾಲ್ ಪಾಲಿಸಬೇಕಾದ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರು ಇಂದು ರಸ್ತೆ ಬದಿಯಲ್ಲೇ ನಿಂತು ಸಾಮಾನ್ಯರ ಜೊತೆಯಲ್ಲೇ ಪ್ರಧಾನಿ ಮೋದಿ ಅವರನ್ನು ನೋಡುವಂತಾಯಿತು.

ಹೆಚ್.ಎ.ಎಲ್ ನಿಂದ ಪೀಣ್ಯಕ್ಕೆ ರಸ್ತೆ ಮಾರ್ಗವಾಗಿ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನೋಡಲು ಜಾಲಹಳ್ಳಿ ವೃತ್ತದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಲು ಜನರಿಗೆ ಅವಕಾಶ ನೀಡಲಾಗಿತ್ತು. ರಸ್ತೆಯ ಒಳಗೆ ಜನರು ಪ್ರವೇಶಿಸದಂತೆ ಎರಡೂ ಕಡೆ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು. ಈ ಬ್ಯಾರಿಕೇಡ್ ನ ಉದ್ದಕ್ಕೂ ಜನರು ನಿಂತು ಮೋದಿಯತ್ತ ಕೈಬೀಸುತ್ತ ಸಂತಸಪಟ್ಟರು. ಇವರ ಜೊತೆ ಸಾಮಾನ್ಯರಂತೆಯೇ ಬ್ಯಾರಿಕೇಡ್ ನ ಹೊರಭಾಗದಲ್ಲಿಯೇ ರಾಜ್ಯ ಬಿಜೆಪಿ ನಾಯಕರು ನಿಂತಿದ್ದರು.

ಜಾಲಹಳ್ಳಿ ವೃತ್ತದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಸಚಿವರಾದ ಮುನಿರತ್ನ, ಗೋಪಾಲಯ್ಯ, ಶಾಸಕ ಕೃಷ್ಣಪ್ಪ ಎಲ್ಲರೂ ಬ್ಯಾರಿಕೇಡ್​ನ ಹೊರಭಾಗದಲ್ಲಿ ಜನರ ನಡುವೆ ಸಾಮಾನ್ಯರಂತೆ ನಿಂತುಕೊಂಡೇ ಮೋದಿಯತ್ತ ಕೈಬೀಸಿ ಸಮಾಧಾನಪಟ್ಟುಕೊಂಡರು. ಬಿಜೆಪಿಯ ಬಹುತೇಕ ಶಾಸಕರು ಇಂದಿನ ಮೋದಿ ರ್ಯಾಲಿಗೆ ಆಗಮಿಸಿದ್ದರೆ ಆಪರೇಷನ್ ಹಸ್ತದಲ್ಲಿ ಹೆಸರು ಕೇಳಿಬರುತ್ತಿರುವ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಮತ್ತು ಭೈರತಿ ಬಸವರಾಜ್ ಗೈರಾಗಿದ್ದರು.

ಇದನ್ನೂ ಓದಿ : ನಾನು ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು, ಸೆಲ್ಯೂಟ್​ ಮಾಡಲು ಇಚ್ಛಿಸಿದ್ದೆ: ಬಾವುಕರಾದ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.