ETV Bharat / state

ಯುವಜನತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು : ಸಚಿವ ನಾರಾಯಣ ಗೌಡ

ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ 36 ಕಾಲೇಜುಗಳು, 36 ಕಾರ್ಯಕ್ರಮ ಅಧಿಕಾರಿಗಳು ಹಾಗೂ 36 ಸ್ವಯಸೇವಕರಿಗೆ ಎನ್ಎಸ್​ಎಸ್ ರಾಜ್ಯ ಪ್ರಶಸ್ತಿಯನ್ನು ಸಚಿವ ನಾರಾಯಣ ಗೌಡ ವಿತರಿಸಿದರು. ಈ ವೇಳೆ ಎನ್‌ಎಸ್ಎಸ್ ಸ್ವಯಂ ಸೇವಕರ ನೊಂದಣಿ ಜಾಲತಾಣ (ವೆಬ್ ಸೈಟ್), ಯುವ ಸಹಾಯವಾಣಿ ಕೇಂದ್ರವನ್ನು ಸಚಿವ ನಾರಾಯಣ ಗೌಡ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಲೋಕಾರ್ಪಣೆಗೊಳಿಸಿದರು..

ಸಚಿವ ನಾರಾಯಣ ಗೌಡ
ಸಚಿವ ನಾರಾಯಣ ಗೌಡ
author img

By

Published : Oct 12, 2021, 4:21 PM IST

ಬೆಂಗಳೂರು : ಮಂಗಳವಾರ ಯವನಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2017-18, 2018-19, 2019-20ನೇ ಸಾಲಿನ ಎನ್‌ಎಸ್ಎಸ್ ರಾಜ್ಯ ಪ್ರಶಸ್ತಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆ ಸಿ ನಾರಾಯಣ ಗೌಡ ಪ್ರದಾನ ಮಾಡಿದರು.

ಎನ್‌ಎಸ್ಎಸ್ ರಾಜ್ಯ ಪ್ರಶಸ್ತಿ ವಿತರಣಾ ಕಾರ್ಯಕ್ರಮ

ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ 36 ಕಾಲೇಜುಗಳು, 36 ಕಾರ್ಯಕ್ರಮ ಅಧಿಕಾರಿಗಳು ಹಾಗೂ 36 ಸ್ವಯಸೇವಕರಿಗೆ ಎನ್ಎಸ್​ಎಸ್ ರಾಜ್ಯ ಪ್ರಶಸ್ತಿಯನ್ನು ಸಚಿವ ನಾರಾಯಣ ಗೌಡ ವಿತರಿಸಿದರು. ಈ ವೇಳೆ ಎನ್‌ಎಸ್ಎಸ್ ಸ್ವಯಂ ಸೇವಕರ ನೋಂದಣಿ ಜಾಲತಾಣ (ವೆಬ್ ಸೈಟ್), ಯುವ ಸಹಾಯವಾಣಿ ಕೇಂದ್ರವನ್ನು ಸಚಿವ ನಾರಾಯಣ ಗೌಡ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಲೋಕಾರ್ಪಣೆಗೊಳಿಸಿದರು.

ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆ ಸಿ ನಾರಾಯಣಗೌಡ ಈ ಸಂದರ್ಭದಲ್ಲಿ ಮಾತನಾಡಿ, ಎನ್‌ಎಸ್ಎಸ್ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ಈ ಪ್ರಶಸ್ತಿಗೆ ಬಾಜನರಾಗಿರುವವರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವವರು. ಎನ್‌ಎಸ್ಎಸ್ ಸ್ವಯಂ ಸೇವಕರಿಗೆ ಇವರೆಲ್ಲಾ ಪ್ರೇರಣೆ ಆಗಬೇಕು.

ಸ್ವಯಂ ಸೇವಕರ ನೋಂದಣಿಗೆ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುವಜನತೆ ಇದರ ಸದುಪಯೋಗ ಪಡೆಯಬೇಕು. ಯುವ ಸ್ಪಂದನೆಗಾಗಿ ಮೊಟ್ಟ ಮೊದಲ ಬಾರಿಗೆ ಸಹಾಯವಾಣಿ ಕೇಂದ್ರ ತೆಗೆಯಲಾಗಿದೆ. ಯುವ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ನಾರಾಯಣ ಗೌಡ ಕರೆ ನೀಡಿದರು.

ಯವನಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ
ಯವನಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ

ನಿಮ್ಹಾನ್ಸ್ ಮೂಲಕ ಎನ್‌ಎಸ್‌ಎಸ್ ಸ್ವಯಂ ಸೇವಕರರಿಗೆ ಕೌನ್ಸೆಲಿಂಗ್ ತರಬೇತಿ ನೀಡಲಾಗುತ್ತಿದೆ. ಈವರೆಗೆ 2,31,000 ಯುವ ಜನರಿಗೆ ಆನ್‌ಲೈನ್ ಕೌನ್ಸೆಲಿಂಗ್ ತರಬೇತಿ ನೀಡಲಾಗಿದೆ. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಎನ್ಎಸ್ಎಸ್ ಚಟುವಟಿಕೆ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಸಾಗಿವೆ ಎಂದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಎನ್‌ಎಸ್ಎಸ್ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಸ್ವಚ್ಛ ಭಾರತ್ ಕಾರ್ಯಕ್ರಮದ ಅಡಿ ಈವರೆಗೂ 1 ಲಕ್ಷ ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಅಕ್ಟೋಬರ್ 1 ರಿಂದ 31ರವರೆಗೆ 75 ಲಕ್ಷ ಟನ್ ತ್ಯಾಜ್ಯ ಸಂಗ್ರಹಿಸಿ, ಸಮರ್ಪಕ ನಿರ್ವಹಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಸನ್ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ ಅಮೃತ ಸಮುದಾಯದ ಅಭಿವೃದ್ಧಿ ಯೋಜನೆಯ ಜವಾಬ್ದಾರಿಯನ್ನು ಎನ್‌ಎಸ್‌ಎಸ್‌ಗೆ ನೀಡಲಾಗಿದೆ. 750 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳ ಸಂಪೂರ್ಣ ಚಿತ್ರಣವನ್ನು ಎನ್‌ಎಸ್‌ಎಸ್ ಯಶಸ್ವಿಯಾಗಿ ದಾಖಲಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇತರ ಇಲಾಖೆಗಳೊಂದಿಗೆ ಜೋಡಿಸಲಿದೆ ಎಂದು ಸಚಿವ ನಾರಾಯಣ ಗೌಡ ತಿಳಿಸಿದರು.

ಇದೇ ಮೊದಲ ಬಾರಿಗೆ ಕರ್ನಾಟಕದ ನಾಲ್ವರಿಗೆ ರಾಷ್ಟ್ರಮಟ್ಟದ ಎನ್ಎಸ್‌ಎಸ್ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಕೋವಿಡ್ ಸಂಕಷ್ಟದಲ್ಲೂ ಮಹಾಮಾರಿ ವಿರುದ್ಧ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ ಎನ್‌ಎಸ್ಎಸ್ ಸೇವೆ ಅಪಾರವಾದದ್ದು ಎಂದರು.

ಸಚಿವ ನಾರಾಯಣ ಗೌಡ  ಮತ್ತು ಅಶ್ವತ್ಥ ನಾರಾಯಣ
ಸಚಿವ ನಾರಾಯಣ ಗೌಡ ಮತ್ತು ಅಶ್ವತ್ಥ ನಾರಾಯಣ

ಸಮಾಜದ ಏಳಿಗೆಗೆ ಎನ್ಎಸ್ಎಸ್ ಕೊಡುಗೆ ತುಂಬಾ ದೊಡ್ಡದಿದೆ. ಇನ್ನಷ್ಟು ಸಮಾಜಮುಖಿ ಯುವಜನರಿಗೆ ಅನುಕೂಲಕರವಾದ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ನಾರಾಯಣ ಗೌಡ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ, ಯುವ ಸಹಾಯವಾಣಿ ಆರಂಭಿಸಿರುವುದು ಯುವ ಜನತೆಗೆ ಬಹಳ ಅನುಕೂಲ ಆಗಲಿದೆ. ಯುವ ಜನತೆಯಲ್ಲಿರುವ ಮಾನಸಿಕ ತೊಳಲಾಟ ಹೇಳಿಕೊಳ್ಳಲು ಇದು ಅನುಕೂಲವಾಗಲಿದೆ. ಈ ಸಹಾಯವಾಣಿ ಸಂಖ್ಯೆಯನ್ನು ಹೆಚ್ಚು ಹೆಚ್ಚು ಪ್ರಚಾರಪಡಿಸುವ ಮೂಲಕ ಎಲ್ಲರಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಎನ್‌ಎಸ್ಎಸ್ ಸ್ಥಾಪನೆ ಮಾಡಿರುವ ಉದ್ದೇಶವನ್ನ ಯಶಸ್ವಿಗೊಳಿಸಬೇಕು. ಇಷ್ಟು ದಿನ ಎನ್‌ಎಸ್ಎಸ್ ಪಠೇತ್ಯರ ಚಟುವಟಿಕೆ ಆಗಿತ್ತು. ಆದರೀಗ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿ ಎನ್‌ಎಸ್ಎಸ್ ಹಾಗೂ ಎನ್‌ಸಿಸಿಯನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.

ಇದರಿಂದ ಎನ್‌ಎಸ್ಎಸ್‌ಗೆ ಸೇರಿಸಿಕೊಳ್ಳಲು ಅನುಕೂಲ ಆಗಲಿದೆ. ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಕ್ರೀಡಾ ಇಲಾಖೆಗೆ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಕ್ರೀಡೆ ಇದ್ದರೇ ಎಲ್ಲವೂ ಸಿಗಲಿದೆ. ಉನ್ನತ ಶಿಕ್ಷಣ ಇಲಾಖೆಯಿಂದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಗಣ್ಯರು, ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.