ETV Bharat / state

ಭೂ ಖರೀದಿದಾರರಿಗೆ ಸದ್ಯದಲ್ಲೇ ಶಾಕ್: ಆಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಚಿಂತನೆ.. ಸಚಿವ ಕೃಷ್ಣ ಭೈರೇಗೌಡ - ಸಿದ್ದರಾಮಯ್ಯ ಸರ್ಕಾರ

ಆಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಭೂ ಖರೀದಿದಾರರಿಗೆ ನೋಂದಣಿ ದರ ಏರಿಕೆ ಬಿಸಿ ತಟ್ಟಲಿದೆ.

ಆಸ್ತಿ ಮಾರ್ಗಸೂಚಿ ದರ ಸಚಿವ ಕೃಷ್ಣ ಭೈರೇಗೌಡ property registration charge
ಆಸ್ತಿ ಮಾರ್ಗಸೂಚಿ ದರ
author img

By

Published : Jun 19, 2023, 1:33 PM IST

ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಭೂ ಖರೀದಿದಾರರಿಗೆ ಸರ್ಕಾರ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಲು ಮುಂದಾಗಿದೆ‌. ಶೀಘ್ರದಲ್ಲೇ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಿಸುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುವ ಚಿಂತನೆ ಇದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಮಾರ್ಗಸೂಚಿ ದರ ಏರಿಕೆಯಾಗಿಲ್ಲ.‌ ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ಮಾರ್ಗಸೂಚಿ ದರ ಏರಿಕೆ ಮಾಡಲಾಗುವುದು. ಆದರೆ, ರಾಜ್ಯದಲ್ಲಿ ನಾಲ್ಕು ವರ್ಷ ಆದರೂ ಮಾರ್ಗಸೂಚಿ ದರ ಏರಿಕೆ ಮಾಡಿಲ್ಲ. ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾರ್ಗಸೂಚಿ ದರ ಇರಬೇಕೆಂದು ಅಧಿಕಾರಿಗಳು ಹೇಳಿದ್ದಾರೆ ಎಂದರು.

ಈಗ ಮಾರುಕಟ್ಟೆ ಬೆಲೆಗೂ ಗೈಡೆನ್ಸ್ ವ್ಯಾಲ್ಯೂಗೂ ಸಾಕಷ್ಟು ವ್ಯತ್ಯಾಸ ಇದೆ. ಇದರಿಂದ ರೈತರಿಗೂ ತೊಂದರೆ ಆಗುತ್ತದೆ. ಹಾಗಾಗಿ ಗೈಡೆನ್ಸ್ ವ್ಯಾಲ್ಯೂ ರಿವಿಸನ್ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡಲಿದ್ದೇವೆ. ಎಷ್ಟು ದರ ಏರಿಕೆ ಮಾಡಬೇಕೆಂದು ಈ ವಾರದಲ್ಲಿ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜುಲೈ ಮೊದಲ ವಾರದಲ್ಲಿ ಬರ ಘೋಷಣೆ ತೀರ್ಮಾನ: ಮಳೆ ಕೊರತೆ ಮುಂದುವರಿದರೆ ಜುಲೈ ಮೊದಲ ವಾರದಲ್ಲಿ ಬರಗಾಲ ಘೋಷಣೆ ಮಾಡಬೇಕಾ ಅಥವಾ ಬೇಡ್ವಾ ಎಂದು ತೀರ್ಮಾನಿಸುತ್ತೇವೆ ಎಂದು ಇದೇ ವೇಳೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ಕಾಡಿದೆ. ಮುಂಗಾರು ತಡವಾಗಿ ಪ್ರವೇಶ ಮಾಡಿದ ಕಾರಣ ಸಮಸ್ಯೆ ಎದುರಾಗಿದೆ. ಚಂಡಮಾರುತ ತೇವಾಂಶ ಎಳೆದುಕೊಂಡಿದ್ದರಿಂದ ದಕ್ಷಿಣ ಭಾರತಕ್ಕೆ ಮುಂಗಾರು ತಡವಾಗಿದೆ. ಹವಾಮಾನ ಇಲಾಖೆಯ ತಜ್ಞರ ವೈಜ್ಞಾನಿಕ ಮಾಹಿತಿ ಪ್ರಕಾರ, ನಿನ್ನೆಯಿಂದ ಮುಂಗಾರು ಚುರುಕು ಆಗ್ತಿದೆ. ಉಡುಪಿ, ಕಾರವಾರದಲ್ಲಿ ಮಳೆ ಕಡಿಮೆ ಇತ್ತು. ಈಗ ಅಲ್ಲಿ ಎಲ್ಲ ಕಡೆಗಳಲ್ಲಿ ವಾಡಿಕೆಯಂತೆ ಮಳೆಯಾಗಿದೆ. ಆ ಭಾಗದಲ್ಲಿ ಮುಂಗಾರು ಪ್ರವೇಶ ಆಗಿದೆ. ಅದೇ ರೀತಿ ರಾಜ್ಯದಲ್ಲೂ ವ್ಯಾಪಿಸಿಕೊಳ್ಳಲಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲೂ ಮಳೆ ಆಗುತ್ತದೆ ಎಂದು ಹೇಳಿದ್ದಾರೆ ಎಂದರು.

ಜೂನ್ 1 ರಿಂದ ಎಲ್ಲ ಕಡೆಯೂ ಮಳೆ ಕೊರತೆ ಆಗಿದೆ‌. ಮುಂಗಾರು ಪೂರ್ವದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿತ್ತು. ಬರುವ ದಿನಗಳಲ್ಲಿ ಮಳೆ ಬರುತ್ತೆ ಅಂತಾ ನಿರೀಕ್ಷೆ ಇಟ್ಟು ಕೊಂಡಿದ್ದೇವೆ. ಈಗಾಗಲೇ ಸಿಎಂ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸೂಚನೆ ಕೊಟ್ಟಿದ್ದಾರೆ. ಇದುವರೆಗೂ ನಾವು ಸ್ವಲ್ಪ ಆತಂಕದಲ್ಲೇ ಇದ್ದೇವೆ ಎಂದು ತಿಳಿಸಿದರು.

ರಾಜ್ಯದ ಸುಮಾರು 806 ಸ್ಥಳಗಳಲ್ಲಿ ನೀರಿನ‌ ಕೊರತೆ: ರಾಜ್ಯದ ಸುಮಾರು 806 ಕಡೆಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಉಡುಪಿ, ಮಂಗಳೂರು, ಕಾರವಾರ, ಕಲ್ಯಾಣ ಕರ್ನಾಟಕ, ಶಿವಮೊಗ್ಗದ ಕೆಲ ಭಾಗದಲ್ಲಿ ನೀರಿನ ಕೊರತೆ ಇದೆ. ಈಗಾಗಲೇ ಈ ಭಾಗಗಳಿಗೆ ಟ್ಯಾಂಕರ್ ಹಾಗೂ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲು ಸೂಚಿಸಲಾಗಿದೆ ಎಂದರು.

ಮೋಡ ಬಿತ್ತನೆ ಚಿಂತನೆ ಇಲ್ಲ: ಸದ್ಯ ಮೋಡ ಬಿತ್ತನೆ ಮಾಡುವ ಚಿಂತನೆ ಇಲ್ಲ. ಮೋಡ ಬಿತ್ತನೆಯ ವೈಜ್ಞಾನಿಕತೆ ಬಗ್ಗೆ ಗೊಂದಲ ಇದೆ. ಸದ್ಯಕ್ಕೆ ಮೋಡ ಬಿತ್ತನೆ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ರಾಜ್ಯದಲ್ಲಿ ಸರಾಸರಿ ಶೇ. 96-104 ರಷ್ಟು ಮಳೆ ಆಗುತ್ತೆ ಎಂದು ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಕಾವೇರಿ 2 ತಂತ್ರಾಶ ಯಶ ಕಂಡಿದೆ: ದಸ್ತಾವೇಜು ನೋಂದಾಣಿಗಾಗಿನ ಕಾವೇರಿ 2 ತಂತ್ರಾಶ ಯಶ ಕಂಡಿದೆ. ನೋಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ ತರಲಾಗಿದೆ. ಆಡಳಿತ ಸುಧಾರಣೆ ಆಗಬೇಕು. ಜನರಿಗೆ ಸರ್ಕಾರದ ಜೊತೆಗೆ ಸಂಪರ್ಕ ಇದ್ದಾಗ ವಿಳಂಬ ಇಲ್ಲದೆ ಕೆಲಸ ಆಗಬೇಕು ಎಂಬುದು ಸರ್ಕಾರದ ಆದ್ಯತೆ ಇದೆ. ಜನರು ಹಾಗೂ ಸರ್ಕಾರದ ನಡುವೆ ರಿಜಿಸ್ಟ್ರೇಷನ್ ಅತ್ಯಂತ ಪ್ರಮುಖ ಭಾಗ. ನೋಂದಣಿ ಇಲಾಖೆಯಲ್ಲಿ ಬಹಳ ಅವ್ಯವಸ್ಥೆ ಇದೆ. ನೋಂದಣಿ ವೇಳೆ ಬಹಳಷ್ಟು ವಿಳಂಬ ಆಗ್ತಿದೆ. ಜನರು ಅವರ ಆಸ್ತಿ ಮಾರಾಟ ಮಾಡುವುದಕ್ಕೆ ಯಾತನೆ ಅನುಭವಿಸಿದ್ದಾರೆ. ಬಹಳ ವರ್ಷಗಳ ಸುಧಾರಣೆಯಿಂದ ಇದನ್ನು ಬಗೆಹರಿಸಲು ಕಾವೇರಿ-2 ಎಂಬ ಪದ್ಧತಿ ತರಲಾಗಿದೆ. ಕಾವೇರಿ-2 ವ್ಯವಸ್ಥೆ ಬಗ್ಗೆ ಅನುಕೂಲ ಅನಾನುಕೂಲ ಎರಡೂ ಆಗ್ತಿದೆ ಎಂಬ ಮಾಹಿತಿ ಇದೆ. ಏಪ್ರಿಲ್​​ನಿಂದ ನೋಂದಣಿ ಪ್ರಕ್ರಿಯೆಯಲ್ಲಿ ಕಾವೇರಿ 2 ಅಳವಡಿಸಿಕೊಳ್ಳಲಾಗಿದೆ ಎಂದರು.

256 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ 251 ಕಚೇರಿಗಳಲ್ಲಿ ಇಂದು ಸಂಜೆಯೊಳಗೆ ಕಾವೇರಿ -2 ಅನುಷ್ಟಾನ ಮಾಡ್ತಿದ್ದೇವೆ. ನೋಂದಣಿ ಇಲಾಖೆಯ ಕಾರ್ಯ ಪ್ರಗತಿ ಪರಿಶೀಲನೆ ಮಾಡಿದ್ದೇನೆ. ನೋಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ ತರಲಾಗಿದೆ. ಆಡಳಿತ ಸುಧಾರಣೆ ಆಗಬೇಕು, ಜನರ ಕೆಲಸ ಸರಾಗವಾಗಿ ಆಗಬೇಕು. ಇದು ಸರ್ಕಾರದ ಮುಖ್ಯ ಆದ್ಯತೆ. ಕಂದಾಯ ಇಲಾಖೆ ಜೊತೆ ಜನರ ಸಂಪರ್ಕ ಜಾಸ್ತಿ ಇದೆ. ಕಾವೇರಿ 2 ಅಂದರೆ ಸರಳೀಕೃತ ನೋಂದಣಿ ಪ್ರಕ್ರಿಯೆ ಏಪ್ರಿಲ್ ತಿಂಗಳಿಂದ ಪ್ರಾರಂಭ ಆಗಿದೆ ಎಂದು ವಿವರಿಸಿದರು.

ಈಗ ಕಾವೇರಿ 2 ಮೂಲಕ ಆನ್ ಲೈನ್​​ನಲ್ಲೇ ಡಾಕ್ಯುಮೆಂಟ್ ಸಲ್ಲಿಕೆ ಮಾಡಬಹುದು. ಅಧಿಕಾರಿಗಳು ಆನ್ ಲೈನ್​​ನಲ್ಲೇ ಪರಿಶೀಲನೆ ಮಾಡಿ, ನಿಮಗೆ ಹೇಳ್ತಾರೆ. ಆ ಮೇಲೆ ಅದಕ್ಕೆ ತಗಲುವ ವೆಚ್ಚವನ್ನು ಆನ್ ಲೈನ್​​ನಲ್ಲೇ ಪಾವತಿ ಮಾಡಬಹುದು. ಮಾರಾಟ ಮಾಡುವವರು, ಕೊಂಡುಕೊಳ್ಳುವವರು ಸಮಯವನ್ನು ಅವರೇ ಸೆಲೆಕ್ಟ್ ಮಾಡಿಕೊಳ್ಳಬಹುದು. ಆ ನಂತರ ಕಂಪ್ಯೂಟರ್ ಮುಂದೆ ಕೂತು, ಫೋಟೋ ತೆಗೆಯುತ್ತಾರೆ. ಆ ನಂತರ ಹೆಬ್ಬೆರಳು ಸಹಿ ಕೊಟ್ಟು ಬರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Krishna Byre Gowda: ಬಿಜೆಪಿ ಆಡಳಿತದಲ್ಲಿ ಸಂಘ ಸಂಸ್ಥೆಗಳಿಗೆ ಮಂಜೂರಾಗಿದ್ದ ಭೂಮಿ ಮರುಪರಿಶೀಲನೆ: ಸಚಿವ ಸಚಿವ ಕೃಷ್ಣ ಭೈರೇಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.