ETV Bharat / state

Bitcoin Case: ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಇಲಿಯನ್ನು ಬೆಟ್ಟ ಮಾಡಬೇಡಿ: ಕಾಂಗ್ರೆಸ್​ ವಿರುದ್ಧ ಸುಧಾಕರ್ ಕಿಡಿ

author img

By

Published : Nov 14, 2021, 12:12 AM IST

Updated : Nov 14, 2021, 1:35 AM IST

ನಮ್ಮ ರಾಜ್ಯದಲ್ಲಿ ವಿಪಕ್ಷದ ಕೆಲವು ನಾಯಕರು ಕೂಡಾ ಆಪಾದನೆಯಲ್ಲಿ ತೊಡಗಿದ್ದಾರೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ. ಇಡೀ ದೇಶಕ್ಕೆ ತಲುಪಬೇಕು ಎಂದು ದೆಹಲಿಯಿಂದ ಸುದ್ದಿಗೋಷ್ಠಿ ಮಾಡಿದ್ದಾರೆ.

Karnataka Minister K Sudhakar on Congress' allegations on the alleged bitcoin
ಕಾಂಗ್ರೆಸ್​ ಆರೋಪಕ್ಕೆ ಸುಧಾಕರ್ ಪ್ರತಿಕ್ರಿಯೆ

ಬೆಂಗಳೂರು: ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ. ಇಲಿಯನ್ನು ಬೆಟ್ಟ ಮಾಡಲು ಹೋಗಬೇಡಿ. ಏನೂ‌ ಇಲ್ಲದನ್ನು ಮಾಡಲು ಹೋಗಿ ನಗೆಪಾಟಲಿಗೆ ಈಡಾಗ್ತೀರಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಿಟ್ ಕಾಯಿನ್( bitcoin scam) ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ನಗರದ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾರನ್ನೂ ರಕ್ಷಣೆ ಮಾಡುವ ಅಗತ್ಯ ಸಿಎಂ ಬೊಮ್ಮಾಯಿ‌ ಅವರಿಗೆ ಇಲ್ಲ. ತನಿಖೆ ಆಗಲಿ, ಯಾವ ರಾಜಕಾರಣಿಗಳು ಇದ್ದಾರೆ, ಯಾವ ರಾಜಕಾರಣಿಗಳ ಸಹೋದರರು ಇದ್ದಾರೆ, ಯಾವ ರಾಜಕಾರಣಿಗಳ ಮಕ್ಕಳು ಇದ್ದಾರೆ ಎಂಬುದು ಗೊತ್ತಾಗುತ್ತದೆ. ಯಾವ ಹಂತದಲ್ಲಿ ತನಿಖೆ ಮಾಡಿಸಬೇಕು ಎಂಬುದನ್ನು ನಮ್ಮ ಸರ್ಕಾರ ತೀರ್ಮಾನ‌ ಮಾಡುತ್ತದೆ ಎಂದರು.

ನಮ್ಮ ರಾಜ್ಯದಲ್ಲಿ ವಿಪಕ್ಷದ ಕೆಲವು ನಾಯಕರು ಕೂಡಾ ಆಪಾದನೆಯಲ್ಲಿ ತೊಡಗಿದ್ದಾರೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ. ಇಡೀ ದೇಶಕ್ಕೆ ತಲುಪಬೇಕು ಎಂದು ದೆಹಲಿಯಿಂದ ಸುದ್ದಿಗೋಷ್ಠಿ ಮಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ದೊಡ್ಡ ಸ್ಕ್ಯಾಮ್ ಆಗಿದೆ, ಪ್ರಭಾವಿ ವ್ಯಕ್ಯಿಗಳು, ಅಧಿಕಾರಿಗಳು, ಸರ್ಕಾರ ಸಿಕ್ಕಿಹಾಕಿಕೊಂಡಿದೆ ಎಂದು ಸುಳ್ಳಿ‌ನ ಕಂತೆಯನ್ನು ನಿಜ ಮಾಡುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಸರ್ಕಾರಕ್ಕೆ ಆರು ಪ್ರಶ್ನೆ ಕೇಳಿದ್ದಾರೆ. ಶ್ರೀಕಿ(Srikrishna alias Sriki) ಹೇಗೆ ಸಿಕ್ಕಿಹಾಕಿಕೊಂಡ ಅನ್ನೋದು ಮೊದಲು ಅರ್ಥವಾಗಬೇಕು. ಹಿಂದಿನ ಕಾಂಗ್ರೆಸ್ ಸರ್ಕಾರ ಅವನನ್ನು ಹಿಡಿದಿರಲಿಲ್ಲ. ಈಗಿನ ಸಿಎಂ ಗೃಹ ಸಚಿವರಾಗಿದ್ದಾಗ ಡ್ರಗ್ಸ್ ವಿರುದ್ಧ ಆಂದೋಲನ ಮಾಡಿದಾಗ ಶ್ರೀಕಿ ಸಿಕ್ಕಿಹಾಕಿಕೊಂಡ. ಅವನನ್ನು ತನಿಖೆ ಮಾಡಲು ಆರಂಭಿಸಿದಾಗ ಅವನು ಒಂದೊಂದಾಗಿ ಹೇಳಲು ಆರಂಭಿಸಿದ. ತನಿಖೆ ವೇಳೆ ಕೆಲವು ಹೇಳಿಕೆ ಕೊಟ್ಟಿದ್ದ ಎಂದು ತಿರುಗೇಟು ನೀಡಿದರು.

ಮಾದಕ ವ್ಯಸನಿಯ ಮಾತುಗಳಿಗೆ ಕಾಂಗ್ರೆಸ್ ಪ್ರಾಮುಖ್ಯತೆ ಕೊಡುತ್ತಿದೆ:

ಯಾರು ನಟರು ಅಂತಾ ಸುರ್ಜೇವಾಲಾ ಪ್ರಶ್ನೆ ಕೇಳಿದ್ದಾರೆ. ಇಲ್ಲಿ ಡ್ರಗ್ಸ್ ವಿರುದ್ಧ ಆಂದೋಲನ ಮಾಡಿ ಸಮರ ಸಾರಿದವರು ನಟರಾ?. ದೆಹಲಿಯಿಂದ ಕನ್ಯಾಕುಮಾರಿವರೆಗೂ ಇವರ ಅವಧಿಯಲ್ಲಿ ಹ್ಯಾಕರ್ಸ್​ನ ಹಿಡಿದ ಇತಿಹಾಸವೇ ಇಲ್ಲ. ಹಿಡಿದವರನ್ನೇ ತಪ್ಪಿತಸ್ಥರು ಎಂದು ಬಿಂಬಿಸುವುದು ಶೋಭೆ ತರಲ್ಲ. ಯಾರಿಂದಲಾದರೂ ಭ್ರಷ್ಟಾಚಾರದ ಬಗ್ಗೆ ಕಲಿಯಬೇಕಾದರೆ ಕಾಂಗ್ರೆಸ್​ನಿಂದ ಕಲಿಯಬೇಕು. ಇಲ್ಲಿ ಯಾರೂ ನಟರಿಲ್ಲ. ತನಿಖೆಯ ಎಲ್ಲಾ ಅವಕಾಶಗಳನ್ನು ಪಾರದರ್ಶಕವಾಗಿ ಮಾಡುತ್ತಿದ್ದೇವೆ. ಶ್ರೀಕಿ ಬಿಟ್ ಕಾಯಿನ್ ಎಕ್ಸ್ ಚೇಂಜ್ ವೇಳೆ ಹ್ಯಾಕ್ ಮಾಡಿದ್ದೆ ಎಂದು ಹೇಳಿಕೆ ಕೊಟ್ಟಿದ್ದ. ಹಾಗಾಗಿ ಪೊಲೀಸ್ ಅಧಿಕಾರಿಗಳು ಬೇರೆ ಬೇರೆ ತಜ್ಞರ ಮುಂದೆ ತನಿಖೆ ಮಾಡಿದ್ದಾರೆ. ಒಬ್ಬ ಮಾದಕ ವ್ಯಸನಿಯ ಮಾತುಗಳಿಗೆ ಕಾಂಗ್ರೆಸ್ ನಾಯಕರು ಇಷ್ಟೆಲ್ಲಾ ಪ್ರಾಮುಖ್ಯತೆ ಕೊಡುತ್ತಿರುವುದು ಆಶ್ಚರ್ಯ ಮೂಡಿಸುತ್ತಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ:ಚುನಾವಣಾ ಸಂದರ್ಭದಲ್ಲಿ 'ಬಿಟ್​ ಕಾಯಿನ್' ಎಂದು​ ಕಾಂಗ್ರೆಸ್‌ ಜನರ ದಾರಿತಪ್ಪಿಸುತ್ತಿದೆ : ಸಿ.ಸಿ.ಪಾಟೀಲ್

ಒಬ್ಬ ಡ್ರಗ್ ಅಡಿಕ್ಟ್ ತಲೆಯಲ್ಲಿ ಬರೀ ಕ್ರೈಂ ಮಾಡೋದು ಅಷ್ಟೇ ಇರುತ್ತದೆ. ಅದನ್ನು ನಾವು ಪರಾಮರ್ಶೆ ಮಾಡಬೇಕು. ಈ ಒಂದು ವರ್ಷದ ನಂತರ ಬಿಟ್ ಫಿನಿಕ್ಸ್ ಸಂಸ್ಥೆ ಆಗಲೀ ಬೇರೆಯವರಾಗಲೀ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿಲ್ಲ. ಬಸವರಾಜ ಬೊಮ್ಮಾಯಿ‌ ತನಿಖೆಗೆ ಆದೇಶ ಮಾಡುವ ಮೂಲಕ ಅವರ ಜವಾಬ್ದಾರಿ ತೋರಿಸಿದ್ದಾರೆ. ಕಾಂಗ್ರೆಸ್ ಮಾಡದೇ ಇರುವುದನ್ನು ಬೊಮ್ಮಾಯಿ‌ ಮಾಡಿದ್ದಾರೆ. ಬೊಮ್ಮಾಯಿ‌ ಬಹಳ ಬೇಗ ಜನಪ್ರಿಯತೆ ಗಳಿಸಿದ್ದಕ್ಕೆ ನಿಮಗೆ ಹೊಟ್ಟೆ ಕಿಚ್ಚಾ?. ರಾಜಕೀಯದ ನೆಲೆಗಟ್ಟಿನಲ್ಲಿ ಹೋರಾಟ ಮಾಡಿ. ಸುಳ್ಳು ಆರೋಪಗಳಿಂದ ಚಾರಿತ್ರ್ಯ ವಧೆ ಮಾಡುವುದು ಅಪರಾಧ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಗೌರವ ತಂದು ಕೊಡಲ್ಲ‌ ಎಂದು ವಾಗ್ದಾಳಿ ನಡೆಸಿದರು.

ಬಿಟ್ ಫೀನಿಕ್ಸ್ ಕಂಪನಿ ಕರೆನ್ಸಿ ಕಳೆದುಕೊಂಡ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ:

ಬೊಮ್ಮಾಯಿ‌ ಪೊಲೀಸ್ ಅಧಿಕಾರಿಗಳ ತಂಡ ರಚಿಸಿದ್ದಾರೆ, ಪಂಚನಾಮೆ ಮಾಡಿಸಿದ್ದಾರೆ, ಐಐಎಸ್ಸಿ, ಇ-ಗವರ್ನೆನ್ಸ್ ಅಧಿಕಾರಿಗಳನ್ನು ಜೋಡಿಸಿದ್ದಾರೆ. ಗೃಹ ಸಚಿವರಾಗಿ ಬೊಮ್ಮಾಯಿ‌ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಪೊಲೀಸ್ ಇಲಾಖೆ ಪಾರದರ್ಶಕತೆಯಿಂದ ನಡೆದುಕೊಂಡಿದ್ದಾರೆ. ಎಲ್ಲಾ ರೆಕಾರ್ಡ್ ಮಾಡಿದ್ದಾರೆ. ಯಾರನ್ನೂ ರಕ್ಷಣೆ ಮಾಡುವ ಪ್ರಯತ್ನ ಇಲ್ಲ. ಬಿಟ್ ಫಿನಿಕ್ಸ್ ಕಂಪನಿಯ 5,240 ಕೋಟಿ ಕಳ್ಳತನ ಆಗಿದ್ದರೆ ಆ ದೇಶದಿಂದ ಭಾರತ ಸರ್ಕಾರಕ್ಕೆ ಕೇಳುತ್ತಿರಲಿಲ್ವಾ?. ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಅನಧಿಕೃತ ಮಾಹಿತಿ ಇಟ್ಟುಕೊಂಡು ಕಾಂಗ್ರೆಸ್ ನವರು ಕೇಳಿದರೆ ಉತ್ತರ ಕೊಡುವವರು ಯಾರು?. ಈವರೆಗೆ ಒಂದೇ ಒಂದೂ ವಿದೇಶೀ ಸಂಸ್ಥೆಗಳು ಕೂಡಾ ಕರ್ನಾಟಕ ಪೊಲೀಸ್ ನವರನ್ನು ಮಾಹಿತಿ ಕೇಳಿಲ್ಲ. ಹ್ಯಾಕಿಂಗ್, ಕಳ್ಳತನ ಬಗ್ಗೆ ಮಾಹಿತಿ ಕೇಳಿಲ್ಲ. ಬೆಂಗಳೂರಿನಿಂದ ಹ್ಯಾಕಿಂಗ್ ಆಗಿರುತ್ತಿದ್ದರೆ ಅದನ್ನಾದರೂ‌ ಕೇಳಬೇಕಿತ್ತಲ್ವಾ?. ಬಿಟ್ ಫೀನಿಕ್ಸ್ ಕಂಪನಿ ಇಲ್ಲಿಯವರೆಗೆ ಅವರ ಕರೆನ್ಸಿ ಕಳೆದು ಹೋಗಿದೆ ಎಂಬ ಪ್ರಸ್ತಾಪ ಕೂಡಾ ಮಾಡಿಲ್ಲ ಎಂದು ವಿವರಿಸಿದರು.

ಇದನ್ನೂ ಓದಿ:ಬಿಟ್ ಕಾಯಿನ್ ದಂಧೆ ಹಿಂದೆ ಕಾಂಗ್ರೆಸ್‌ನವರೇ ಇದ್ದರೂ ಬಂಧಿಸಲಿ.. ವಿಪಕ್ಷ ನಾಯಕ ಸಿದ್ದರಾಮಯ್ಯ

ಎಲ್ಲಾ ವಿಚಾರಣೆಗಳನ್ನು ವೀಡಿಯೋ ರೆಕಾರ್ಡ್ ‌ಮಾಡಿ ಕೋರ್ಟ್​ಗೆ ಕೊಡಲಾಗಿದೆ. ತನಿಖಾಧಿಕಾರಿಗಳು ಎಲ್ಲಿ ಗೈಡ್ ಲೈನ್ಸ್ ಬ್ರೇಕ್ ಮಾಡಿದ್ದಾರೆ?. ಇವರ ಸರ್ಕಾರ ಇರುವಾಗ ಬೇರೆ ರೀತಿಯ ತನಿಖೆಗೆ ಅವಕಾಶ ಇತ್ತಾ?. ಶ್ರೀಕಿ ಬಳಿ ಇದ್ದ 31.8 ಬಿಟ್ ಕಾಯಿನ್ ಅನ್ನು ಪೊಲೀಸ್ ಇಲಾಖೆಗೆ ವರ್ಗಾವಣೆ ಮಾಡಲು ಅನುಮತಿ ಪಡೆಯುತ್ತಾರೆ. ಆಗ 186.811 ಬಿಟ್ ಕಾಯಿನ್ ತೋರಿಸುತ್ತದೆ. ಆಗ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಾರೆ. ಆಗ ಶ್ರೀಕಿಯ ಎಕ್ಸ್ ಚೇಂಜ್ ಪರ್ಸನಲ್ ಅಕೌಂಟ್ ಎಂಬ ಮಾಹಿತಿ ದೊರೆಯುತ್ತದೆ. ಬಿಟ್ ಕಾಯಿನ್ ಅನ್ನು ಯಾರೂ ಆಪರೇಟ್ ಮಾಡಲು ಸಾಧ್ಯವಿಲ್ಲ. ಅಮೇರಿಕಾ ಸೇರಿ ಕೆಲವು ದೇಶಗಳು ಮಾತ್ರ ಬಿಟ್ ಕಾಯಿನ್​ಅನ್ನು ಲೀಗಲೈಸ್ ಮಾಡಿವೆ. ನಮ್ಮ ದೇಶದಲ್ಲಿ ಅವಕಾಶ ಕೊಟ್ಟಿಲ್ಲ. ಈಗ ಅಧಿಕೃತ ಅಥವಾ ಅನಧಿಕೃತ ಎಂದೂ ಹೇಳಲು ಸಾಧ್ಯವಿಲ್ಲ ಎಂದರು.

186 ಬಿಟ್ ಕಾಯಿನ್ ಟಚ್ ಮಾಡಿಲ್ಲ, ಎಲ್ಲೂ ವರ್ಗಾವಣೆ ಆಗಿಲ್ಲ. ಕಾಂಗ್ರೆಸ್ ನವರು ಚಾರ್ಜ್ ಶೀಟ್ ನಲ್ಲಿರುವ ಮಾಹಿತಿಯನ್ನೇ ಓದುತ್ತಾ ಇದ್ದಾರೆ. ತನಿಖೆ ವೇಳೆ ಶ್ರೀಕಿ ನೂರಾರು ಕಥೆ ಹೇಳಿದ್ದಾನೆ. ಇದನ್ನೆಲ್ಲಾ ತನಿಖೆ ಮಾಡಬೇಡವೇ?. ನಿಮ್ಮ 70 ವರ್ಷದಲ್ಲಿ ನೀವು ಎಷ್ಟು‌ ತನಿಖೆ ಮಾಡಿಸಿದ್ದೀರಿ?. ಬಿಜೆಪಿ ಸರ್ಕಾರ ಬಂದ ಮೇಲೆ ಕರ್ನಾಟಕಕ್ಕೆ ಹೊಸ ಪೊಲೀಸರು ಬಂದಿಲ್ಲ. ಇಂಟರ್ ಪೋಲ್​ಗೆ ನಾವು ಮಾಹಿತಿ ಕೊಟ್ಟಿದ್ದೇವೆ. ಬೆಂಗಳೂರಿನಿಂದ ಹ್ಯಾಕ್ ಆಗಿರುವ ಮಾಹಿತಿ ನಮಗೆ ಸಿಕ್ಕಿಲ್ಲ ಎಂದು ಇಂಟರ್ ಪೋಲ್ ನವರು ಕೂಡ ಮಾಹಿತಿ ಕೊಟ್ಟಿದ್ದಾರೆ. ನಾನು ಹ್ಯಾಕ್ ಮಾಡಿದ್ದೇನೆ ಅಂತಾ ಶ್ರೀಕಿ ಹೇಳಿರುವುದರಿಂದ ಸಿಬಿಐಗೆ ಕೂಡಾ ಮಾಹಿತಿ ಕೊಟ್ಟಿದ್ದೇವೆ. ಎಲ್ಲಾ ಮಾಹಿತಿಗಳು ಸಿಬಿಐ, ಇಂಟರ್ ಪೋಲ್, ಎನ್ ಐಎಗೆ ತಿಳಿದಿದೆ ಎಂದರು.

ನಮ್ಮ ನಾಯಕರು ದೆಹಲಿಗೆ ಹೋಗಬಾರದಾ?:

ಜಗದೀಶ್ ಶೆಟ್ಟರ್ ದೆಹಲಿಗೆ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ನಾಯಕರು ಯಾರೂ ದೆಹಲಿಗೆ ಹೋಗಬಾರದಾ? ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ದೆಹಲಿಗೆ ಹೋಗಬಾರದು ಅಂತೇನಿಲ್ಲ. ಶೆಟ್ಟರ್ ಅವರ ತಮ್ಮನ ಟಿಕೆಟ್ ವಿಚಾರವಾಗಿ ಹೋಗಿರಬಹುದು, ನನಗೆ ಗೊತ್ತಿಲ್ಲ. ಶೆಟ್ಟರ್ ಏನೂ ಮೊದಲ ಬಾರಿಗೆ ದೆಹಲಿಗೆ ಹೋಗಿಲ್ಲ‌ ಎಂದರು.

ಇದನ್ನೂ ಓದಿ:Bitcoin Case: ವದಂತಿಗೆ ತೆರೆ ಎಳೆಯುವ ರೀತಿ ಪೊಲೀಸರಿಂದ ಮಾಧ್ಯಮ ಪ್ರಕಟಣೆ

Last Updated : Nov 14, 2021, 1:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.