ಬೆಂಗಳೂರು : ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳು ಸೇರಿ ಬೆಂಗಳೂರಿನ ಒಟ್ಟು 41 ಸ್ಥಳಗಳಲ್ಲಿ 4,958 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇವುಗಳಲ್ಲಿ 2,107 ಹಾಸಿಗೆಗಳು ಅಂದರೆ ಸುಮಾರು ಶೇ.42.49% ಹಾಸಿಗೆಗಳು ಖಾಲಿ ಇವೆ ಎಂದು ಹೇಳಿದ್ದಾರೆ.