ಬೆಂಗಳೂರು: ಇನ್ನು ನೂರು ವರ್ಷನೋ ಐನೂರು ವರ್ಷದ ನಂತರ ಭಗವತ್ ಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂದು ಸಚಿವ ಕೆ. ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಧ್ವಜಸ್ತಂಬದಲ್ಲಿ ಕೇಸರಿ ಬಾವುಟ ಹಾರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಸರಿ ಶಾಲನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಹಾರಿಸ್ತೇವೆ. ಈ ಹಿಂದೆ ರಾಮಚಂದ್ರ, ಮಾರುತಿ ರಥದ ಮೇಲೆ ಕೇಸರಿ ಧ್ವಜ ಇತ್ತು. ಈಗ ರಾಷ್ಟ್ರ ಧ್ವಜ ಫಿಕ್ಸ್ ಆಗಿದೆ.
ರಾಷ್ಟ್ರ ಧ್ವಜಕ್ಕೆ ಅನ್ನ ತಿನ್ನುವ ಪ್ರತಿಯೊಬ್ಬನೂ ಗೌರವ ಕೊಡಬೇಕು. ಇವತ್ತಲ್ಲ ಯಾವತ್ತೋ ಒಂದು ದಿನ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆ ಅಂದಾಗ ನುಗುತ್ತಿದ್ದರು. ಈಗ ಕಟ್ಟುತ್ತಿದ್ದೇವಲ್ಲಾ?. ಆಗ ಎಲ್ಲಿ ಬೇಕಾದರೂ ಹಾರಬಹುದು. ಈಗ ನಾವೆಲ್ಲರೂ ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜ ಎಂದು ಒಪ್ಪಿಕೊಂಡಿದ್ದೇವೆ. ಯಾರು ಅದಕ್ಕೆ ಗೌರವ ಕೊಡಲ್ಲ. ಕೊಡದೇ ಇರುವವನು ರಾಷ್ಟ್ರ ದ್ರೋಹಿ ಆಗ್ತಾನೆ. ಇವತ್ತಲ್ಲ ನಾಳೆ ಕೆಂಪು ಕೋಟೆ ಮೇಲೆ ಹಾರಿಸ್ತೀವಿ ಎಂದರು.
ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿಲ್ಲ: ಇವತ್ತು ತ್ರಿವರ್ಣ ಧ್ವಜ ಹಾರಿಸುತ್ತಿದ್ದಾರೆ. ತ್ರಿವರ್ಣ ಧ್ವಜ ಇಳಿಸಿದ್ದಾರೆ ಅನ್ನೋ ಆರೋಪ ಸುಳ್ಳು. ರಾಷ್ಟ್ರ ಧ್ವಜ ಇಳಿಸಿ, ಕೇಸರಿ ಧ್ವಜ ಹಾರಿಸಿಲ್ಲ. ಗೋ ಹತ್ಯೆ ನಿಷೇಧ ವಿಚಾರದಲ್ಲಿ ಕಾಂಗ್ರೆಸ್ ನವರು ರಾಜಕೀಯ ಮಾಡಿದ್ರು. ಗೋಹತ್ಯೆ ಮಾಡಬಹುದು ಅಂದ್ರು, ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ್ರು. ಇಡೀ ರಾಷ್ಟ್ರದಲ್ಲಿ ಹಿಂದೂ, ಮುಸ್ಲಿಂ ಒಟ್ಟಾಗಿದ್ದೇವೆ. ಕಾಂಗ್ರೆಸ್ ಸಮವಸ್ತ್ರಕ್ಕೆ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಹಿಜಾಬ್ ವಿಚಾರದಲ್ಲಿ ಸಂಘ ಪರಿವಾರ ಕೈವಾಡ ಆರೋಪ ಮಾಡಿದ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೋ ಕುಡುಕ ಹೇಳಿದ್ದಾನೆ. ಸಿದ್ದರಾಮಯ್ಯ ಕುಡುಕ ರೂಪದಲ್ಲಿ ಹೇಳುವುದಾದರೆ ಅದನ್ನು ಒಪ್ಪಲು ಆಗುತ್ತಾ?. ಸಂಘ ದೇಶ ಕಟ್ಟೋ ಕೆಲಸ ಮಾಡುತ್ತೆ, ಒಡೆಯೋ ಕೆಲಸ ಮಾಡಲ್ಲ. ಲಿಂಗಾಯತ ಧರ್ಮ ಒಡೆದಿದ್ದು ಯಾರು?. ಹಿಂದೂ, ಮುಸ್ಲಿಂ ಅಣ್ಣ ತಮ್ಮಂದಿರ ತರ ಇದ್ದೇವೆ. ಒಡೆಯೋ ಪ್ರಯತ್ನ ಮಾಡಬೇಡಿ ಎಂದರು.
ಡಿಕೆಶಿ ಆರೋಪಕ್ಕೆ ಈಶ್ವರಪ್ಪ ತಿರುಗೇಟು: ಲೋಡ್‌ಗಟ್ಟಲೆ ಕೇಸರಿ ಶಾಲಮ್ಮ ಬಿಜೆಪಿಯವರು ಕಳಿಸಿದ್ದಾರೆ ಅನ್ನೋ ಡಿ.ಕೆ ಶಿವಕುಮಾರ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಬಂಡೆ ಒಡೆದು ಅಭ್ಯಾಸ. ನನಗೆ ಬಂಡೆ ಒಡೆದು ಅಭ್ಯಾಸ ಇಲ್ಲ. ಕೇಸರಿ ಶಾಲು ಕೊಟ್ಟರೆ ಏನು ತಪ್ಪು.? ಎಷ್ಟು ಲೋಡ್ ಕೇಸರಿ ಶಾಲು ಕಳಿಸಿದ್ದೇವೆ ಎಂಬ ಲೆಕ್ಕ ಡಿಕೆಶಿಯಲ್ಲಿ ಇರಬಹುದು. ಆದರೆ, ಕೇಸರಿ ಶಾಲು ಹಂಚಿರುವುದರಲ್ಲಿ ತಪ್ಪೇನಿಲ್ಲ.
ಭಾರತದಲ್ಲಿ ಕೇಸರಿ ಧ್ವಜ ಸ್ವತಂತ್ರ ಪೂರ್ವದಲ್ಲಿ ಸಾವಿರಾರು ಜನರಿಗೆ ಸ್ಪೂರ್ತಿ ಕೊಟ್ಟಿತ್ತು. ಅದು ಧರ್ಮದ ಸಂಕೇತ. ಕೇಸರಿ ಅಂದ ತಕ್ಷಣ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ತಳಮಳ ಆಗಿದೆ. ಸಿದ್ದರಾಮಯ್ಯ ಕೇಸರಿ ಪೇಟಾ ಹಾಕಲು ಹೋದಾಗ ಅದನ್ನು ಕಿತ್ತು ಬಿಸಾಕಿದ್ದರು. ಅವರಿಗೆ ಟಿಪ್ಪು ಸುಲ್ತಾನ್ ಪೇಟವೇ ಬೇಕು. ಡಿಕೆಶಿಗೂ ಟಿಪ್ಪು ಪೇಟವೇ ಬೇಕು. ಕೇಸರಿ ಹಾಕಲು ಹೋದ್ರೆ ತಪ್ಪೇನು? ಎಂದು ಪ್ರಶ್ನಿಸಿದರು.
ಕ್ರಿಶ್ಚಿಯನ್ ಎಷ್ಟು ಶಾಲೆಗಳಲ್ಲಿ ಯೂನಿಫಾರಮ್ ಬಿಟ್ಟು ಹಿಜಾಬ್ ಹಾಕಿ ಹೋಗಲು ಅವಕಾಶ ಇದೆಯಾ?. ಹಿಜಾಬ್ ಹಾಕಲು ಅವಕಾಶ ಇದೆಯಾ?. ಒಂದೇ ಒಂದು ಕ್ರಿಶ್ಚಿಯನ್ ಶಾಲೆಯಲ್ಲಿ ಎಷ್ಟು ಜನ ಹೋಗಲು ಅವಕಾಶ ಇದೆ ಹೇಳಿ. ಡಿ.ಕೆ ಶಿವಕುಮಾರ್ ಈ ಬಗ್ಗೆ ಹೇಳಲಿ. ಕೇಸರಿ ಶಾಲು ಹಂಚಲು ನನಗೆ ಸ್ವಾತಂತ್ರ್ಯ ಇದೆ. ಇದಕ್ಕೆ ಡಿಕೆಶಿ ಅವರ ಅನುಮತಿ ಬೇಡ.
ನಾನು ಸ್ವತಂತ್ರ ಭಾರತದಲ್ಲಿ ಇದ್ದೇನೆ. ನನಗಿರೋ ಸ್ವಾತಂತ್ರ್ಯ ಪ್ರಶ್ನೆ ಮಾಡಲು ಅವರು ಯಾರು?. ನಾನು ಹಂಚಿದ್ದೇನೆ ಎಂದು ಹೇಳಲು ಹೋಗುವುದಿಲ್ಲ. ನನಗಿರುವ ಸ್ವಾತಂತ್ರ್ಯವನ್ನು ಪ್ರಶ್ನಿಸಲು ಅವರು ಯಾರು?. ನಾನು ಹಂಚಿಲ್ಲ, ಹಂಚಿದ್ರೂ ಏನ್ ತಪ್ಪೀಗ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಎಲ್ಲ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸುವ ಸ್ವಾತಂತ್ರ್ಯ ಇದೆ. ಶಾಲೆಯಲ್ಲಿ ಮಾತ್ರ ಶಿಸ್ತು ಪಾಲನೆ ಮಾಡಿ. ಮುಸ್ಲಿಂ ಶಾಸಕಿ ಖನಿಝಾ ಪಾತಿಮಾ ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಬಂದರೆ ಬಂಧನ ಮಾಡುತ್ತೀವಾ?. ಎಂದು ಪ್ರಶ್ನಿಸಿದರು.
ನಿಮಗೆ ಹೇಗೆ ವಿಧಾನಸೌಧಕ್ಕೆ ಹಿಜಾಬ್ ಹಾಕಲು ಅವಕಾಶ ಇದೆಯೋ ಹಾಗೆಯೇ ನಮಗೂ ಕೇಸರಿ ಶಾಲು ಹಾಕಲು ಸ್ವಾತಂತ್ರ್ಯ ಇದೆ. ಹಿಂದೂ ಅಥವಾ ಮುಸ್ಲಿಮರೇ ಇರಲಿ ಶಾಲೆಯೊಳಗೆ ಸಮವಸ್ತ್ರ ಹಾಕಿಯೇ ಹೋಗಬೇಕು. ಕೇಸರಿ ಶಾಲು ಹಂಚೋದು ಕೇವಲ ಬಿಜೆಪಿಯವರು ಮಾತ್ರಾನಾ?. ನೇರವಾಗಿ ಕೇಳ್ತೀನಿ, ಇವರ್ಯಾರು ಕೇಳೋರು. ಶಾಲೆಗೆ ಹೋಗುವ ಸಂದರ್ಭದಲ್ಲಿ ಯೂನಿಫಾರಮ್ ಇರಬೇಕು ಎಂದು ತಿಳಿಸಿದರು.
ಓದಿ: ನಮ್ಮ ಸ್ವಾರ್ಥಕ್ಕಾದರೂ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗಬೇಕಿದೆ: ಮಹೇಶ್ ಕುಮಟಳ್ಳಿ