ETV Bharat / state

ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ: ನೂತನ‌ ಸಚಿವ ಬಿ.ಸಿ. ಪಾಟೀಲ್

ಮತ್ತೆ ಕೃಷಿ ಖಾತೆ ಕೊಟ್ಟರೂ ಸಂತೋಷ. ಇಲಾಖೆಯಲ್ಲಿ ಈಗಾಗಲೇ ಹಲವು ಪ್ರಗತಿಪರ ರೈತಪರ ಕೆಲಸಗಳನ್ನು ಮಾಡಿದ್ದು ಇನ್ನೊಂದಿಷ್ಟು ಸಾಧನೆ ಮಾಡಬೇಕಿದೆ. ಅದೇನೇ ಇರಲಿ, ಯಾವುದೇ ಖಾತೆ ಕೊಟ್ಟರೂ ಶ್ರದ್ಧೆ, ನಿಷ್ಠೆಯಿಂದ ನಿಭಾಯಿಸುತ್ತೇನೆಂಬ ಭರವಸೆಯಿದೆ ಎಂದು ನೂತನ‌ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

bc-patil
ನೂತನ‌ ಸಚಿವ ಬಿ.ಸಿ.ಪಾಟೀಲ್
author img

By

Published : Aug 5, 2021, 12:03 PM IST

Updated : Aug 5, 2021, 12:10 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನೂತನ‌ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಆರ್‌ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಬಿ.ಸಿ. ಪಾಟೀಲ್ ಭೇಟಿ ನೀಡಿದ್ದು, ಸಂಪುಟದಲ್ಲಿ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಕೃಷಿ ಖಾತೆ ಕೊಟ್ಟರೂ ಸಂತೋಷ. ಇಲಾಖೆಯಲ್ಲಿ ಈಗಾಗಲೇ ಹಲವು ಪ್ರಗತಿಪರ ರೈತಪರ ಕೆಲಸಗಳನ್ನು ಮಾಡಿದ್ದು ಇನ್ನೊಂದಿಷ್ಟು ಸಾಧನೆ ಮಾಡಬೇಕಿದೆ. ಅದೇನೇ ಇರಲಿ ಯಾವುದೇ ಖಾತೆ ಕೊಟ್ಟರೂ ಶ್ರದ್ಧೆ, ನಿಷ್ಠೆಯಿಂದ ನಿಭಾಯಿಸುತ್ತೇನೆಂಬ ಭರವಸೆಯಿದೆ. ಸದ್ಯಕ್ಕೆ ಇಂತಹದ್ದೇ ಖಾತೆ ಎಂದು ನಿಗದಿಯಾಗಿಲ್ಲ. ಯಾವುದೇ ಇಲಾಖೆ ಕೊಟ್ಟರೂ ರಾಜ್ಯದ ಪ್ರಗತಿಗಾಗಿ ಕೆಲಸ ಮಾಡುತ್ತೇನೆ ಎಂದರು.

ನೂತನ‌ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ

ಹಾವೇರಿ ಜಿಲ್ಲೆಯ ವಿಧಾನ ಪರಿಷತ್​ ಸದಸ್ಯ ಆರ್.ಶಂಕರ್‌ಗೆ ಸಚಿವ ಸ್ಥಾನ ನೀಡದ ಬಗ್ಗೆ ಯಾವುದೇ ಬೇಸರವಿಲ್ಲ. ಅದರಂತೆ ಪಕ್ಷದಲ್ಲಿ ಯಾವುದೇ ಅಸಮಾಧಾನವೂ ಇಲ್ಲ. ಏನೇ ಇದ್ದರೂ ವರಿಷ್ಠರು ಅದೆಲ್ಲವನ್ನೂ ಸರಿಪಡಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಬಿ ಸಿ ಪಾಟೀಲ್​ ಹೇಳಿದ್ರು.

Last Updated : Aug 5, 2021, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.