ETV Bharat / state

ಒಕ್ಕಲಿಗ ಹೆಣ್ಣು ಮಗಳ ಬಗ್ಗೆ ಮಾತನಾಡಿದ್ದರೆ ಜೀವ ಬಿಡಲು ಸಿದ್ಧ : ಡಿ ಕೆ ಸುರೇಶ್​ಗೆ ಮುನಿರತ್ನ ಸವಾಲು

ನನ್ನ ಮಾತಿನಲ್ಲಿ ಒಕ್ಕಲಿಗ ಹೆಣ್ಣುಮಗಳು ಎನ್ನುವ ಪದ ಬಳಕೆಯಾಗಿರುವುದನ್ನು ತೋರಿಸಿದ್ದಲ್ಲಿ ರಾಜಕೀಯವನ್ನೇ ಏಕೆ ಜೀವವನ್ನೇ ಬಿಡಲು ಸಿದ್ಧ ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಆರೋಪಕ್ಕೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.

ಮುನಿರತ್ನ ಹಾಗೂ ಡಿ ಕೆ ಸುರೇಶ್​
ಮುನಿರತ್ನ ಹಾಗೂ ಡಿ ಕೆ ಸುರೇಶ್​
author img

By

Published : Mar 31, 2023, 7:12 PM IST

ಬೆಂಗಳೂರು: ನೆಲ ಜಲ ಭಾಷೆಗೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಯಾವ ಕಾರಣಕ್ಕೂ ಇಂತಹ ದ್ರೋಹದ ಕೆಲಸ ನಾನು ಮಾಡಲ್ಲ. ಅವರಂತೆ ನಾನು ನೀಚತನದ ರಾಜಕಾರಣ ಮಾಡಲ್ಲ. ಕಟ್ ಮಾಡಿದ ವಿಡಿಯೋ ವೈರಲ್ ಮಾಡಲಾಗುತ್ತಿದೆ. ನನ್ನ ಮಾತಿನಲ್ಲಿ ಒಕ್ಕಲಿಗ ಹೆಣ್ಣುಮಗಳ ಎನ್ನುವ ಪದ ಬಳಕೆಯಾಗಿರುವುದನ್ನು ತೋರಿಸಿದಲ್ಲಿ ರಾಜಕೀಯವನ್ನೇ ಏಕೆ ಜೀವವನ್ನೇ ಬಿಡಲು ಸಿದ್ಧ. ಆರೋಪ ಸಾಬೀತುಪಡಿಸದೇ ಇದ್ದಲ್ಲಿ ಸಂಸದ ಡಿ ಕೆ ಸುರೇಶ್ ರಾಜೀನಾಮೆ ನೀಡ್ತಾರಾ? ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಆರೋಪಕ್ಕೆ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.

ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅವರು ಕಟ್ ಮಾಡಿ ವಿಡಿಯೋ ವೈರಲ್ ಮಾಡಿದ್ದಾರೆ. ಲೋಕಸಭಾ ಸದಸ್ಯರು ನನಗೆ ಸಂಬಂಧಪಟ್ಟಂತೆ ಕೆಲ ಪದ ಬಳಕೆ ಮಾಡಿದ್ದಾರೆ. ಡಿ ಕೆ ಸುರೇಶ್ ಮೇಲೆ ನನಗೆ ಬಹಳ ಗೌರವವಿದೆ. ಏಳು ವರ್ಷಗಳ ಕಾಲ ಅವರ ಜತೆಯಲ್ಲಿ ಇದ್ದೆ. ಅವರ ಜತೆ ಇದ್ದಾಗ ಐದು ಭಾಷೆಯಲ್ಲಿ ಮಾತನಾಡಿಸಿದ್ದಾರೆ ಎಂದರು.

ನಿಮ್ಮ ವಕ್ರದೃಷ್ಟಿ ಬೆಂಗಳೂರಿನ ಮೇಲೆ ಬೀರುವುದು ಬೇಡ - ಮುನಿರತ್ನ: ತೆಲುಗು, ತಮಿಳು, ಉರ್ದು ಭಾಷೆಯಲ್ಲಿ ಮಾತನಾಡಿದ್ದೆ. ಆ ಮೂಲಕ ಮತ ಬರುತ್ತದೆ ಅಂತ ಅವರೇ ಹೇಳಿದ್ದರು. ನನಗೆ ಎಲ್ಲಾ ಭಾಷೆ ಬರುತ್ತದೆ. ನಾನು ಬಿಜೆಪಿಗೆ ಬಂದ ಮೇಲೆ ಇವರು ಸಣ್ಣಮಟ್ಟಕ್ಕೆ ಇಳಿಯುತ್ತಿದ್ದಾರೆ. ಕೆಳಮಟ್ಟದ ರಾಜಕಾರಣ ಸುರೇಶ್​ಗೆ ಒಳ್ಳೆಯದಲ್ಲ. ನಿಮ್ಮ ವಕ್ರದೃಷ್ಟಿ ಬೆಂಗಳೂರಿನ ಮೇಲೆ ಬೀರುವುದು ಬೇಡ. ಬೆಂಗಳೂರು ಶಾಂತಿಯುತವಾಗಿದೆ. ಇಲ್ಲಿ ಜಾತಿ ತರಬೇಡಿ. ಜಾತಿ, ಭಾಷೆ ರಾಜಕಾರಣಕ್ಕೆ ತರಬೇಡಿ ಎಂದು ಸಂಸದ ಡಿಕೆ ಸುರೇಶ್ ವಿರುದ್ಧ ಮುನಿರತ್ನ ಹರಿಹಾಯ್ದರು.

ಸುನಂದಾ ಬೋರೇಗೌಡರ ಹೊಡೆಯಲು 50 ಸಾವಿರ ದುಡ್ಡು ಕೊಟ್ಟರು, ಯಾರು ಸ್ವಾಮಿ ಕೊಟ್ಟಿದ್ದು, ಸಾಧನೆ ಬಗ್ಗೆ ಮಾತನಾಡೋಣ ಬನ್ನಿ ಎಂದು ಬಹಿರಂಗ ಸವಾಲು ಹಾಕಿದ ಮುನಿರತ್ನ, ಅವರ ಅಣ್ಣ ಸಿಎಂ ಆಗಬೇಕು ಅಂತ ಗಡ್ಡ ತೆಗೆಯುತ್ತಿಲ್ಲ. ಸಿಎಂ ಆಗಬೇಕು ಅಂತ ಮನವಿ ಮಾಡುತ್ತಿದ್ದಾರೆ. ಆದರೆ ತಮ್ಮನಿಗೆ ಬರೀ ಆರ್ ಆರ್ ನಗರದ್ದೇ ಚಿಂತೆ. ಅಣ್ಣನ ಜತೆ ಹೋಗದೇ ಬರೀ ಆರ್ ಆರ್ ನಗರದಲ್ಲಿ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುರೇಶ್ ಆರೋಪ ಸತ್ಯಕ್ಕೆ ದೂರವಾದದ್ದು: ನಿಮ್ಮ ಒಳಸಂಚು ನನ್ನ ಗಮನಕ್ಕೆ ಬಂದಿದೆ. ನೀವೇ ಕಾರ್ಯಕರ್ತರ ಮೇಲೆ ದಾಳಿ ಮಾಡಿಸಿ ನನ್ನ ಮೇಲೆ ದೂರು ಕೊಡಲು ರೆಡಿಯಾಗುತ್ತಿದ್ದೀರಿ. ಇದನ್ನ ನಾನು ಪೊಲೀಸರ ಗಮನಕ್ಕೆ ತಂದಿದ್ದೇನೆ. ನಿಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನೂ ನೀವು ಗೆಲ್ಲಲ್ಲ. ಎಂಟು ಕ್ಷೇತ್ರ ಬಿಟ್ಟು ಕೇವಲ ಆರ್ ಆರ್ ನಗರಕ್ಕೆ ಬರ್ತಿರಾ? ಕೆ ಸುರೇಶ್ ಆರೋಪ ಸತ್ಯಕ್ಕೆ ದೂರವಾದದ್ದು. ಐದು ವರ್ಷದಿಂದ ಎಲ್ಲಿ ಹೋಗಿದ್ದರು.? ನಿಮ್ಮ ಕಷ್ಟಕ್ಕೆ ಬರದವರನ್ನ ಸೇರಿಸಬೇಡಿ ಎಂದು ಕ್ಷೇತ್ರದ ಜನತೆಗೆ ಹೇಳಿದ್ದೇನೆ ಅಷ್ಟೇ. ಕೋವಿಡ್‌ನಲ್ಲಿ ಯಾರಿಗಾದ್ರೂ ಒಪ್ಪತ್ತು ಊಟ ಕೊಟ್ಟಿದ್ರೆ ತೋರಿಸಲಿ. ಇಷ್ಟು ದಿನ ಎಲ್ಲಿ ಹೋಗಿದ್ದರು ಕೇಳಿ ಅಂತ ಹೇಳಿದ್ದೇನೆಯೇ ಹೊರತು. ಯಾವುದಾದ್ರೂ ಭಾಷೆ ಬಗ್ಗೆ ಮಾತನಾಡಿದ್ದೇನಾ? ಎಂದು ಪ್ರಶ್ನಿಸಿದರು.

ಪುನೀತ್ ರಾಜ್‍ಕುಮಾರ್ ಪ್ರತಿಮೆ ಕೊಡಿಸಿದ್ದೇನೆ. ಕನ್ನಡದಲ್ಲಿ ಹಾಡು ಹೇಳಿದ್ದೇನೆ. ನಿಮ್ಮ ನೆಲ ಕನ್ನಡ ತಾಯಿಗೆ ಮೋಸ ಮಾಡಬೇಡಿ ಅಂತ ಹೇಳಿದ್ದೇನೆ. ರಾಜಕೀಯದಿಂದ ದೂರವಾದರೂ ನಾನು ಕನ್ನಡ ವಿರೋಧಿಯಾಗಿ ಮಾತನಾಡಲ್ಲ. ಮುಂದಾದರೂ ಡಿಕೆ ಸುರೇಶ್‌ಗೆ ಒಳ್ಳೆಯ ಬುದ್ಧಿ ಕೊಡಲಿ. ಇರುವವರೆಗೂ ನ್ಯಾಯದಿಂದ ರಾಜಕಾರಣ ಮಾಡಿ ಎಂದು ಟಾಂಗ್ ನೀಡಿದರು.

ಡಿ ಕೆ ಸುರೇಶ್ ಆರೋಪ ಮಾಡಿರುವಂತೆ ನಾನು ಒಕ್ಕಲಿಗರು ಇಲ್ಲವೇ ಹೆಣ್ಣು ಮಗಳು ಅಂತ ಪದ ಬಳಸಿದ್ದರೆ ಈಗಲೇ ರಾಜೀನಾಮೆ ಕೊಡುತ್ತೇನೆ. ಇಲ್ಲದಿದ್ದರೆ ಸುರೇಶ್ ರಾಜೀನಾಮೆ ಕೊಡುತ್ತಾರಾ? ನಾನು ಕ್ರಿಶ್ಚಿಯನ್ ಮತಾಂತರದ ಬಗ್ಗೆ ಮಾತನಾಡಿದ್ದೇನೆ. ಅವತ್ತು ಕೊರೊನಾ ಕಷ್ಟದಲ್ಲಿ ಬರದಿರುವವರು ಇವತ್ತು ಬರುತ್ತಿದ್ದಾರೆ ಅಂತ ಹೇಳಿದ್ದೇನೆ. ಕ್ರಿಶ್ಚಿಯನ್ ಮತಾಂತರ ಹೆಚ್ಚಾಗ್ತಿದೆ. ಮತಾಂತರ ಮಾಡಲು ಹೋದವರನ್ನ ಹೊಡೆದೋಡಿಸಿ ಅಂತ ಹೇಳಿದ್ದೇನೆಯೇ ಹೊರತು ಯಾವುದೇ ಬೇರೆ ಮಾತನ್ನ ಹೇಳಿಲ್ಲ. ಒಕ್ಕಲಿಗರ ಹೆಣ್ಣು ಮಗಳು ಅಂತ ಎಲ್ಲಿಯಾದರೂ ನಾನು ಹೇಳಿಕೆ ನೀಡಿದ್ದು ಇದ್ದರೆ ರಾಜಕಾರಣ ಬಿಡುತ್ತೇನೆ. ಆ ಪದ ಬಳಕೆ ಮಾಡಿದರೆ ಇಲ್ಲೇ ನೇಣು ಹಾಕಿಕೊಂಡು ಜೀವ ಬಿಡುತ್ತೇನೆ ಎಂದು ಸವಾಲೆಸೆದರು.

ಡಿ. ಕೆ ಸುರೇಶ್ ಪ್ರಾಮಾಣಿಕ. ಅವರಿಗೆ ಭ್ರಷ್ಟಾಚಾರ ಅಂದರೆ ಏನು ಅಂತಲೇ ಗೊತ್ತಿಲ್ಲ. ಹಣವನ್ನೇ ನೋಡಿಲ್ಲ. ಮುನಿರತ್ನ ಬಂಧಿಸಿ ತಿಹಾರ್ ಜೈಲಿನಲ್ಲಿ 42 ದಿನ ಇಡಲಿ. ಇಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದ ಮುನಿರತ್ನ, ಕಾಂಗ್ರೆಸ್​​ನಿಂದ ಹೊರಗೆ ಬಂದು ಒಳ್ಳೆಯ ಕೆಲಸ ಮಾಡಿದ್ದೇನೆ. ಬಿಜೆಪಿಯಲ್ಲಿ ಒಳ್ಳೆಯ ಗೌರವ ಕೊಡ್ತಿದ್ದಾರೆ ಅಷ್ಟು ಸಾಕು ಎಂದು ಹೇಳಿದರು.

ಇದನ್ನೂ ಓದಿ : ಶಿಕಾರಿಪುರದಿಂದಲೇ ವಿಜಯೇಂದ್ರ ಕಣಕ್ಕೆ: ಸಿದ್ದರಾಮಯ್ಯ ವಿರುದ್ಧದ ಸ್ಪರ್ಧೆ ವದಂತಿಗೆ ತೆರೆ ಎಳೆದ ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.