ಬೆಂಗಳೂರು: ರೈತರು ಸುಮ್ಮನೆ ಪ್ರತಿಭಟನೆ ಮಾಡಿದಾಗಲೆಲ್ಲಾ ಹೋಗಲು ಆಗೋದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರೈತರನ್ನು ತಾವೇಕೆ ಭೇಟಿ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ನನಗೆ ಹೇಳಿದರೆ ನಾನು ಭೇಟಿ ಮಾಡಲು ಹೋಗುತ್ತೇನೆ. ಅವರು ಸುಮ್ಮನೆ ಪ್ರತಿಭಟನೆ ಮಾಡಿದಾಗಲೆಲ್ಲಾ ಹೋಗಲು ಆಗುವುದಿಲ್ಲ ಎಂದರು.
ಓದಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಹಿನ್ನೆಲೆ: ಮುಂದಿನ ನಡೆ ಬಗ್ಗೆ ಸಿಎಲ್ಪಿ ಸಭೆಯಲ್ಲಿ ಚರ್ಚೆ
ಈಗಾಗಲೇ ಸಚಿವರಾದ ಸುರೇಶ್ ಕುಮಾರ್ ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿದ್ದಾರೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ವಿಧೇಯಕ ಅಂಗೀಕಾರವಾಗಿದೆ. ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ. ರೈತರು ಚರ್ಚೆಗೆ ಬರಬೇಕೆಂದಿದ್ದರೆ, ಅವರ ಬಳಿ ಚರ್ಚೆಗೆ ನಾವೂ ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನಾನಿರತ ರೈತ ಸಂಘಟನೆಗಳಿಗೆ ಕಾಂಗ್ರೆಸ್, ಬೇರೆ ಬೇರೆ ಪಕ್ಷಗಳು ಬೆಂಬಲ ಕೊಡುತ್ತಿವೆ. ರೈತರ ಹೋರಾಟ ರಾಜಕೀಯ ಪ್ರೇರಿತವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.