ETV Bharat / state

ಕೋವಿಡ್​​ನಿಂದ ಮೃತರಾದ 115 ಕುಟುಂಬಗಳಿಗೆ ಭೈರತಿ ಬಸವರಾಜ್​ ತಲಾ ₹1 ಲಕ್ಷ ಪರಿಹಾರ - Minister Bairathi basavaraj

ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್​​​​ನಿಂದ ಮೃತಪಟ್ಟ ಕುಟುಂಬದ ಸದಸ್ಯರ ನೆರವಿಗಾಗಿ ಸಚಿವ ಭೈರತಿ ಬಸವರಾಜ್ ಅವರ 1 ಲಕ್ಷ ರೂ.ಗಳ ಸಹಾಯ ಮಾಡುವ ಮೂಲಕ ಆರ್ಥಿಕವಾಗಿ‌ ಸಂಕಷ್ಟಕ್ಕೆ ಸಿಲುಕಿದವರ ಜೀವನಕ್ಕೆ ಆಸರೆಯಾಗಿದ್ದಾರೆ‌ ಎಂದರು. ಇನ್ನು, ಕರ್ನಾಟಕ‌ ಜನ ಕೊರೊನಾದಿಂದ ತತ್ತರಿಸುತ್ತಿದ್ದ‌ ಸಮಯದಲ್ಲಿ ಕೇಂದ್ರ ನೆರವಿಗೆ ಬಂದು ಇಂಜೆಕ್ಷನ್ ಮತ್ತು ಆಕ್ಸಿಜನ್ ಪೂರೈಕೆಯನ್ನು ತ್ವರಿತವಾಗಿ ನೀಡುವ ಮೂಲಕ ಜನರ ಪ್ರಾಣ ಉಳಿಸುವ ಕಾರ್ಯ ಮಾಡಿದೆ..

minister-bairathi-basavaraj
ಭೈರತಿ ಬಸವರಾಜ್​ ತಲಾ 1 ಲಕ್ಷ ಪರಿಹಾರ
author img

By

Published : Jun 27, 2021, 7:08 PM IST

ಬೆಂಗಳೂರು : ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಗಳ 115 ಕುಟುಂಬಗಳಿಗೆ ಸಚಿವ ಭೈರತಿ ಬಸವರಾಜ್ ವೈಯಕ್ತಿಕವಾಗಿ ತಲಾ ₹1 ಲಕ್ಷ ಪರಿಹಾರದಂತೆ ಒಟ್ಟು 1 ಕೋಟಿ 15 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. ಕೆಆರ್‌ಪುರ ಸರ್ಕಾರಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸದಾನಂದಗೌಡ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ ಅವರು, ಕೋವಿಡ್ 2ನೇ ಅಲೆ ಲಾಕ್​ಡೌನ್ ಸಂದರ್ಭದಲ್ಲಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಾದ್ಯಂತ 1 ಲಕ್ಷ ದಿನಸಿ ಕಿಟ್ ವಿತರಿಸಿದ್ದು, ಅದೇ ಸಂದರ್ಭದಲ್ಲಿ ಕೆ.ಆರ್.ಪುರ ಕ್ಷೇತ್ರದಲ್ಲಿ ಕೋವಿಡ್​​​ನಿಂದ ಮೃತಪಟ್ಟ ಕುಟುಂಬಗಳಿಗೆ ₹1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಲಾಗಿತ್ತು. ಇದೀಗ ಕೊಟ್ಟ ಮಾತಿನಂತೆ ಮೊದಲ ಹಂತವಾಗಿ 115 ಕುಟುಂಬಗಳಿಗೆ ತಲಾ 1 ಲಕ್ಷದಂತೆ 1 ಕೋಟಿ 15 ಲಕ್ಷ ರೂ.ಗಳನ್ನು ವಿತರಿಸಲಾಗಿದೆ ಎಂದರು.

ಕೋವಿಡ್​​ನಿಂದ ಮೃತರಾದ 115 ಕುಟುಂಬಗಳಿಗೆ ಭೈರತಿ ಬಸವರಾಜ್​ ತಲಾ 1 ಲಕ್ಷ ಪರಿಹಾರ

ಬಳಿಕ ಸಚಿವ ಡಿ.ವಿ ಸದಾನಂದ ಗೌಡ ಮಾತನಾಡಿ, ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್​​​​ನಿಂದ ಮೃತಪಟ್ಟ ಕುಟುಂಬದ ಸದಸ್ಯರ ನೆರವಿಗಾಗಿ ಸಚಿವ ಭೈರತಿ ಬಸವರಾಜ್ ಅವರ 1 ಲಕ್ಷ ರೂ.ಗಳ ಸಹಾಯ ಮಾಡುವ ಮೂಲಕ ಆರ್ಥಿಕವಾಗಿ‌ ಸಂಕಷ್ಟಕ್ಕೆ ಸಿಲುಕಿದವರ ಜೀವನಕ್ಕೆ ಆಸರೆಯಾಗಿದ್ದಾರೆ‌ ಎಂದರು. ಇನ್ನು, ಕರ್ನಾಟಕ‌ ಜನ ಕೊರೊನಾದಿಂದ ತತ್ತರಿಸುತ್ತಿದ್ದ‌ ಸಮಯದಲ್ಲಿ ಕೇಂದ್ರ ನೆರವಿಗೆ ಬಂದು ಇಂಜೆಕ್ಷನ್ ಮತ್ತು ಆಕ್ಸಿಜನ್ ಪೂರೈಕೆಯನ್ನು ತ್ವರಿತವಾಗಿ ನೀಡುವ ಮೂಲಕ ಜನರ ಪ್ರಾಣ ಉಳಿಸುವ ಕಾರ್ಯ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ‌ ಸಚಿವ ಆರ್ .ಅಶೋಕ್, ಸಚಿವ ಅರವಿಂದ ಲಿಂಬಾವಳಿ, ಎಸ್.ಟಿ ಸೋಮಶೇಖರ್ ಮತ್ತಿತರ ಮುಖಂಡರುಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಸುರೇಶ್ ಕುಮಾರ್ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಪ್ರಕಟ ಸಾಧ್ಯತೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.