ETV Bharat / state

ಎಸ್ಐಟಿ ತನಿಖೆಯ ಬೆಳವಣಿಗೆ ನೋಡಿ ಎಫ್ಐಆರ್ ದಾಖಲು: ಬಸವರಾಜ ಬೊಮ್ಮಾಯಿ - ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ

ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣದ ತನಿಖೆ ಕುರಿತಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು. ಈ ವೇಳೆ ಸಿಡಿ ಪ್ರಕರಣದ ತನಿಖೆ ನಡೆಸಲಿರುವ ಎಸ್ಐಟಿ ಆದಷ್ಟು ಬೇಗ ವರದಿ ನೀಡಲಿದೆ. ಪ್ರಾಥಮಿಕ ತನಿಖೆಯ ಬೆಳವಣಿಗೆ ನೋಡಿ ಅವಶ್ಯಕತೆ ನೋಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಬಸವರಾಜ ಬೊಮ್ಮಾಯಿ
Minister Basavaraj Bommai
author img

By

Published : Mar 11, 2021, 1:15 PM IST

ಬೆಂಗಳೂರು: ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣದ ತನಿಖೆ ನಡೆಸಲಿರುವ ಎಸ್ಐಟಿ ಆದಷ್ಟು ಬೇಗ ವರದಿ ನೀಡಲಿದೆ. ಪ್ರಾಥಮಿಕ ತನಿಖೆಯ ಬೆಳವಣಿಗೆ ನೋಡಿ ಅವಶ್ಯಕತೆ ನೋಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಸಿಡಿ ಹಿಂದೆ ಷಡ್ಯಂತ್ರ ಇದೆ ಎಂದು ಪತ್ರ ಬರೆದಿದ್ದರು. ಹೀಗಾಗಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ಕೊಟ್ಟಿದ್ದೇವೆ. ಇಷ್ಟು ದಿನದಲ್ಲೆ ತನಿಖೆ ಮುಗಿಸಿ ಎಂದು ಸಮಯ ನಿಗದಿ ಮಾಡಲು ಆಗಲ್ಲ. ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿ ಎಂದು ಶೀಘ್ರವಾಗಿ ಕೊಡಿ ಎಂದು ಹೇಳಿದ್ದೇವೆ ಎಂದರು.

ಎಸ್ಐಟಿಯವರು ಸಂಪೂರ್ಣ ತನಿಖೆ ನಡೆಸುತ್ತಾರೆ. ಕಬ್ಬನ್​​​ಪಾರ್ಕ್ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ವಾಪಸ್ ಪಡೆದಿದ್ದು ಎಲ್ಲವನ್ನೂ ಎಸ್ಐಟಿ ನೋಡುತ್ತದೆ. ಪತ್ರದ ಮೇಲೆ ಪ್ರಾಥಮಿಕ ತನಿಖೆ ನಡೆಯುತ್ತದೆ. ತನಿಖೆಯ ಬೆಳವಣಿಗೆ ನೋಡಿ ಅವಶ್ಯಕತೆ ಎನಿಸಿದರೆ ಎಫ್ಐಆರ್ ದಾಖಲಿಸಲಾಗುತ್ತದೆ ಎಂದರು.

ಇದು ನಕಲಿ ಸಿಡಿ ಆದ ಮೇಲೆ ತನಿಖೆ ಏಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಕಲಿ ಸಿಡಿ ಮಾಡಿದವರು ಯಾರು? ಅದರ ಹಿನ್ನೆಲೆ ಯಾರು?ಎಲ್ಲೆಲ್ಲಿ ಆಗಿದೆ ಎಲ್ಲಾ ತನಿಖೆ ಆಗಬೇಕಲ್ಲ ಎಂದು ಎಸ್ಐಟಿ‌ ತನಿಖೆಯನ್ನು ಸಮರ್ಥಿಸಿಕೊಂಡರು.

ಓದಿ: ಗೋಡಂಬಿ ಗಂಟಲಿನಲ್ಲಿ ಸಿಲುಕಿ ಮೂರೂವರೆ ವರ್ಷದ ಮಗು ಸಾವು

ಶರ್ಟ್, ಪ್ಯಾಂಟ್ ಬಿಚ್ಚೋಕ್ಕೆ ಕಾಂಗ್ರೆಸ್​​​ನವರು ಕಾರಣಾನಾ ಎಂಬ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅದೆಲ್ಲ ತನಿಖೆಯಲ್ಲಿ ಗೊತ್ತಾಗುತ್ತದೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಯಲಿದೆ. ಎಲ್ಲವೂ ಗೊತ್ತಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.