ETV Bharat / state

ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆ: ಸದಾನಂದ ಗೌಡ - ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ

ಸಾಮಾನ್ಯ ಜನ ತಮ್ಮ ಆದಾಯದಲ್ಲಿ ಶೇಕಡಾ 15 ರಿಂದ 30 ರಷ್ಟು ಹಣವನ್ನು ಅನಾರೋಗ್ಯದ ಔಷಧೋಪಚಾರಕ್ಕಾಗಿಯೇ ವ್ಯಯಿಸುತ್ತಾರೆ ಮತ್ತು ಇದೇ ಕಾರಣಕ್ಕಾಗಿ ಪ್ರತಿವರ್ಷ ಒಂದು ಕೋಟಿಗೂ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗೆ ಹೋಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಸಮೀಕ್ಷೆಯಿಂದ ಹೊರಬಿದ್ದಿತ್ತು.

minister dv sadanada gowda talk
ಸದಾನಂದ ಗೌಡ
author img

By

Published : Feb 18, 2021, 8:18 PM IST

ಬೆಂಗಳೂರು: ಶ್ರೀಸಾಮಾನ್ಯರ ಅನುಕೂಲಕ್ಕಾಗಿ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧಿ ಕೇಂದ್ರವನ್ನು ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

minister dv sadanada gowda talk
ಸದಾನಂದ ಗೌಡ

ಓದಿ: ಕಾರವಾರದಲ್ಲಿ ಇತಿಹಾಸದ ಪುಟ ಸೇರಿದ ಲಂಡನ್ ಬ್ರಿಡ್ಜ್

ನಾಗರಬಾವಿಯಲ್ಲಿ ಇಂದು ಜನೌಷಧಿ ಕೇಂದ್ರವೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳಿಗೆ ವಿಶೇಷವಾಗಿ ಬಡವರಿಗೆ ಜನೌಷಧಿಯನ್ನೇ ಬರೆದುಕೊಡಬೇಕು ಎಂದು ಕರೆ ನೀಡಿದರು.

ಕೈಗೆಟುಕುವ ದರದಲ್ಲಿ ಬಡವರಿಗೆ ಗುಣಮಟ್ಟದ ಔಷಧಗಳನ್ನು ಪೂರೈಸಬೇಕು ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಾಗಿದೆ. ಅವರು ಅಧಿಕಾರಕ್ಕೆ ಬಂದ ತಕ್ಷಣ ಜನಸಾಮಾನ್ಯರು ತಮ್ಮ ಆದಾಯದಲ್ಲಿ ಯಾವ ಯಾವ ಉದ್ದೇಶಕ್ಕಾಗಿ ಎಷ್ಟೆಷ್ಟು ವೆಚ್ಚ ಮಾಡುತ್ತಾರೆ ಎಂಬುದನ್ನು ತಿಳಿಯಲು ಅಂಕಿ-ಸಂಖ್ಯೆ ಇಲಾಖೆ ಮೂಲಕ ಒಂದು ಸಮೀಕ್ಷೆಯನ್ನು ನಡೆಸಲಾಗಿತ್ತು.

ಸಾಮಾನ್ಯ ಜನ ತಮ್ಮ ಆದಾಯದಲ್ಲಿ ಶೇಕಡಾ 15 ರಿಂದ 30 ರಷ್ಟು ಹಣವನ್ನು ಅನಾರೋಗ್ಯದ ಔಷಧೋಪಚಾರಕ್ಕಾಗಿಯೇ ವ್ಯಯಿಸುತ್ತಾರೆ. ಮತ್ತು ಇದೇ ಕಾರಣಕ್ಕಾಗಿ ಪ್ರತಿವರ್ಷ ಒಂದು ಕೋಟಿಗೂ ಹೆಚ್ಚು ಜನ ಬಡತನದ ರೇಖೆಗಿಂತ ಕೆಳಗೆ ಹೋಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಈ ಸಮೀಕ್ಷೆಯಿಂದ ಹೊರಬಿದ್ದಿತ್ತು. ಹಾಗಾಗಿ ಬಡವರಿಗೆ ಆದಷ್ಟು ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳು ಸಿಗುವಂತೆ ಮಾಡಲು ಕೇಂದ್ರವು ಈ ಯೋಜನೆಗೆ ಹೊಸ ಆಯಾಮ ನೀಡಿತು ಎಂದು ಸದಾನಂದಗೌಡ ವಿವರಿಸಿದರು.

ಜನೌಷಧಿಯೂ ಬ್ರಾಂಡೆಡ್ ಔಷಧಗಳಷ್ಟೇ ಗುಣಮಟ್ಟದ್ದು, ಆದರೆ ದರ ತುಂಬಾನೇ ಕಡಿಮೆ. ಉದಾಹರಣೆಗೆ ಮಧುಮೇಹ, ಬಿಪಿ ಮುಂತಾದ ಕಾಯಿಲೆ ಇರುವವರು ಸಾಮಾನ್ಯ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸಬೇಕೆಂದರೆ ತಿಂಗಳಿಗೆ 2500 ರೂಪಾಯಿಯಿಂದ 3000 ರೂಪಾಯಿವರೆಗೆ ವೆಚ್ಚ ಮಾಡಬೇಕಾಗುತ್ತದೆ.

minister dv sadanada gowda talk
ಸದಾನಂದ ಗೌಡ

ಆದರೆ ನಮ್ಮ ಜನೌಷಧ ಅಂಗಡಿಗಳಲ್ಲಿ ಅದೇ ಔಷಧಗಳು 250 ರೂಪಾಯಿಯಿಂದ 300 ರೂಪಾಯಿಯೊಳಗೆ ಸಿಗುತ್ತವೆ. ದರ ಕಡಿಮೆ ಇದೆ ಅಂದಾಕ್ಷಣ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಔಷಧ ಕಂಪನಿಗಳಿಂದ ಅವನ್ನು ಖರೀದಿಸುವಾಗ ಎಲ್ಲ ರೀತಿಯ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಗಾಗಿ ಜನರು ಜನೌಷಧಿಯ ಉಪಯೋಗ ಪಡೆದುಕೊಳ್ಳಬೇಕು. ವೈದ್ಯರೂ ಆದಷ್ಟು ಜನೌಷಧಿಯನ್ನೇ ಶಿಪಾರಸು ಮಾಡಿ ಔಷಧ ಚೀಟಿ ಬರೆದುಕೊಡಬೇಕು ಎಂದು ವಿನಂತಿಸುತ್ತೇನೆ ಎಂದು ಅವರು ಹೇಳಿದರು.

ಮಾರ್ಚ್ 01 ರಿಂದ ಜನೌಷಧಿ ಸಪ್ತಾಹ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಜನೌಷಧಿ ಮಾರಾಟಗಾರರು ಹಾಗೂ ಜನೌಷಧಿ ಫಲಾನುಭವಿಗಳ ಜೊತೆ ನೇರ ಸಂವಾದ ನಡೆಸಲಿದ್ದಾರೆ ಎಂದು ಸಚಿವರು ತಿಳಿಸಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಜನೌಷಧಿ ಮಾರಾಟಗಾರರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಎಲ್ಲ ಶ್ಲಾಘನೆಗೆ ಅರ್ಹರು ಎಂದು ಸದಾನಂದ ಗೌಡ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.