ETV Bharat / state

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ: ಗೋಪಾಲಯ್ಯ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಅನೇಕ ಸಂದರ್ಭಗಳಲ್ಲಿ ಹೆಸರುಗಳು ಬದಲಾದ ವಿಚಾರ ನಿಮಗೂ ಗೊತ್ತಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

Excise Minister Gopalya
ಅಬಕಾರಿ ಸಚಿವ ಗೋಪಾಲಯ್ಯ
author img

By

Published : Aug 16, 2021, 3:19 PM IST

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಿಸಬೇಕು ಎನ್ನುವ ಪ್ರಸ್ತಾಪಗಳು ಬರುತ್ತಿವೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಅನೇಕ ಸಂದರ್ಭಗಳಲ್ಲಿ ಹೆಸರುಗಳು ಬದಲಾದ ವಿಚಾರ ನಿಮಗೂ ಗೊತ್ತಿದೆ. ಅನ್ನಪೂರ್ಣೇಶ್ವರಿ ಹೆಸರು ಇಡುವುದರಲ್ಲಿ ತಪ್ಪೇನಿಲ್ಲ. ಅನ್ನ ಕೊಡುವ ತಾಯಿ ಅನ್ನಪೂರ್ಣೇಶ್ವರಿ. ಹೆಸರು ಬದಲಾವಣೆ ಕುರಿತು ಬಿಜೆಪಿ ನಾಯಕರು ಪ್ರಸ್ತಾಪ ಮಾಡುತ್ತಿದ್ದಾರೆ. ಹೆಸರು ಬದಲಾವಣೆ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.

ಬಿಜೆಪಿಯಲ್ಲೇ ಇದ್ದು ಮತ್ತೆ ಗೆಲ್ಲುತ್ತೇವೆ

ಆನಂದ್ ಸಿಂಗ್ ಖಾತೆ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಗೋಪಾಲಯ್ಯ, ನನಗೆ ಯಾವುದೇ ಖಾತೆ ನೀಡಿದರೂ ನಿರ್ವಹಿಸುತ್ತೇನೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಇದು ರಾಷ್ಟ್ರೀಯ ಪಕ್ಷ. ಏನೇ ಸಮಸ್ಯೆ ಇದ್ದರೂ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ ಅಂತ ನಮ್ಮ ಸ್ನೇಹಿತರಿಗೆ ಹೇಳುತ್ತೇನೆ.

ಬೊಮ್ಮಾಯಿ ಸರ್ಕಾರ ಪೂರ್ಣ ಅವಧಿ ಪೂರೈಸುತ್ತೇವೆ. ರಮೇಶ್ ಜಾರಕಿಹೊಳಿ ಅವರ ಜೊತೆ ಬಿಜೆಪಿ ಚಿನ್ಹೆ ಮೇಲೆ ಗೆದ್ದಿದ್ದೇನೆ. ಮಾತಿನಂತೆ ಬಿಜೆಪಿ ಕೂಡ ನಡೆದುಕೊಂಡಿದೆ. ಮುಂದೆಯೂ ಬಿಜೆಪಿ ಜೊತೆಯಲ್ಲೇ ಇದ್ದು, ಅತಿ ಹೆಚ್ಚು ಬಹುಮತ ಪಡೆದು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಡಿಯೋ ತನಿಖೆ: ಇಲಾಖೆಯಿಂದ ಸಚಿವರಿಗೆ ಹಫ್ತ ಕೊಡುವ ಆರೋಪದ ಆಡಿಯೋ ವಿಚಾರ ಕುರಿತು ಅಬಕಾರಿ ಆಯುಕ್ತರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇವೆ. ಶೀಘ್ರವೇ ವರದಿ ಬರಲಿದೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು‌.

ಡಿಕೆಶಿ ಭೇಟಿ ಮಾಡಿಲ್ಲ: ಡಿಕೆಶಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ತಾಯಿ ಮರಣದ ಬಳಿಕ ಡಿಕೆ ಶಿವಕುಮಾರ್ ನಮ್ಮ ಮನೆಗೆ ಬಂದಿದ್ದರು. ಈ ವೇಳೆ ಅವರನ್ನು ನಮ್ಮನೆಯಲ್ಲಿ ಭೇಟಿ ಮಾಡಿರೋದು ಮಾತ್ರ, ಇದನ್ನು ಬಿಟ್ಟರೆ ನಾನು ಎಂದೂ, ಎಲ್ಲೂ ಕೂಡ ಅವರನ್ನು ಭೇಟಿ ಮಾಡಿಲ್ಲ. ನಮ್ಮ ಮತ್ತು ಪಕ್ಷದ ನಡುವೆ ಮನಸ್ತಾಪ ತರುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು.

ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದ ಗೋಪಾಲಯ್ಯ

ಕಾರ್ಯಕರ್ತರ ಅಹವಾಲು ಸ್ವೀಕರಿಸಲು ಬಿಜೆಪಿ ಕಚೇರಿಗೆ ಸಚಿವ ಗೋಪಾಲಯ್ಯ ಭೇಟಿ ನೀಡಿದರು. ಈ ವೇಳೆ, ಹಳ್ಳಿ ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬ್ಲಾಕ್​ನಲ್ಲಿ ಎಣ್ಣೆ ಮಾರಾಟ ಮಾಡುವ ಬಗ್ಗೆ ಕ್ರಮಗೈಗೊಳ್ಳುವಂತೆ ಕಾರ್ಯಕರ್ತರು ಸಚಿವರಿಗೆ ಮನವಿ ಮಾಡಿದರು.

ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದಿಂದ ಮಕ್ಕಳು ಮತ್ತು ಹೆಂಗಸರು ಮದ್ಯ ಕುಡಿಯುವುದನ್ನ ಕಲಿಯುತ್ತಿದ್ದಾರೆ. ಅವರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸಚಿವರಿಗೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಜಿಲ್ಲೆಗಳಿಗೆ ಭೇಟಿ ನೀಡಿದಾಗ ಬಿಜೆಪಿ ಕಾರ್ಯಾಲಯಕ್ಕೆ ತೆರಳಿ ಕಾರ್ಯಕರ್ತರ ಅಹವಾಲು ಸ್ವೀಕಾರ ಮಾಡುವುದು, ಸಂಘದ ಹಾಗೂ ಸಂಘ ಪರಿವಾರದವರ ಮನೆಗೆ ತೆರಳಿ ಭೇಟಿ ಮಾಡಲು ಪಕ್ಷ ನಮಗೆ ಸೂಚಿಸಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ರಾಜ್ಯ ಅಧ್ಯಕ್ಷರ ಸೂಚನೆಯಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದರು.

ಅಗತ್ಯ ಸೂಚನೆ ನೀಡುತ್ತೇವೆ: ಪ್ರತಿ ಗುರುವಾರ ವಿಧಾನಸೌಧದಲ್ಲಿ ಅಹವಾಲು ಸ್ವೀಕಾರ ಮಾಡುವ ಕೆಲಸವನ್ನು ಯಡಿಯೂರಪ್ಪ ಅವರ ಕಾಲದಿಂದಲೂ ಮಾಡುತ್ತಿದ್ದೇವೆ. ಜಗನ್ನಾಥ ಭವನದಲ್ಲಿ ಕೂಡ ಸಮಸ್ಯೆ ಆಲಿಸಿ ಸ್ಪಂದಿಸುವುದು ಹಾಗೂ ಸಾರ್ವಜನಿಕರ ಮತ್ತು ಕಾರ್ಯಕರ್ತರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದೇವೆ. ಸಮಸ್ಯೆ ಆಲಿಸಿ ಆಯಾ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುತ್ತೇವೆ ಎಂದರು‌.

ಓದಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ನಜ್ಜುಗುಜ್ಜಾದ ಓಮಿನಿ ವಾಹನ: ನಾಲ್ವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.