ಬೆಂಗಳೂರು: ಕೆ.ಆರ್. ಪುರ ಕ್ಷೇತ್ರದ ಬಸವನಪುರ ವಾರ್ಡ್ನಲ್ಲಿ ಹನ್ನೆರಡು ಕೋಟಿ ವೆಚ್ಚದ ಕಾಮಗಾರಿಗಳಿಗೆ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪೂಜೆ ನೆರವೇರಿಸಿದರು. ನಂತರ ಹೊರ ಮಾವು ವಾರ್ಡ್ನ ಕುಡಿಯುವ ನೀರಿನ ಘಟವನ್ನು ಉದ್ಘಾಟನೆ ಮಾಡಿದರು.
ಇದೇ ವೇಳೆ 50 ಫಲಾನುಭವಿಗಳಿಗೆ ಒಂಟಿ ಮನೆ ನಿರ್ಮಿಸಲು, ಸುಮಾರು ಆರು ಲಕ್ಷ ರೂಪಾಯಿ ಹಾಗೂ ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲಾ ವಾರ್ಡ್ಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿಲಾಗಿದ್ದು, ಬಸವನಪುರ ವಾರ್ಡ್ನಲ್ಲಿ ಹನ್ನೆರಡು ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, ಚರಂಡಿ, ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ದಿನದಿಂದ ದಿನೇ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ತಡೆಗಟ್ಟಲು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೈಗೊಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಕೊರೊನಾ ನಿಯಂತ್ರಣ ಮಾಡಲಾಗುವುದು ಎಂದರು. ಹಾಗೂ ಲಾಕ್ಡೌನ್ ವಿಚಾರದಲ್ಲಿ ಸಿಎಂ ಬಿಎಸ್ವೈ ಅವರ ನಿರ್ಧಾರವೇ ನನ್ನ ನಿರ್ಧಾರ ಮತ್ತು ನಮ್ಮ ಸಚಿವ ಸಂಪುಟದ ನಿರ್ಧಾರ ಎಂದರು.