ETV Bharat / state

ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಸಚಿವ ಗೋಪಾಲಯ್ಯ.. - ಕೊರೊನಾ ಜಾಗೃತಿ ಸುದ್ದಿ

ಆಹಾರ ಇಲಾಖೆ ಸಚಿವ ಕೆ. ಗೋಪಲಯ್ಯ ಅವರು ಕೊರೊನಾ ಹರಡದಂತೆ ತಡೆಯಲು ಎಚ್ಚರಿಕೆ ವಹಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದರು.

minister gopalayya
ಸಚಿವ ಗೋಪಾಲಯ್ಯ
author img

By

Published : Mar 28, 2020, 5:58 PM IST

ಬೆಂಗಳೂರು : ತಮ್ಮ ಮಹಾಲಕ್ಷ್ಮಿಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ. ಗೋಪಲಯ್ಯ ಕೊರೊನಾ ವೈರಸ್‌ ಬಗೆಗೆ ಎಚ್ಚರಿಕೆವಹಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಅಷ್ಟೇ ಅಲ್ಲ, ಕ್ರಿಮಿನಾಶಕಗಳನ್ನು ಖುದ್ದಾಗಿ ಅಧಿಕಾರಿಗಳ ಜೊತೆ ಸಿಂಪಡಿಸಿದ್ರು. ಹೊರಗೆ ಬಾರದಂತೆ ಪ್ರತಿ ವಾರ್ಡ್‌ನ ಜನರಿಗೆ ಜಾಗೃತಿ ಮೂಡಿಸಲು ಆಟೋಗಳಿಗೆ ಚಾಲನೆ ನೀಡಿದರು. ತರಕಾರಿ ಮಂಡಿಗೆ ಭೇಟಿ ನೀಡಿದ ಅವರು, ವ್ಯಾಪಾರಿಗಳು ಬೆಲೆ ಹೆಚ್ಚು ಮಾಡಿ ವ್ಯಾಪಾರ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ತರಕಾರಿಗಳನ್ನು ಹೋಲ್‌ಸೇಲ್‌ ರೇಟ್‌ನಲ್ಲಿ ಮಾರಾಟ ಮಾಡಿ, ಜನಸ್ನೇಹಿ ಬೆಲೆ ನಿಗದಿ ಮಾಡಿ ಎಂದು ಮನವಿ ಮಾಡಿದರು.

ತರಕಾರಿ ವ್ಯಾಪಾರಕ್ಕೆ ಕಮಲಮ್ಮನ ಗುಂಡಿ ಮೈದಾನ, ಶಂಕರಮಠ ಮೈದಾನ, ನಂದಿನಿಲೇಔಟ್ ಮೈದಾನ ಬಳಸಿಕೊಳ್ಳಿ. ಗುಂಪು ಗುಂಪಾಗಿ ಜನ ಸೇರುವುದು ಕಡಿಮೆ ಮಾಡಿ. ಹೆಚ್ಚಾಗಿ ಜನ ಸೇರಿದರೆ ಅತಿ ವೇಗವಾಗಿ ಕೊರೊನಾ ಹರಡುವ ಸಾಧ್ಯತೆ ಇದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.