ETV Bharat / state

ಸರ್ಕಾರಿ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳದೇ ಸಮರ್ಪಕವಾಗಿ ಬಳಸಿಕೊಳ್ಳಿ: ಸಚಿವ ಬೈರತಿ ಮನವಿ!

author img

By

Published : Jul 8, 2020, 3:31 AM IST

ಸರ್ಕಾರ ಕೊರೊನಾ ವಿರುದ್ಧ ಹೋರಾಡಲು ಅಗತ್ಯ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ವದಂತಿಗಳಿಗೆ ಕಿವಿ ಹಾಕದೇ ಧೈರ್ಯವಾಗಿರುವಂತೆ ಸಚಿವರು ಮನವಿ ಮಾಡಿದರು.

minister byrathi basavaraj
minister byrathi basavaraj

ಕೆಆರ್​​ ಪುರ: ಸರ್ಕಾರಿ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳದೇ ಸಮರ್ಪಕವಾಗಿ ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್​ ಕರೆ ನೀಡಿದರು.

ಕೆಆರ್ ಪುರ ವಿಧಾನಸಭಾ ಕ್ಷೇತ್ರದ ವಿಜಿನಾಪುರ ವಾರ್ಡ್​​ನ ಫಲಾನುಭವಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹಾಗೂ ಬಿಬಿಎಂಪಿ ಸದಸ್ಯ ಬಂಡೆ ರಾಜು ಸವಲತ್ತು ವಿತರಿಸಿ ಮಾತನಾಡಿದರು. ಬಿಬಿಎಂಪಿ ವತಿಯಿಂದ ಬಡವರಿಗೆ ಸೈಕಲ್, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ತ್ರಿಚಕ್ರ ವಾಹನ, ಒಂಟಿ ಮನೆ ನಿರ್ಮಾಣಕ್ಕೆ ಆದೇಶ ಪತ್ರ ವಿತರಿಸಿದ ಅವರು, ವಿಜಿನಾಪುರ ವಾರ್ಡ್​​ನಲ್ಲಿ ಈಗಾಗಲೇ ಪಾಲಿಕೆ ಸದಸ್ಯ ಬಂಡೆರಾಜು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ, ರಸ್ತೆ, ಚರಂಡಿ, ಪಾರ್ಕ್ ಸೇರಿದಂತೆ ವಾರ್ಡ್​​ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.

ಸಚಿವ ಬೈರತಿ ಮನವಿ

ಲಾಕ್​​ ಡೌನ್​ ಸಂದರ್ಭದಲ್ಲಿ ಜನರ ಸಹಕಾರದಿಂದ ಕೊರೊನಾ ಪ್ರಕರಣ ಹತೋಟಿಯಲ್ಲಿದ್ದವು . ಸಡಿಲಿಕೆ ನಂತರ ಹೊರ ರಾಜ್ಯಗಳಿಂದ ಬಂದ ವಲಸಿಗರಿಂದ ಸೋಂಕು ಸ್ಫೋಟವಾಗಿದ್ದು , ಸಾರ್ವಜನಿಕರು ಯಾವುದೇ ರೀತಿಯಲ್ಲೂ ಆತಂಕಪಡುವ ಅವಶ್ಯಕತೆ ಇಲ್ಲ.

ಸರ್ಕಾರ ಕೊರೊನಾ ವಿರುದ್ಧ ಹೋರಾಡಲು ಅಗತ್ಯ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿರುವಂತೆ ಮನವಿ ಮಾಡಿದರು.

ಪಾಲಿಕೆಯ ಸದಸ್ಯ ಬಂಡೆ ರಾಜು ಮಾತನಾಡಿ ವಿಜಿನಾಪುರ ವಾರ್ಡ್‌ನಲ್ಲಿ ಫಲಾನುಭವಿಗಳಿಗೆ ಬಿಬಿಎಂಪಿ ವತಿಯಿಂದ ಲ್ಯಾಪ್‌ಟಾಪ್ , ಹೊಲಿಗೆ ಯಂತ್ರ , ದ್ವಿಚಕ್ರ ವಾಹನ , ಸೈಕಲ್ ಹಾಗೂ ಒಂಟೆ ಮನೆ ನಿರ್ಮಿಸಲು ಕಾರ್ಯಾದೇಶ ಪತ್ರ ವಿತರಿಸಲಾಗಿದೆ. ಸಚಿವ ಬಸವರಾಜ ನೇತೃತ್ವದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕ, ಉದ್ಯಾನವನ, ರಸ್ತೆ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ . ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನ ಈ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.