ETV Bharat / state

ರಾಜ್ಯದಲ್ಲಿ ಕೊರೊನಾ ವೈರಸ್​​ ಭಯ: ಕೈ ಕುಲುಕುವುದಕ್ಕೂ ಭಯ ಎಂದ ಕೃಷಿ ಸಚಿವ

author img

By

Published : Mar 4, 2020, 2:38 PM IST

ಕೊರೊನಾ ವೈರಸ್ ಹರಡದಂತೆ ಇಂದಿನಿಂದ ರಾಜ್ಯದ ಎಲ್ಲ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನ ತಪಾಸಣೆಗೆ ಒಳಪಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

Minister for Agriculture fear for shaking hands
ಡಾ. ಸುಧಾಕರ್

ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಇಂದಿನಿಂದ ರಾಜ್ಯದ ಎಲ್ಲ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ವಿದೇಶಗಳಿಂದ ಬರುವವರನ್ನ ತಪಾಸಣೆಗೆ ಒಳಪಡಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ವಿಧಾನಪರಿಷ್ ಕಲಾಪದಲ್ಲಿ ಕೊರೊನಾ ಬಗ್ಗೆ ಪ್ರತಿಪಕ್ಷ ನಾಯಕ‌ ಎಸ್.ಆರ್.ಪಾಟೀಲ್ ಪ್ರಸ್ತಾಪ‌ ಮಾಡಿದರು. ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಗಮನಿಸಿದ್ದೇವೆ ನಮ್ಮ ದೇಶಕ್ಕೂ ಕಾಲಿಟ್ಟಿದ್ದು, ಬೆಂಗಳೂರಿಗೆ ಬಂದು ಹೋದ ಹೈದರಾಬಾದ್ ಟೆಕ್ಕಿಗೆ ಕೊರೊನಾ ಶಂಕೆ ಪ್ರಕರಣ ನಮ್ಮನ್ನೆಲ್ಲ ಆತಂಕಕ್ಕೆ ಸಿಲುಕಿಸಿದೆ. ಈ ಮಹಾಮಾರಿ ತಡೆಗೆ ಯಾವ ರೀತಿಯಲ್ಲಿ ಸರ್ಕಾರ ಸಜ್ಜಾಗಿದೆ ಎಂದು ಪ್ರಶ್ನಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್

ನಂತರ ಜೆಡಿಎಸ್ ಸದಸ್ಯ ಶರವಣ ಮಾತನಾಡಿ, ನಾನು ನಿನ್ನೆ ಸರ್ಕಾರದ ಗಮನ ಸೆಳೆಯಲು ಮಾಸ್ಕ್ ಹಾಕಿಕೊಂಡು ಬಂದಿದ್ದೆ. ಅದನ್ನು ನೋಡಿ ಅನೇಕರು ನಿಮಗೇನಾದ್ರೂ ಕೊರೊನಾ ಬಂದಿದೆಯಾ ಎಂದು ಹಾಸ್ಯ ಮಾಡಿದ್ರು. ನಿನ್ನೆ ನನಗೆ ಈ ವಿಚಾರ ಮಾತನಾಡಲು ಅವಕಾಶ ಸಿಗಲಿಲ್ಲ. ಕೆಲವು ಸಾಮಾಜಿಕ ಜಾಲತಾಣಗಳಲ್ಲೂ ಕೊರೊನಾ ಬಗ್ಗೆ ನೆಗೆಟಿವ್ ಅಂಶಗಳು ಪ್ರಚಾರ ಆಗ್ತಿವೆ. ಇಂತಹವುಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ. ರಾಜ್ಯದ ಜನರಿಗೆ ಕೊರೊನಾ ಬಗ್ಗೆ ಇರುವ ಭಯ ಹೋಗಿಸಬೇಕು. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಳ್ಳಬೇಕು ಜೊತೆಗೆ ಬಸ್ ಆಟೋಗಳ ಹಿಂದೆ ಜಾಹೀರಾತು ಹಾಕಬೇಕು. ಸಚಿವರು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ಪರಾಮರ್ಶೆ ಮಾಡಬೇಕು ಎಂದು ಹೇಳಿದರು.

ಕೈ ಕುಲುಕಲು ಭಯವಂತೆ ಬಿ.ಸಿ ಪಾಟೀಲ್​​ಗೆ:

ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ನಾನು ಮಂತ್ರಿ ಆದ ಮೇಲೆ ನನ್ನ ಕ್ಷೇತ್ರಕ್ಕೆ ಹೋದೆ. ಜನರು ನನ್ನ ಕೈಕುಲುಕಿ ಅಭಿನಂದನೆ ಹೇಳಲು ಬಂದಿದ್ದರು. ಆದರೆ, ನನಗೆ ಕೈಕುಲುಕಲು ಭಯ, ಸುಮ್ಮನೆ ನಮಸ್ಕಾರ ಮಾಡುತ್ತಿದ್ದೆ. ಆದರೆ, ಮಂತ್ರಿ ಆದ ಮೇಲೆ ಇವನಿಗೆ ಸೊಕ್ಕು ಬಂದಿದೆ ಎಂದು ಜನ ತಿಳಿದುಕೊಳ್ತಿದ್ರು. ಆಮೇಲೆ ಅವರಿಗೆ ಕೊರೊನಾ ಕಾಯಿಲೆ ಭಯದಿಂದ ಹಾಗೆ‌ ಮಾಡಿದೆ ಎಂದು ತಿಳಿ ಹೇಳಿದೆ ಎಂದರು. ಸಚಿವರ ಈ ಹೇಳಿಕೆಗೆ ಸದನ ನಗೆಗಡಲಲ್ಲಿ ತೇಲಿತು. ಈ ವೇಳೆ, ಒಟ್ಟಿನಲ್ಲಿ ಜನಕ್ಕೆ ಕೈ ಕೊಡ್ಲಿಲ್ಲ ಅಲ್ವಾ ನೀವು, ನಮಗೆ ಕೈ ಕೊಟ್ಟ ಹಾಗೆ ಜನಕ್ಕೆ ಕೈ ಕೊಡಬೇಡಿ ಎಂದು ಕಾಂಗ್ರೆಸ್​​ನ ನಾರಾಯಣ ಸ್ವಾಮಿ ಬಿ.ಸಿ ಪಾಟೀಲ್ ಕಾಲೆಳೆದರು. ಅದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಸಚಿವರು, ನಾನು ಕೈ ಕೊಡ್ಲಿಲ್ಲ, ನೀವು ಕೈ ಬಿಟ್ಟಿದ್ದಕ್ಕೆ ರಾಜೀನಾಮೆ ಕೊಟ್ಟು ಜನಾಶೀರ್ವಾದ ಪಡೆದು ಮತ್ತೆ ಬಂದಿದೇನೆ ಎಂದರು.

ಕೊರೋನಾ ಬಗ್ಗೆ ಸದಸ್ಯರ ಮಾತಿನ ನಂತರ ಉತ್ತರ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕೊರೊನಾ ಚೀನಾದಲ್ಲಿ ಕಂಡುಬಂದ ವೈರಸ್, 76 ದೇಶಗಳಲ್ಲಿ ಈ ವೈರಸ್ ಹರಡಿದೆ ಭಾರತದಲ್ಲಿ 5 , ಕೇರಳದಲ್ಲಿ 3, ದೆಹಲಿ, ತೆಲಂಗಾಣದಲ್ಲಿ 1 ಪ್ರಕರ ಖಾತರಿ ಆಗಿದೆ ಯಾವುದೇ ಸಾವು ಸಂಭವಿಸಿಲ್ಲ. ಆದರೆ, ರಾಜ್ಯದಲ್ಲಿ ಯಾವುದೇ ಪ್ರಕರಣ ಖಾತರಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.